ರೇಮಂಡ್ ಕಂಪನಿ ಕಟ್ಟಿದ ಈ ವ್ಯಕ್ತಿ ಇಂದು ಬೀದಿಯಲ್ಲಿ ಅಲೆದಾಡುತ್ತಿರೋದು ಯಾಕೆ ಗೊತ್ತೇ, ನಿಜಕ್ಕೂ ಎಲ್ಲ ತಂದೆ ಮಕ್ಕಳು ನೋಡಲೆಬೇಕಾದ ಸ್ಟೋರಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮಕ್ಕಳ ಮೇಲೆ ಪ್ರೀತಿ ಇರಬೇಕು ಆದರೆ ವ್ಯಾಮೋಹ ಇರಬಾರದು ಎನ್ನುವುದನ್ನು ನೀವೆಲ್ಲರೂ ಕೇಳಿರುತ್ತೀರಿ ಉದಾಹರಣೆಗೆ ಪುತ್ರ ವ್ಯಾಮೋಹದಿಂದ ಮಹಾಭಾರತದ ಧೃತರಾಷ್ಟ್ರ ತನ್ನೆಲ್ಲ ಮಕ್ಕಳನ್ನು ಕಳೆದುಕೊಂಡ ಕಥೆ ಎಲ್ಲರಿಗೂ ಗೊತ್ತಿದೆ. ನಾವು ನಿಮಗೆ ಪುತ್ರನ ಮೇಲಿನ ವಿಪರೀತ ವ್ಯಾಮೋಹದಿಂದ ಸಾವಿರಾರು ಕೋಟಿ ಆಸ್ತಿಯನ್ನು ಗಳಿಸಿ ಮಗನ ಹೆಸರಿಗೆ ಬರೆದು ಬಳಿಕ ಮಗನೇ ಅಪ್ಪನನ್ನು ಹೊರಹಾಕಿ ಅನಾಥನನ್ನಾಗಿ ಮಾಡಿದ ನಿಜ ಜೀವನದ ಕಥೆಯನ್ನು ನಿಮಗೆ ತಿಳಿಸಿಕೊಡುತ್ತೇವೆ.

ಮೇಲೆ ಹೇಳಿದ ಹಾಗೆ ಅನಾಥವಾದ ತಂದೆಯ ಹೆಸರು ವಿಜಯಪತ್ ಸಿಂಘಾನಿಯಾ. ರೇಮಂಡ್ಸ್ ದ ಕಂಪ್ಲೀಟ್ ಮ್ಯಾನ್ ಎನ್ನುವ ಜನಪ್ರಿಯ ಜಾಹೀರಾತು ನಿಮಗೆಲ್ಲ ಗೊತ್ತಿರಬಹುದು. ಒಂದು ಕಾಲದಲ್ಲಿ ಶ್ರೀಮಂತರು ಧರಿಸುವ ಉತ್ತಮ ಗುಣಮಟ್ಟದ ಬಟ್ಟೆ ಎಂದು ಹೇಳಲಾಗುತ್ತಿತ್ತು. ಅಷ್ಟರಮಟ್ಟಿಗೆ ರೇಮಂಡ್ಸ್ ಬಟ್ಟೆಯನ್ನು ಹೆಸರುವಾಸಿ ಮಾಡಿದ್ದು ಇದೆ ವಿಜಯಪತ್ ಸಿಂಘಾನಿಯಾ.

ಇವರಿಗೆ ಮಧುಪತಿ ಮತ್ತು ಗೌತಮ್ ಸಿಂಘಾನಿಯಾ ಎನ್ನುವ ಇಬ್ಬರು ಪುತ್ರರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಟ್ಟೆಗಳಲ್ಲಿ ಅನೇಕ ಬ್ರಾಂಡ್ಗಳು ಬಂದಿದೆ ಆದರೂ ಕೂಡ ಸುಮಾರು ಐವತ್ತು ವರ್ಷಗಳಿಂದ ಮೆರೆಯುತ್ತಿರುವ ಏಕಮೇವ ಅದ್ವಿತೀಯ ಬ್ರಾಂಡ್ ಎಂದರೇ ಅದು ರೇಮಂಡ್ಸ್ ಭಾರತೀಯ ಬ್ರಾಂಡ್.

ಇದರ ಸೃಷ್ಟಿಕರ್ತ ವಿಜಯಪತ್ ಸಿಂಘಾನಿಯಾ ಇವತ್ತು ತಮ್ಮ ಪುತ್ರನ ಮೇಲಿದ್ದ ವ್ಯಾಮೋಹದಿಂದಾಗಿ ಒಂದು ಬಾಡಿಗೆ ಮನೆಯಲ್ಲಿ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು. ಸಾವಿರದ ಒಂಬೈನೂರ ಅರವತ್ತರಲ್ಲಿ ಹದಿನಾರು ಅಂತಸ್ತಿನ ಮನೆಯನ್ನು ಕಟ್ಟಿದ ವಿಜಯಪತ್ ಸಿಂಘಾನಿಯಾ ಅವರು ಎರಡು ಸಾವಿರದ ಏಳರಲ್ಲಿ ಅದೇ ಮನೆಯನ್ನು ಕೆಡವಿ ಮೂವತ್ತಾರು ಅಂತಸ್ತಿನ ಬರೋಬ್ಬರಿ ಮನೆಯನ್ನು ಕಟ್ಟಿದರು.

ಇದಾದಮೇಲೆ ತಮ್ಮ ಕಿರಿಯ ಮಗ ಗೌತಮ್ ಸಿಂಘಾನಿಯಾ ಹೆಸರಿಗೆ ಮನೆ ಆಸ್ತಿಯನ್ನು ಬರೆದುಕೊಟ್ಟರು. ಅಷ್ಟಕ್ಕೆ ನಿಲ್ಲದೆ ರೇಮಂಡ್ಸ್ ಕಂಪನಿಯ ತಮ್ಮ ಹೆಸರಿನಲ್ಲಿದ್ದ ಮೂವತ್ತೇಳು.ಒಂದು ಏಳರಷ್ಟು ಶೇರನ್ನು ಕಿರಿಯ ಮಗ ಗೌತಮ್ ಸಿಂಘಾನಿಯಾ ಹೆಸರಿಗೆ ಉಡುಗೊರೆಯಾಗಿ ವರ್ಗಾಯಿಸುತ್ತಾರೆ. ಯಾವಾಗ ಆಸ್ತಿಯೆಲ್ಲ ತನ್ನ ಕೈಸೇರಿತು ಆಗ ಗೌತಮ್ ಸಿಂಘಾನಿಯಾ ಅವರ ಅಸಲಿ ಮುಖ ಕೂಡ ಬಯಲಾಗುತ್ತಾ ಬಂತು.

ಮುಂದೆ ತನಗೆ ಇಷ್ಟೆಲ್ಲ ಮಾಡಿದ ತಂದೆಯನ್ನು ಮನೆಯಿಂದ ಹೊರ ಹಾಕುತ್ತಾರೆ. ಹೀಗೆ ರೇಮಂಡ್ಸ್ ಎನ್ನುವ ದೊಡ್ಡ ಬ್ರ್ಯಾಂಡನ್ನು ಸೃಷ್ಟಿ ಮಾಡುವುದಕ್ಕೆ ಹಲವಾರು ವರ್ಷಗಳ ಕಾಲ ಶ್ರಮಪಟ್ಟು ದೊಡ್ಡ ಉದ್ಯಮಿಯಾಗಿ ಹೆಸರು ಯಶಸ್ಸನ್ನು ಕಂಡು ಸಾವಿರಾರು ಕೋಟಿ ಆಸ್ತಿಯ ಒಡೆಯನಾಗಿ ಮೆರೆದಿದ್ದ ವಿಜಯಪತ್ ಸಿಂಘಾನಿಯಾ ತಮ್ಮ ಮಗನ ಅಸಲಿ ಮುಖವನ್ನು ತಿಳಿಯದೆ ಈಗ ಬಡವನಂತೆ ಜೀವನ ಕಳೆಯುತ್ತಿರುವುದು ನಿಜಕ್ಕೂ ವಿಪರ್ಯಾಸ.

