ಆಸ್ತಿ ಖರೀದಿ ಮಾಡಬೇಕಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಆ ಅಂಶಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಆಸ್ತಿ ಕೊಂಡುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಡೊಕ್ಯುಮೆಂಟ್ ಫ್ರಾಡ್ ಬಗ್ಗೆ ತಿಳಿದಿರಬೇಕು. ಕೆಲವರು ಅಡ್ವಾನ್ಸ್ ಕೊಟ್ಟ ಮೇಲೆ ಕಾಗದ ಪತ್ರಗಳನ್ನು ತೋರಿಸುತ್ತೇವೆ ಎಂದು ಹೇಳುತ್ತಾರೆ. ಹಾಗಿದ್ದಾಗ ಸರ್ವೇ ನಂಬರ್ ಗೊತ್ತಿದ್ದರೆ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ನಂತರ ಅಡ್ವೊಕೇಟ್ ಬಳಿ ಅದರ ಬಗ್ಗೆ ಮಾಹಿತಿ ಪಡೆದು ವರ್ಜಿನಲ್ ಡೊಕ್ಯುಮೆಂಟ್ ನ್ನು ಫೋರೆನ್ಸಿಕ್ ಎಕ್ಸಾಮಿನೇಷನ್ ಮಾಡಿಸಬೇಕು ಅಲ್ಲಿ ಮೈಕ್ರೋಸ್ಕೋಪ್ ನಿಂದ ನೋಡುತ್ತಾರೆ ಇದರಿಂದ ಹಲವು ಬರಿಗಣ್ಣಿನಿಂದ ಕಾಣದ ವಿಷಯಗಳೆಲ್ಲ ತಿಳಿಯುತ್ತದೆ. ಈ ಎಕ್ಸಾಮಿನೇಷನ್ ಮಾಡಿಸುವುದರಿಂದ ಡೊಕ್ಯುಮೆಂಟ್ ಅಸಲಿ ಅಥವಾ ನಕಲಿ ಎಂದು ನೋಡುವುದರೊಂದಿಗೆ ಅದು ಕಲರ್ ಪ್ರಿಂಟ್ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಬೇಕು.
ಸ್ಟಾಂಪ್ ಪೇಪರ್ ನ್ನು ಅಸಲಿ ಅಥವಾ ನಕಲಿ ಎಂದು ನೋಡಬೇಕು. ಡೊಕ್ಯುಮೆಂಟ್ ನ ಎಲ್ಲ ಪೇಜ್ ಗಳು ಒಂದೆ ರೀತಿಯ ಟೈಪಾಗಿದೆಯಾ ಮತ್ತು ಒಂದೆ ಪ್ರಿಂಟರ್ ನಿಂದ ಪ್ರಿಂಟ್ ಆಗಿದೆಯಾ ನೋಡಬೇಕು ಬೇರೆ ಬೇರೆ ರೀತಿಯಲ್ಲಿ ಟೈಪ್ ಅಥವಾ ಪ್ರಿಂಟ್ ಆಗಿದ್ದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಮತ್ತು ಕೆಮಿಕಲ್ ಬಳಸಿದಾರಾ ನೋಡಬೇಕು. ಸಿಗ್ನೇಚರ್ ಸರಿಯಾಗಿದೆಯಾ ಒಂದೆ ಟೈಮ್ ನಲ್ಲಿ ಸಿಗ್ನೇಚರ್ ಹಾಕಲಾಗಿದೆಯಾ ಇನ್ನಿತರ ಮುಖ್ಯ ವಿಷಯವನ್ನು ನೋಡಬೇಕು. ಯಾವುದೇ ಪ್ರಾಪರ್ಟಿ ಖರೀದಿಸುವಾಗ ಲೀಗಲ್ ರಿಪೋರ್ಟನೊಂದಿಗೆ, ಫಾರೆನ್ಸಿಕ್ ರಿಪೋರ್ಟ್ ಕೂಡ ಮುಖ್ಯವಾಗಿದೆ. ಪ್ರಾಪರ್ಟಿ ಖರೀದಿಸುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ ಏಕೆಂದರೆ ಇತ್ತೀಚೆಗೆ ಡಾಕ್ಯುಮೆಂಟ್ ಫ್ರಾಡ್ ಹೆಚ್ಚುತ್ತಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.