ಈ ಲಾಕ್ ಡೌನ್ ಟೈಮ್ ನಲ್ಲಿ ಪ್ರಜ್ವಲ್ ದೇವರಾಜ್ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿರುವ ವಿಡಿಯೋ

0 1

ಕನ್ನಡ ಚಲನಚಿತ್ರ ರಂಗದ ಡೈನಾಮಿಕ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿರುವ ನಟ ದೇವರಾಜ್ ಅವರ ಹಿರಿಯ ಪುತ್ರ ಪ್ರಜ್ವಲ್ ದೇವರಾಜ್ ಅವರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಪ್ರಜ್ವಲ್ ದೇವರಾಜ್ ಅವರು 1987 ಜುಲೈ 4 ರಂದು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ತಂದೆ ದೇವರಾಜ್, ತಾಯಿ ಚಂದ್ರಲೇಖ. ದೇವರಾಜ್ ಅವರು ಕನ್ನಡ ಸಿನಿಮಾ ಲೋಕದ ಖ್ಯಾತ ನಟರಾಗಿದ್ದಾರೆ. ಇವರು ನಾಯಕ, ಪೋಷಕ, ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಸುಮಾರು ಇನ್ನೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಇವರಿಗಿದೆ. ಪ್ರಜ್ವಲ್ ದೇವರಾಜ್ ಅವರಿಗೆ ಪ್ರಣಮ್ ಎಂಬ ತಮ್ಮನಿದ್ದಾನೆ. ಪ್ರಜ್ವಲ್ ದೇವರಾಜ್ ಅವರು ಆರೋಬಿಂದೋ ಮೆಮೋರಿಯಲ್ ಸ್ಕೂಲ್ ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು ಹಾಗೂ ಜೈನ್ ಯುನಿವರ್ಸಿಟಿ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 2015 ರಂದು ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದರು. ಇವರು ಮಾಡೆಲ್ ಹಾಗೂ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ರಿಷಭಪ್ರಿಯ ಎಂಬ ಕಿರುಚಿತ್ರ ಮತ್ತು ಲಾ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಅವರ ಸಿನಿ ಬದುಕಿನ ಬಗ್ಗೆ ಹೇಳುವುದಾದರೆ ಸುಮಾರು 25 ಕ್ಕಿಂತಲೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ 2007 ರಲ್ಲಿ ತೆರೆಕಂಡ ಸಿಕ್ಸರ್ ಸಿನೆಮಾದ ಅಭಿನಯಕ್ಕೆ ಸುವರ್ಣ ಫಿಲ್ಮ್ ಅವಾರ್ಡ್ ನಿಂದ ಬೆಸ್ಟ್ ಡೆಬ್ಯೂ ಆಕ್ಟರ್ ಪ್ರಶಸ್ತಿ ನೀಡಿ ಗೌರವಿಸಿದೆ. 2007 ರಲ್ಲಿ ತೆರೆಕಂಡ ಗೆಳೆಯ ಸಿನಿಮಾ ತಮ್ಮ ಸಿನಿ ಪಯಣದ ಆರಂಭದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಇವರ ನಟನೆಯ ಎರಡು ಸಾವಿರದ ಎಂಟರಲ್ಲಿ ತೆರೆಕಂಡ ಮೆರವಣಿಗೆ ಎರಡು ಸಾವಿರದ ಒಂಬತ್ತರಲ್ಲಿ ತೆರೆಕಂಡ ಗುಲಾಮ ಹಾಗೂ ಮುರಳಿ ಮೀಟ್ಸ್ ಮೀರಾ , ಗಲಾಟೆ, ಚೌಕ ಹಾಗೂ 2020 ರಲ್ಲಿ ತೆರೆಕಂಡ ಜಂಟಲ್ ಮ್ಯಾನ್ ಈ ಎಲ್ಲಾ ಸಿನಿಮಾಗಳು ಒಳ್ಳೆಯ ಹೆಸರು ತಂದುಕೊಟ್ಟಿತು. ಪ್ರಜ್ವಲ್ ದೇವರಾಜ್ ಅವರು ತಮ್ಮ ಉತ್ತಮ ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಪ್ರಜ್ವಲ್ ದೇವರಾಜ್ ಅವರನ್ನು ಕನ್ನಡ ಸಿನಿಮಾದ ಡೈನಾಮಿಕ್ ಪ್ರಿನ್ಸ್ ಎಂದು ಕರೆಯುತ್ತಾರೆ. ಪ್ರಜ್ವಲ್ ದೇವರಾಜ್ ಅವರು ತಮ್ಮ ಕುಟುಂಬದ ಜೊತೆ ಇರುವ ಸಂತೋಷದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಅವರ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ನೋಡಬಹುದು.

Leave A Reply

Your email address will not be published.