ಕನ್ನಡ ಚಿತ್ರರಂಗದ ನಟ ದೇವರಾಜ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ ಅವರ ಕುಟುಂಬದವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಅವರ ಮಗ ಪ್ರಜ್ವಲ್ ದೇವರಾಜ್ ಹಾಗೂ ಸೊಸೆ ರಾಗಿಣಿ ದೇವರಾಜ್ ಅವರ ಡ್ಯಾನ್ಸ್ ವಿಡಿಯೋ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತದೆ. ಅವರ ಮದುವೆ ಹಾಗೂ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ನಟ ದೇವರಾಜ್ ಅವರು ನಟನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರ ಮಗ ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದ ಪ್ರಜ್ವಲ್ ದೇವರಾಜ್ ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ. ಪ್ರಜ್ವಲ್ ಅವರು ರಾಗಿಣಿ ಚಂದ್ರನ್ ಎಂಬುವವರನ್ನು ಮದುವೆಯಾಗಿದ್ದಾರೆ. ಇವರು ನಟಿ, ಮೊಡೆಲ್, ಡ್ಯಾನ್ಸರ್ ಆಗಿದ್ದಾರೆ. ಇವರು ಜುಲೈ 23,1990 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆ ಚಂದ್ರನ್ ಬಾಲು, ತಾಯಿ ರಮಾ ಇವರಿಗೆ ಒಬ್ಬಳು ಸಹೋದರಿಯಿದ್ದು ಅವಳ ಹೆಸರು ಕನ್ನಿಕಾ. ಇವರು ಬಿಕಾಂ ಪದವಿಯನ್ನು ಓದಿದ್ದಾರೆ. ಇವರಿಗೆ ಚೀಸ್ ಮಶ್ರೂಮ್, ಸಲಾಡ್ ಎಂದರೆ ಇಷ್ಟ. ಇವರ ಫೇವರೆಟ್ ಪ್ಲೇಸ್ ನ್ಯೂಯಾರ್ಕ್. ಇವರ ಹವ್ಯಾಸ ಡ್ಯಾನ್ಸ್ ಮಾಡುವುದು, ಯೋಗ, ಕುಕ್ಕಿಂಗ್. ಇವರು ರಿಷಬ್ ಪ್ರಿಯ ಎಂಬ ಶಾರ್ಟ್ ಮೂವಿ, ಲಾ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಗಿಣಿ ಅವರು 6 ನೇ ಕ್ಲಾಸಿನಲ್ಲಿ ಇರುವಾಗ ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದರು. ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರಿಗೆ ಡ್ಯಾನ್ಸ್ ಕ್ಲಾಸಿನಲ್ಲಿ ಪರಿಚಯವಾಗಿತ್ತು. ನಂತರ ಪ್ರೀತಿಯಾಯಿತು ಪ್ರಜ್ವಲ್ ಅವರು ಹೇಳಿಕೊಂಡರು ರಾಗಿಣಿ ಅವರು ಒಪ್ಪಿ ಮನೆಯವರಿಗೂ ತಿಳಿಸಿ ಮದುವೆಯಾದರು. ರಾಗಿಣಿ ಅವರಿಗೆ ಹಲವು ಜಾಹೀರಾತು ಆಫರ್ ಬರುತ್ತಿತ್ತು 100 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇವರು ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋ ಹಾಗೂ ಯೋಗ ಸೆಂಟರ್ ಹೊಂದಿದ್ದಾರೆ. ಇವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ, ಡ್ಯಾನ್ಸ್ ಕೊರಿಯೋಗ್ರಾಫರ್ ಆಗುವ ಆಸೆ ಇತ್ತು. ವಿಶೇಷವೆಂದರೆ ಪ್ರಜ್ವಲ್ ಅವರ ಇನ್ಸಪೆಕ್ಟರ್ ವಿಕ್ರಮ್ ಎಂಬ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ರಾಗಿಣಿ ಹಾಗೂ ಪ್ರಜ್ವಲ್ ಅವರ ಡ್ಯಾನ್ಸ್ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಅವರ ಡ್ಯಾನ್ಸ್ ನೋಡಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಾಗಿಣಿ ಅವರು ಒಳ್ಳೆಯ ಸ್ಕ್ರಿಪ್ಟ್ ಬಂದರೆ ಅವಕಾಶ ಸಿಕ್ಕರೆ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಫ್ರೀ ಟೈಮ್ ನಲ್ಲಿ ಕುಟುಂಬದವರೊಂದಿಗೆ ಸಿನಿಮಾ ನೋಡುವುದು, ಡ್ಯಾನ್ಸ್ ಮಾಡುವುದು ಮಾಡುತ್ತಾರೆ. ಈ ಜೋಡಿ ಸಂತೋಷವಾಗಿ ಜೀವನ ನಡೆಸಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *