ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವಕರ ಐಕಾನ್. ತಂದೆ ರಾಜಕುಮಾರ್ ಅವರ ಹಾಗೆಯೇ ಒಳ್ಳೆಯ ಹೃದಯವಂತ , ಇತರರನ್ನು ಪ್ರೋತ್ಸಾಹ ನೀಡಿ ಬೆಳೆಸುವ ಗುಣ ಒಳ್ಳೆಯ ವಿಷಯಕ್ಕೆ ಸದಾ ಪ್ರೋತ್ಸಾಹ ನೀಡುವ ದೊಡ್ಮನೆ ಹುಡುಗ. ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯನ್ನು ಮೊದಲೇ ಪ್ರೀತಿಸುವ ವಿಷಯವನ್ನೂ ಮನೆಯಲ್ಲಿ ಹೇಳಲು ಬಹಳ ಕಷ್ಟ ಪಟ್ಟಿದ್ದರಂತೆ. ನಂತರ ಧೈರ್ಯ ಮಾಡಿ ಮನೆಯಲ್ಲಿ ತಂದೆ ರಾಜಕುಮಾರ್ ಅವರ ಬಳಿ ಹೇಳಿ ಹೇಳಿದರಂತೆ. ಅದಕ್ಕೆ ರಾಜಕುಮಾರ್ ಅವರು ಆಯಿತು ನಿನ್ನ ತಾಯಿಯ ಬಳಿ ಹೇಳು ಎಂದು ಹೇಳಿದ್ದರಂತೆ. ನಂತರ ಪುನೀತ್ ರಾಜಕುಮಾರ್ ಅವರು ತಮ್ಮ ತಾಯಿ ಪಾರ್ವತಮ್ಮ ಅವರ ಬಳಿ ಕೂಡಾ ಹೇಳಿ ಅವರೂ ಸಹ ಒಪ್ಪಿಗೆ ಸೂಚಿಸಿದ್ದ ಮೇಲೆ ಎಲ್ಲರ ಒಪಿಗೆ ಪಡೆದು, ಡಿಸೆಂಬರ್ ಒಂದು 1999 ರಲ್ಲಿ ಅಶ್ವಿನಿ ಅವರ ಜೊತೆಗೆ ವಿವಾಹ ಆದರು.

ಪುನೀತ್ ರಾಜಕುಮಾರ್ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು. ಮೊದಲ ಮಗಳ ಹೆಸರು ಧೃತಿ. ಎರಡನೇ ಮಗಳ ಹೆಸರು ವಂದಿತ. ದೊಡ್ಡ ಸ್ಟಾರ್ ನಟರ ಮಕ್ಕಳು ಎನ್ನುವ ಮನೋಭಾವ ಇಲ್ಲದೆಯೇ ತುಂಬಾ ಶಿಸ್ತಿನಿಂದ ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಪುನೀತ್ ಮತ್ತು ಅಶ್ವಿನಿ ಅವರು ಬೆಳೆಸುತ್ತಾ ಇದ್ದಾರೆ. ಪುನೀತ್ ರಾಜಕುಮಾರ್ ಅವರ ಇಬ್ಬರೂ ಹೆಣ್ಣು ಮಕ್ಕಳು ಕ್ಯಾಮೆರಾ ಕಣ್ಣಿಗೆ ಬೀಳುವುದು ತುಂಬಾ ಅಪರೂಪ ತಮ್ಮ ತಾಯಿ ಅಶ್ವಿನಿ ಅವರ ಹಾಗೇ. ಓದಿನ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಇನ್ನು ದೃತಿ ಮತ್ತು ವಂದಿತ ಗೆ ರಾಘವೇಂದ್ರ ರಾಜ್ ಕುಮಾರ್ ಅವರ ಅಣ್ಣಾ ಮಗ ವಿನಯ್ ರಾಜಕುಮಾರ್ ಅಂದರೆ ತುಂಬಾ ಒಲವು ಪ್ರೀತಿ ಎಂದು ಹೇಳಲಾಗುತ್ತದೆ. ಇನ್ನು ಪುನೀತ್ ರಾಜಕುಮಾರ್ ಅವರು ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟರೆ ಅಶ್ವಿನಿ ಅವರು ಮನೆಯ, ಮಕ್ಕಳ ಜವಾಬ್ಧಾರಿ ಜೊತೆಗೆ ತಮ್ಮ ಪತಿಗೂ ಕೂಡಾ ಸದಾಕಾಲ ಪ್ರೋತ್ಸಾಹ ನೀಡುತ್ತಾರೆ. ಪುನೀತ್ ರಾಜಕುಮಾರ್ ಅವರು PRK ಪ್ರೊಡಕ್ಷನ್ ಆರಂಭಿಸಿದ್ದು, ಹೊಸ ಕನಸನ್ನು ಹೊತ್ತು ಬಂದ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ವಿಭಿನ್ನ ರೀತಿಯ ಸಿನಿಮಾಗಳನ್ನು ಸಹ ಹೊರತರುತ್ತಾ ಇದ್ದಾರೆ. ಪುನೀತ್ ರಾಜಕುಮಾರ್ ಅವರ ಇನ್ನೊಂದು ದೊಡ್ಡ ಗುಣ ಎಂದರೆ, ಒಂದು ಕೈಯ್ಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ತಿಳಿಯಬಾರದು ಎನ್ನುವ ಹಾಗೆ ತಾವು ಒಬ್ಬರಿಗೆ ಮಾಡಿದ ಸಹಾಯವನ್ನು ಬೇರೆ ಎಲ್ಲೂ ಪ್ರಚಾರ ಆಗದೇ ಇರುವ ಹಾಗೆ ಸಹಾಯ ಮಾಡುತ್ತಾರೆ.

ಸಿನಿಮಾನೇ ಬೇಡ ಅನ್ನುತ್ತಿದ್ದ ಪುನೀತ್ ಬಾಲ್ಯದಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿದ್ದರು ಸಹ ಕೊನೆಗೆ ನಾಯಕ ನಟನಾಗಿ ಅಪ್ಪು ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟು , ಸೇನಶೇಶನ್ ಹುಟ್ಟಿಸಿ ಇಂದು ಕನ್ನಡದ ಒಬ್ಬ ಟಾಪ್ ನಟನಾಗಿ ಬೆಳೆದು ನಿಂತಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಿನಿಮಾ ಎಂದರೆ ನಿರ್ಮಾಪಕರು ಸಹ ಕಣ್ಣು ಮುಚ್ಚಿಕೊಂಡು ಹಣ ಹೂಡಿಕೆ ಮಾಡುತ್ತಾರೆ. ಕಾರಣ ಯಾವತ್ತೂ ಕೂಡಾ ಪುನೀತ್ ರಾಜಕುಮಾರ್ ಅವರ ಚಿತ್ರಕ್ಕೆ ಹಣ ಹಾಕಿದರೆ ಲಾಭವೇ ಹೊರತು ನಷ್ಟ ಆಗಿಲ್ಲ. ನಿರ್ಮಾಪಕರು ಹಾಕಿದ ಹಣಕ್ಕೆ ವಾಪಾಸ್ ಹಣ ಬಂದೆ ಬರುತ್ತೆ ಎಂದು ನ್ನಿಕೆ ಉಳಿಸಿಕೊಂಡಿರುವ ನಟರು ಭಾರತೀಯ ಚಿತ್ರರಂಗದಲ್ಲಿ ತುಂಬಾನೇ ಕಡಿಮೆ. ಅಂತವರಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡಾ ಒಬ್ಬರು.

By

Leave a Reply

Your email address will not be published. Required fields are marked *