ಪುನೀತ್ ಅವರ ಗಂಧದಗುಡಿ ಟೀಸರ್ ನೋಡಿದ ಅಭಿಮಾನಿಗಳು ಫುಲ್ ಫಿದಾ, ಏನ್ ಅಂದ್ರು ಗೊತ್ತಾ..

0 1

ಪುನೀತ್ ರಾಜಕುಮಾರ್ ಯಾರು ಮರೆಯಲಾರದಂತಹ ಒಬ್ಬ ಅದ್ಭುತ ಮಹಾನ್ ವ್ಯಕ್ತಿ. ಅವರು ನಮ್ಮ ನಡುವೆ ಇಲ್ಲ ಎನ್ನುವ ಬೇಸರ ಎಲ್ಲರನ್ನು ಸದಾಕಾಲ ಕಾಡುತ್ತಿರುತ್ತದೆ. ಪುನೀತ್ ರಾಜಕುಮಾರ್ ಅವರು ತಮ್ಮ ಕನಸಿನ ಕೂಸಾದ ಅಂತಹ ಗಂಧದಗುಡಿ ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕಾಗಿ ಕರೋನ ಸಮಯದಲ್ಲಿ ಕರ್ನಾಟಕದ ಕೆಲವೊಂದು ಸುಂದರವಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿದ್ದಾರೆ ಅವುಗಳನ್ನ ಸಾಕ್ಷ್ಯಚಿತ್ರವಾಗಿ ಮಾಡುವ ಆಸೆಯನ್ನು ಪುನೀತ್ ರಾಜಕುಮಾರ್ ಅವರು ಹೊಂದಿದ್ದರು.

ಪುನೀತ್ ರಾಜಕುಮಾರ್ ಅವರು ಹೊಸಪೇಟೆಗೆ ಯಾವಾಗಲೂ ಭೇಟಿ ನೀಡುತ್ತಿದ್ದರು. ಈ ಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್ ರಾಜಕುಮಾರ್ ಅವರು ಹೊಸಪೇಟೆಗೆ ಹೋದಂತಹ ಸಂದರ್ಭದಲ್ಲಿ ಒಂದು ದಿನ ಹೊಸಪೇಟೆಯಲ್ಲಿ ಒಬ್ಬ ಹುಡುಗ ಕುರಿ ಕಾಯುತ್ತಿರುವಾಗ ಅದರಲ್ಲಿ ನಾಲ್ಕು ಕುರಿಗಳು ಕಾಣೆಯಾಗುತ್ತವೆ ಆತ ಗಾಬರಿ ಗಾಬರಿಯಾಗಿ ಹೋಗುತ್ತಿರುತ್ತಾನೆ

ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ಅವನನ್ನು ಕರೆದು ಏನಾಯ್ತು ಎಂದು ಕೇಳಿದಾಗ ಆ ಹುಡುಗ ಕುರಿ ಕಳೆದಿರುವ ವಿಷಯವನ್ನು ತಿಳಿಸುತ್ತಾನೆ ನಂತರ ಪುನೀತ್ ರಾಜಕುಮಾರ್ ಅವರು ಅವರ ಹಟ್ಟಿಗೆ ಭೇಟಿ ನೀಡಿ ಅಲ್ಲಿ ಕುಳಿತುಕೊಂಡು ಅಂಬಲಿಯನ್ನು ಸೇವಿಸಿ ಕಳೆದುಹೋದ ಕುರಿಗಳ ಮೌಲ್ಯಕ್ಕಿಂತ ಹೆಚ್ಚಿನ ಹಣವನ್ನ ಅವರಿಗೆ ನೀಡಿ ಅವರನ್ನು ಸಮಾಧಾನಪಡಿಸಿ ಬರುತ್ತಾರೆ.

ಅಲ್ಲಿನ ಸ್ಥಳೀಯ ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ಹೋದಾಗ ಅಲ್ಲಿನ ಜನರೊಂದಿಗೆ ಬರೆಯುತ್ತಾರೆ ಅವರೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಗಂಧದಗುಡಿ ವೈಲ್ಡ್ ಡಾಕ್ಯುಮೆಂಟರಿ ಮಾಡುವ ಸಮಯದಲ್ಲಿ ಹಲವಾರು ಸಾಹಸ ದೃಶ್ಯಗಳನ್ನು ಕೂಡ ಮಾಡಿದ್ದರು. ಡಿಸೆಂಬರ್ ಆರು ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಟೈಟಲ್ ಟ್ರೀಸರ್ ನ್ನು ಪಿ ಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ

ಪುನೀತ್ ಅವರು ಇದರಲ್ಲಿ ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಜಗತ್ತನ್ನು ಅತ್ಯದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ರೀಸರ್ ಈಗ ತುಂಬಾ ಸುದ್ದಿಯನ್ನ ಮಾಡುತ್ತಿದೆ. ಎರಡು ಸಾವಿರದ ಇಪ್ಪತ್ತೆರಡರಲ್ಲಿ ಈ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. ಇದು ಪುನೀತ್ ರಾಜಕುಮಾರ್ ಅವರ ವಿಭಿನ್ನ ಪ್ರಯತ್ನವಾಗಿದ್ದು ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಗಂಧದಗುಡಿ ಟೀಸರ್ ನೋಡಿ ಪ್ಯಾನ್ಸ್ ಫಿಧಾ: ಹೌದು ಅಪ್ಪು ಇಲ್ಲದಿದ್ದರೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಮುಂದೆ ಕೂಡ ಆಗೋದಿಲ್ಲ ಕೊಪ್ಪಳದಲ್ಲಿ ಅಂದು ಕುರಿ ಕಾಯೋ ಹುಡುಗನ ಜೊತೆ ಪುನೀತ್ ಕಳದಿದ್ದ ದಿನಗಳ ಬಗ್ಗೆ ಮಾತನಾಡಿರೋ ಅಭಿಮಾನಿಗಳು. ಅಂದಿನ ಘಟನೆ ಬಗ್ಗೆ ಮಾತನಾಡಿರೋ ಅಭಿಮಾನಿಗಳು. ಗಂಧದ ಗುಡಿ ಟೀಸರ್ ನೋಡಿ ಮೆಚ್ಚಿಕೊಂಡಿರೋ ಅಭಿಮಾನಿಗಳು. ಜೊತೆಗೆ ಹಾಡಿನ ಮೂಲಕ ನಮನ ಸಲ್ಲಿಸಿದ್ರು

Leave A Reply

Your email address will not be published.