ಇತ್ತೀಚಿಗಷ್ಟೇ ವಿಜಯಪತ್ ಸಿಂಘಾನಿಯಾ ಅವರು ಇನ್ ಕಂಪ್ಲೀಟ್ ಲೈಫ್ ಎನ್ನುವ ಶೀರ್ಷಿಕೆಯುಳ್ಳ ತಮ್ಮ ಆತ್ಮಕಥೆಯನ್ನು ಬಿಡುಗಡೆ ಮಾಡಿದ್ದಾರೆ ಅದು ಈಗ ಬಹಳ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯಪತ್ ಸಿಂಘಾನಿಯಾ ರೇಮಂಡ್ಸ್ ಕಂಪನಿಯ ತಮ್ಮ ಹೆಸರಿನಲ್ಲಿದ್ದ ಮೂವತ್ತೇಳು.ಒಂದು ಏಳರಷ್ಟು ಶೇರನ್ನು ಕಿರಿಯ ಮಗ ಗೌತಮ್ ಸಿಂಘಾನಿಯ ಅವರಿಗೆ ಬರೆದುಕೊಟ್ಟಿದ್ದು ತನ್ನ ಜೀವನದ ಬಹುದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಹಾಗೇ ಮುಂದುವರೆದು ಕೆಲವೊಂದು ಸಂದರ್ಭಗಳಲ್ಲಿ ಗೌತಮ್ ನ ನಿಜವಾದ ಮುಖ ಯಾವುದು ಎಂಬುದು ನನಗೆ ಗೊತ್ತಾಗ ಬೇಕಾಗಿತ್ತು ನಾನು ತಿಳಿದುಕೊಳ್ಳಬೇಕಾಗಿತ್ತು ಆದರೆ ಪುತ್ರ ವ್ಯಾಮೋಹದಿಂದ ನನ್ನ ಬುದ್ಧಿ ಮಂಕಾಗಿತ್ತು ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ನನ್ನ ಹಿರಿಯ ಮಗ ಮಧುಪತಿ ಸಹೋದರ ಗೌತಮನಿಗೆ ಇಡೀ ರೇಮಂಡ್ಸ್ ಕಂಪನಿಯನ್ನು ನೀಡಿದ್ದಕ್ಕೆ ಕೋಪ ಮಾಡಿಕೊಂಡಿದ್ದ ಆದರೆ ರೇಮಂಡ್ಸ್ ಕಂಪನಿಯನ್ನ ಮುಂದುವರೆಸುವ ಸಾಮರ್ಥ್ಯ ಮಧುಪತಿಯಲ್ಲಿ ನನಗೆ ಕಾಣಿಸಲಿಲ್ಲ

