ಬಡತನದಲ್ಲಿ ಹುಟ್ಟಿ ಪತ್ರಿಕೋದ್ಯಮದಲ್ಲಿ ತನ್ನದೆ ಆದ ಹೆಸರನ್ನು ಗಳಿಸಿರುವ ರಂಗನಾಥ್ ಅವರ ಜೀವನ ಇಂದಿನ ಯುವಕರಿಗೆ ಮಾದರಿಯಾಗಿದೆ. ರಂಗಣ್ಣ ಅವರ ಮಗಳು ಪಯಸ್ವಿನಿ ಅವರ ಮದುವೆಯು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿತು. ಮದುವೆ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪತ್ರಿಕೋದ್ಯಮದಲ್ಲಿ ಹಾಗೂ ಟಿವಿ ಮಾಧ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಅಲ್ಲದೆ ಪಬ್ಲಿಕ್ ಟಿವಿ ರಂಗಣ್ಣ ಎಂದೆ ಖ್ಯಾತಿ ಪಡೆದ ರಂಗನಾಥ್ ಅವರ ಮಗಳ ಮದುವೆ ಎರಡು ದಿನಗಳ ಹಿಂದೆ ಅದ್ದೂರಿಯಾಗಿ ನೆರವೇರಿತು. ರಂಗಣ್ಣ ಅವರಿಗೆ ಅವರ ಮಗಳೆಂದರೆ ಬಹಳ ಪ್ರೀತಿ. ಪಬ್ಲಿಕ್ ಟಿವಿ ಸ್ಥಾಪಕ ರಂಗಣ್ಣ ಅವರ ಮಗಳು ಪಯಸ್ವಿನಿ ಹಾಗೂ ನಿಖಿಲ್ ದಂಪತಿಯ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

ಕೆಲವು ದಿನಗಳ ಹಿಂದೆ ರಂಗಣ್ಣ ಅವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ರಾಜಕಾರಣಿಗಳಿಗೆ, ಮಠಾಧೀಶರಿಗೆ, ಚಿತ್ರರಂಗದ ಸೆಲೆಬ್ರಿಟಿಗಳಿಗೆ ಕೊಡಲಾಗಿತ್ತು ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಂಗಣ್ಣ ಅವರ ಮಗಳ ಮದುವೆಗೆ ರಾಜಕಾರಣಿಗಳು, ಮಠಾಧೀಶರು, ಸೆಲೆಬ್ರಿಟಿಗಳು ಆಗಮಿಸಿ ನೂತನ ವಧು-ವರರಿಗೆ ಆಶೀರ್ವದಿಸಿದ್ದಾರೆ. ಬೆಂಗಳೂರಿನಲ್ಲಿ ರಂಗಣ್ಣ ಅವರ ಮಗಳ ಮದುವೆ ಅದ್ದೂರಿಯಾಗಿ ನೆರವೇರಿತು. ರಂಗಣ್ಣ ಅವರ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮವನ್ನು ಡಿಸೆಂಬರ್ 4ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದೆ. ಆರತಕ್ಷತೆ ಕಾರ್ಯಕ್ರಮಕ್ಕೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಠಾಧೀಶರು, ರಾಜಕಾರಣಿಗಳು ಬಂದು ಆಶೀರ್ವದಿಸಲಿದ್ದಾರೆ.

ಮದುವೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ರಚಿತಾರಾಮ್ ಸೇರಿದಂತೆ ಅನೇಕ ಕಲಾವಿದರು ಆಗಮಿಸಿದ್ದರು. ದರ್ಶನ್ ಯಶ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ನೂತನ ವಧು-ವರರಿಗೆ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು. ಮದುವೆಯಲ್ಲಿ ರಂಗಣ್ಣ ಅವರು ಅಪ್ಪು ಅವರನ್ನು ನೆನೆಸಿಕೊಂಡರು. ರಂಗಣ್ಣ ಅವರ ಮಗಳು ಹಾಗೂ ಅಳಿಯನ ವೈವಾಹಿಕ ಜೀವನ ಸಂತೋಷದಿಂದ ಕೂಡಿರಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!