ತಮ್ಮನ್ನು ತುಂಬಾ ಪ್ರೀತಿಸುತ್ತಿದ್ದ ಪತಿಯನ್ನು ಕಳೆದುಕೊಂಡು ದುಃಖದಲ್ಲಿ ಇದ್ದ ನಟಿ ಮೇಘನಾ ರಾಜ್ ಅವರು ಚಿರು ತಿಂಗಳ ಪುಣ್ಯ ತಿಥಿಯ ದಿನ ಕಾಣಿಸಿಕೊಂಡಿದ್ದರು. ಇದೀಗ ಏಳು ತಿಂಗಳ ತುಂಬು ಗರ್ಭಿಣಿ ಮೇಘನಾ ರಾಜ್ ಅವರು ತಿಂಗಳ ಬಳಿಕ ಮತ್ತೊಮ್ಮೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗರ್ಭಿಣಿ ಮೇಘನಾ ಈಗ ಹೇಗಿದ್ದಾರೆ? ಆಸ್ಪತ್ರೆಯಲ್ಲಿ ಡಾಕ್ಟರ್ ಮಗುವಿನ ಬಗ್ಗೆ ಮಗುವಿನ ಆರೋಗ್ಯದ ಬಗ್ಗೆ ಎನು ಹೇಳಿದ್ದಾರೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ತುಂಬಾ ವರ್ಷಗಳ ಕಾಲ ಪ್ರೀತಿಸಿ ನಂತರ ಮದುವೆ ಆದ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ. ಇವರಿಬ್ಬರ ಅನ್ಯೋನ್ಯತೆ, ಪ್ರೀತಿಯನ್ನು ನೋಡಿ ಆ ವಿಧಿಗೂ ಕೂಡಾ ಸಹಿಸಿಕೊಳ್ಳಲು ಆಗದೇ ಚಿರು ಅವರಿಗೆ ಅಕಾಲಿಕ ಮರಣವಾನ್ನು ತಂದೊಡ್ಡಿ, ಅತಿಯಾಗಿ ಪ್ರೀತಿಸಿ ಒಂದಾದ ಚಿರು ಹಾಗೂ ಮೇಘನಾ ಇಬ್ಬರನ್ನೂ ಬೇರೆ ಮಾಡಿಬಿಟ್ಟ. ಚಿರು ಪ್ರತಿರೂಪ ಮೇಘನಾ ಅವರ ಒಡಲಲ್ಲಿ ಬೆಳೆಯುತ್ತಾ ಇರುವ ವಿಷಯ ಎಲ್ಲರಿಗೂ ತಿಳಿದಿದ್ದೇ. ಆಗಾಗ ಡಾಕ್ಟರ್ ನೀಡುವ ಸಲಹೆಯನ್ನು ಪಡೆದುಕೊಂಡು ಮೇಘನಾ ಅವರು ತಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯದ ಬಗ್ಗೆಯೂ ಕೂಡಾ ಕಾಳಜಿ ವಹಿಸುತ್ತಾ ಇದ್ದಾರೆ. ಏಳು ತಿಂಗಳ ಗರ್ಭಿಣಿ ಆಗಿರುವ ಮೇಘನಾ ಅವರಿಗೆ ಡಾಕ್ಟರ್ ಅಕ್ಟೋಬರ್ ತಿಂಗಳಿನಲ್ಲಿ ಮಗು ಬರುವ ಸೂಚನೆಯನ್ನು ನೀಡಿದ್ದಾರಂತೆ.

ಆದರೆ ಇನ್ನೂ ಕೂಡಾ ದಿನಾಂಕವನ್ನು ಮಾತ್ರ ನಿಗದಿ ಪಡಿಸಿಲ್ಲವಂತೆ. ಸಧ್ಯ ಮೇಘನಾ ರಾಜ್ ಅವರು ತಮ್ಮ ತಾಯಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾ ಇದ್ದಾರೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮೇಘನಾ ಅವರಿಗೆ ಸೀಮಂತ ಶಾಸ್ತ್ರವನ್ನು ಕೂಡಾ ಶಾಸ್ತ್ರೋಕ್ತವಾಗಿ ಸರಳವಾಗಿ ಮಾಡುತ್ತಾರಂತೆ. ಇಂತಹ ಸಂದರ್ಭದಲ್ಲಿ ತನ್ನ ಪತಿ ತನ್ನ ಜೊತೆಗೆ ಇರಲಿ ಅಥವಾ ಇರಬೇಕು ಎನ್ನುವುದು ಪ್ರತಿಯೊಂದೂ ಹೆಣ್ಣಿನ ಮನಸಲ್ಲಿ ಇರುವ ಸಹಜ ಆಸೆ ಬಯಕೆ. ಆದರೆ ಚಿರು ಮಾತ್ರ ಮೇಘನಾ ಅವರನ್ನು ಒಬ್ಬಂಟಿಯಾಗಿ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಮೇಘನಾ ಅವರ ಒಡಲಲ್ಲಿ ಅವರ ಮಗುವಾಗಿ ಚಿರು ಮತ್ತೆ ಹುಟ್ಟಿ ಬರಲಿ ಎಂದು ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!