ಹಾಗಾಗಿ ರೇಮಂಡ್ಸ್ ನ್ನು ಆತನಿಗೆ ಕೊಟ್ಟಿರಲಿಲ್ಲ ಆದರೆ ಆತ ಒಳ್ಳೆಯ ಹುಡುಗ. ಒಬ್ಬ ಮನುಷ್ಯನ ಜೀವನ ಸಂಪೂರ್ಣ ಎನಿಸಿಕೊಳ್ಳುವುದು ಆತನ ಮುಪ್ಪಿನ ಕಾಲದಲ್ಲಿ ಆತನ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದಕ್ಕೆ ಅವಕಾಶ ಸಿಕ್ಕಾಗ ಆದರೆ ಗೌತಮ್ ಎಂತಹ ದುರುಳ ಎಂದರೆ ಆತ ನಾನು ಮೊಮ್ಮಕ್ಕಳೊಡನೆ ಮಾತನಾಡದ ಹಾಗೆ ಮಾಡಿಟ್ಟಿದ್ದಾನೆ. ಅದು ನಿಜಕ್ಕೂ ಅ ಪರಾಧ ಇಂಥವನು ನನ್ನ ಮಗ ಎಂದು ಹೇಳಿಕೊಳ್ಳುವುದಕ್ಕೆ ನಿಜವಾಗಲೂ ನಾಚಿಕೆ ಆಗುತ್ತದೆ. ಅಂತದೆ ರೀತಿಯ ಹಲವಾರು ವಿಚಾರಗಳು ಅವರ ಪುಸ್ತಕದಲ್ಲಿದೆ ಹಾಗಾಗಿ ಸಮಯೋಚಿತ ಎನಿಸಿ ಇನ್ ಕಂಪ್ಲೀಟ್ ಲೈಫ್ ಎನ್ನುವ ಹೆಸರನ್ನು ಇಟ್ಟಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿರುವ ಅಪ್ರತಿಮ ಸಾಧನೆಗಾಗಿ ಪದ್ಮಭೂಷಣ ಪಡೆದಿರುವ ವಿಜಯಪತ್ ಸಿಂಘಾನಿಯಾ ಒಬ್ಬ ಫೈಲೆಟ್ ಕೂಡ ಹೌದು ವಿಮಾನ ಹಾರಾಟ ಅವರ ಫ್ಯಾಷನ್. ತಾನು ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ತಕ್ಕಮಟ್ಟಿಗೆ ಇದ್ದರೂ ಕೂಡ ವಿಮಾನ ಹಾರಾಟ ನನಗೆ ಅತ್ಯಂತ ಪ್ರೀತಿಪಾತ್ರ. ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ತಂದೆತಾಯಿಗಳಿಗೆ ವಿಜಯಪತ್ ಸಿಂಘಾನಿಯಾ ಅವರು ಸಂದೇಶವನ್ನು ಕೊಟ್ಟಿದ್ದಾರೆ

ನೀವು ನಿಮ್ಮ ಮಕ್ಕಳನ್ನು ಪ್ರೀತಿಸಿ ತಪ್ಪಿಲ್ಲ ಆದರೆ ನಿಮ್ಮ ಎಲ್ಲಾ ಆಸ್ತಿಯನ್ನು ನಿಮ್ಮ ಜೀವನದ ಸಂಪಾದನೆಯನ್ನು ನೀವು ಬದುಕಿರುವಾಗಲೇ ನಿಮ್ಮ ಮಕ್ಕಳ ಹೆಸರಿಗೆ ಕೊಟ್ಟು ಬಿಡಬೇಡಿ ನೀವು ಬೀದಿಪಾಲಾಗುತ್ತಿರಿ. ಮಕ್ಕಳಿಗೆ ಆಸ್ತಿ ಕೊಡುವುದೇ ಬೇಡ ಎಂದು ನಾನು ಹೇಳುವುದಿಲ್ಲ ಆದರೆ ಅದನ್ನು ನಿಮ್ಮ ವಿಲ್ ನಲ್ಲಿ ಬರೆದಿಡಿ. ನೀವು ಕಾಲವಾದ ನಂತರ ಅದು ನಿಮ್ಮ ಮಕ್ಕಳಿಗೆ ಸಿಗುವಂತಿರಬೇಕು ಆಗ ಮಾತ್ರ ಮಕ್ಕಳು ಹದ್ದುಬಸ್ತಿನಲ್ಲಿ ಇರುತ್ತಾರೆ ಎಂದು ವಿಜಯಪತ್ ಸಿಂಘಾನಿಯಾ ಅವರು ಹೇಳಿದ್ದಾರೆ.

ಇಂತಹ ಇಳಿವಯಸ್ಸಿನಲ್ಲಿಯೂ ವಿಜಯಪತ್ ಸಿಂಗಾನಿಯಾ ತಾನು ವಾಸಮಾಡುವ ಮನೆಯ ಹಕ್ಕಿಗಾಗಿ ಕೋರ್ಟಿಗೆ ಅಲೆದಾಡುತ್ತಿದ್ದಾರೆ ಎಂದರೇ ಅಂತಹ ದುರಂತ ಮತ್ತೊಂದಿಲ್ಲ ಹೀಗಾಗಿ ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ವ್ಯಾಮೋಹ ಬೇಡ ಎನ್ನುವ ಇವರ ಉಪದೇಶ ಈಗಿನ ಕಾಲಕ್ಕೆ ಅತ್ಯಂತ ಪ್ರಸ್ತುತ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *