Ultimate magazine theme for WordPress.

ಕೇಂದ್ರ ಸಚಿವ ಆಗಿದ್ದರೂ ಕೂಡ ಸೈಕಲ್ನಲ್ಲೇ ಇವರ ಓಡಾಟ, ಕೋಟ್ಯಾಧಿಪತಿ ಎದುರು ಗೆದ್ದು ಬಂದ ಜನರ ನೆಚ್ಚಿನ ನಾಯಕ ಇವರು ಯಾರು ಗೊತ್ತಾ..

0 191

Pratap Chandra sarangi life style: ಇತ್ತೀಚಿನ ದಿನಗಳಲ್ಲಿ ರಾಜಕೀಯ ಎನ್ನುವುದು ಸಂಪೂರ್ಣವಾಗಿ ವ್ಯಾಪಾರವಾಗಿಬಿಟ್ಟಿದೆ. ಹಣ ಹಾಕಿ ಗೆದ್ದ ನಂತರ ಮತ್ತೆ ಹಣವನ್ನು ಕೊಳ್ಳೆಹೊಡೆಯುವ ವ್ಯಾಪಾರ ಎಂದು ಹೇಳಬಹುದಾಗಿದೆ. ಆದರೆ ಅದರಲ್ಲಿಯೂ ಕೂಡ ಕೆಲವೊಂದು ಜನನಾಯಕರು ದಕ್ಷವಾಗಿ ಕೆಲಸವನ್ನು ಮಾಡುವ ಮೂಲಕ ರಾಜಕೀಯವನ್ನು ಇನ್ನೂ ಕೂಡ ಜನರಲ್ಲಿ ನಂಬಿಕೆ ಉಳಿದುಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಅವರಲ್ಲಿ ಒಡಿಸ್ಸಾದ ಮೂಲದ ರಾಜಕಾರಣಿ ಒಬ್ಬರ ಬಗ್ಗೆ ಹೇಳಲು ಹೊರಟಿದ್ದು ಈಗಾಗಲೇ ಅವರು ಕೇಂದ್ರ ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ.

ಹೌದು ನಾವು ಮಾತನಾಡಲು ಹೊರಟಿರುವುದು ಪ್ರತಾಪ್ ಚಂದ್ರ ಸಾರಂಗಿ ಅವರ ಕುರಿತಂತೆ. ಮೊದಲು ಸನ್ಯಾಸಿ ಆಗಲು ಹೊರಟಿದ್ದ ಇವರು ನಂತರ ಮತ್ತೆ ತನ್ನ ಊರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಂಡುಬಂದಿದ್ದ ಕೊರತೆಯ ಕುರಿತಂತೆ ಏನನ್ನಾದರೂ ಜನರಿಗೆ ಉಪಯೋಗವಾಗುವಂತೆ ಮಾಡುಬೇಕೆಂದು ರಾಜಕೀಯದಲ್ಲಿ ಧುಮುಕುವಂತಹ ಯತ್ನವನ್ನು ಮಾಡುತ್ತಾರೆ. ಆದರೆ ಅವರು ನಿಜವಾಗಿಯೂ ದೊಡ್ಡ ಮಟ್ಟದಲ್ಲಿ ಶಿಕ್ಷಣಕ್ರಾಂತಿಯನ್ನು ಮಾಡಿದ್ದು ಒಂದು ವಿಭಿನ್ನ ರೀತಿಯ ಯೋಚನೆಯ ಮೂಲಕ.

ಇದನ್ನೂ ಓದಿ..ಮಗ ಕೇಂದ್ರ ಸಚಿವ ಆದ್ರೂ ಕೂಡ ತಂದೆ ತಾಯಿ ಇನ್ನೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಯಾರು ಗೊತ್ತಾ ಆ ಮಂತ್ರಿ

ಅದೇನೆಂದರೆ ಪ್ರತಿ ಊರಿಗೆ ಶಾಲೆಯನ್ನು ಕಟ್ಟಿಸಿ ಒಬ್ಬ ಶಿಕ್ಷಕನನ್ನು ನೇಮಿಸಿ, ಮಕ್ಕಳ ಪೋಷಕರೇ ಆ ಶಿಕ್ಷಕನಿಗೆ ಸಂಬಳವನ್ನು ನೀಡುವಂತಹ ಪರಿಕಲ್ಪನೆಯನ್ನು ಜಾರಿಗೆ ತಂದು ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ತಲುಪಿಸುವಲ್ಲಿ ಸಾರಂಗಿ ಅವರು ಪ್ರಮುಖ ಪಾತ್ರವನ್ನು ಬಯಸುತ್ತಾರೆ ಹಾಗೂ ಇದು ಅವರಿಗೆ ಜನಪ್ರಿಯತೆಯನ್ನು ಕೊಡ ತಂದು ಕೊಡುತ್ತದೆ. ಇವರನ್ನು ಬಿಜೆಪಿ ಪಕ್ಷ ಗುರುತಿಸಿ ರಾಜಕೀಯಕ್ಕೆ ಸೇರಿಸಿಕೊಂಡು ಇವರು ಎರಡು ಬಾರಿ ಸತತವಾಗಿ ಶಾಸಕನಾಗಿ ಆಯ್ಕೆಯಾಗುತ್ತಾರೆ. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತರೂ ಕೂಡ 2019ರಲ್ಲಿ ಮತ್ತೆ ಗೆಲ್ಲುತ್ತಾರೆ.

ಇವರ ಎದುರು ಕೋಟ್ಯಾಧಿಪತಿ ಕುಳಗಳು ಚುನಾವಣೆಗೆ ನಿಂತರೂ ಕೂಡ ಇವರ ಕೇವಲ ಸೈಕಲ್‌ನಲ್ಲಿಯೇ ಓಡಾಡಿ ಜನರ ಮನಸ್ಸನ್ನು ಗೆದ್ದು ಚುನಾವಣೆಯನ್ನು ಗೆದ್ದು ಕೇಂದ್ರ ಸಚಿವರಾಗಿ ಆಯ್ಕೆಯಾಗುತ್ತಾರೆ. ಕೇಂದ್ರ ಸಚಿವರಾಗಿದ್ದರು ಕೂಡ ಇವರು ಯಾವುದೇ ಐಷಾರಾಮಿ ಮನೆಯಲ್ಲಿ ಇರುತ್ತಿರಲಿಲ್ಲ ಕೇವಲ ಗುಡಿಸಿನಲ್ಲಿ ವಾಸಿಸುತ್ತಿದ್ದರು ಹಾಗೂ ಯಾವುದೇ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿರುವ ಕೇವಲ ತಮ್ಮ ಸೈಕಲ್‌ನಲ್ಲಿಯೇ ಓಡಾಡುತ್ತಿದ್ದರು. ಇಂತಹ ರಾಜಕಾರಣಿಗಳನ್ನು ನಮ್ಮ ದೇಶ ಕಂಡಿರುವುದು ಅತ್ಯಂತ ಅಪರೂಪ ಅವರಲ್ಲಿ ಪ್ರತಾಪ್ ಚಂದ್ರ ಸಾರಂಗಿ ಕೂಡ ಒಬ್ಬರಾಗಿದ್ದಾರೆ. ಇವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಇದನ್ನೂ ಓದಿ..ಬೇರೆಯವನ ಜೊತೆಗೆ ಮಂಚ ಹತ್ತಲು ತೊಂದರೆಯಾಗುತ್ತದೆ ಎಂದು ಈ ಐನಾತಿ ಆಂಟಿ ಗಂಡನಿಗೆ ಮಾಡಿದ್ದೇನು ಗೊತ್ತಾ..

Leave A Reply

Your email address will not be published.