ಪ್ರಧಾನ್ ಮಂತ್ರಿ ಶ್ರಮ್ ಯೋಗಿ ಮಾಂಧನ್ ಯೋಜನೆ ಎನ್ನುವುದು ವೃದ್ಧಾಪ್ಯ ರಕ್ಷಣೆ ಮತ್ತು ಅಸಂಘಟಿತ ಕಾರ್ಮಿಕರ (ಯುಡಬ್ಲ್ಯೂ) ಸಾಮಾಜಿಕ ಭದ್ರತೆಯ ಉದ್ದೇಶದಿಂದ ಜಾರಿಗೆ ತಂದ ಸರ್ಕಾರಿ ಯೋಜನೆಯಾಗಿದೆ. ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಪ್ರಧಾನ್ ಮಂತ್ರಿ ಶ್ರಮ್ ಯೋಗಿ ಮಾಂಧನ್ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಹಣವನ್ನು ಪಡೆಯಬಹುದು ಇದನ್ನು ಎಲ್ಲ ರೀತಿಯ ಜನಸಾಮಾನ್ಯರು ಅರ್ಜಿಯನ್ನು ಸಲ್ಲಿಸಬಹುದು. ಅಸಂಘಟಿತ ಕಾರ್ಮಿಕರು (ಯುಡಬ್ಲ್ಯೂ) ದೇಶದಲ್ಲಿ ಸುಮಾರು 42 ಕೋಟಿ ಜನ ಇದ್ದು ಎಲ್ಲರೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದು ಸ್ವಯಂ ಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದ್ದು, ಅದರ ಅಡಿಯಲ್ಲಿ ಚಂದಾದಾರರು 60 ವರ್ಷ ದಾಟಿದ ನಂತರ ತಿಂಗಳಿಗೆ ಕನಿಷ್ಠ 3000 ರೂ.ಗಳ ಪಿಂಚಣಿ ಪಡೆಯುತ್ತಾರೆ ಮತ್ತು ಚಂದಾದಾರರು ಸತ್ತರೆ, ಫಲಾನುಭವಿಯ ಸಂಗಾತಿಯು ಶೇಕಡಾ ಐವತ್ತರಷ್ಟು ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಪಿಂಚಣಿಯನ್ನು ಕುಟುಂಬ ಪಿಂಚಣಿಯಾಗಿ ಹಾಗೂ ಕುಟುಂಬ ಪಿಂಚಣಿ ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ. ಯೋಜನೆ ಅರ್ಜಿಯನ್ನು ತುಂಬ ಬೇಕಾದರೆ ಕೆಲವೊಂದು ಅರ್ಹತಾ ಮಾನದಂಡ ಹೊಂದಿರಬೇಕಾಗುತ್ತದೆ.
ಮೊದಲನೆಯದಾಗಿ ಅಸಂಘಟಿತ ಕೆಲಸಗಾರರು ಅರ್ಜಿಯನ್ನು ತುಂಬ ಬಹುದು, ವಯಸ್ಸು ಹದಿನೆಂಟರಿಂದ ನಲವತ್ತು ವರ್ಷದ ಒಳಗಡೆ ಇರಬೇಕು ಹಾಗೂ ಅವರ ಮಾಸಿಕ ಆದಾಯ ಹದಿನೈದು ಸಾವಿರ ರೂಪಾಯಿಗಿಂತ ಕಡಿಮೆ ಇರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅರ್ಜಿದಾರರ ಬಳಿ ಆಧಾರ್ ಕಾರ್ಡ್ ಇರಬೇಕು ಹಾಗೂ ಉಳಿತಾಯ ಖಾತೆ ಅಥವಾ ಜನ್ ಧನ್ ಖಾತೆ ಈ ಎರಡರಲ್ಲಿ ಯಾವುದಾದರೂ ಒಂದು ಖಾತೆ ಇರಬೇಕಾಗುತ್ತದೆ.
ಅರ್ಜಿಯನ್ನು ಹಾಕಿದ ನಂತರ ಯಾವ ವಯಸ್ಸಿನ ವ್ಯಕ್ತಿಯು ಎಷ್ಟು ಹಣ ಕಟ್ಟಬೇಕು ಎಂದು ಸರ್ಕಾರ ನಿಗದಿ ಮಾಡಿರುತ್ತದೆ. ಯೋಜನೆಯಲ್ಲಿ ವಯಸ್ಸಿನ ಆಧಾರದ ಮೇಲೆ ಹಣವನ್ನು ಕಟ್ಟಬೇಕು.
https://maandhan.in/shramyogi ಈ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ಲಿಂಕ್ ಓಪನ್ ಮಾಡಿ ಕ್ಲಿಕ್ ಹಿಯರ್ ಟು ಅಪ್ಲೈ ನೌವ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಸೆಲ್ಫ್ ಎನ್ರೋಲ್ಲ್ಮೆಂಟ್ ಹಾಗೂ ಸಿಎಸ್ ಸಿವಿಎಲ್ಇ ಎಂಬ 2 ಆಯ್ಕೆಗಳಲ್ಲಿ ಮೊದಲನೆಯದು ಮೋಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಎರಡನೆಯದು ಸಿಎಸ್ ಸಿ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಬೇಕು. ಸೆಲ್ಫ್ ಎನ್ರೋಲ್ಲ್ಮೆಂಟ್ ಬಗ್ಗೆ ಮಾಹಿತಿ ನೀಡಬೇಕಾಗಿರುವುದರಿಂದ ಇದರ ಮೇಲೆ ಕ್ಲಿಕ್ ಮಾಡಿದಾಗ ಮೋಬೈಲ್ ಸಂಖ್ಯೆಯನ್ನು ಕೇಳುತ್ತದೆ ಇದರಲ್ಲಿ ಮೋಬೈಲ್ ಸಂಖ್ಯೆಯನ್ನು ಹಾಕಿ ಪ್ರೋಸೀಡ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕ್ಯಾಪ್ಚರ್ ಕೋಡ್ ನ್ನು ಬಾಕ್ಸ್ನಲ್ಲಿ ಬರೆದು ಜನರೇಟ್ ಓಟಿಪಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಟಿಪಿ ಮೋಬೈಲ್ ಸಂಖ್ಯೆಗೆ ಬರುತ್ತದೆ ಅದನ್ನು ಹಾಕಿ ಪ್ರೋಸೀಡ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಬೇಕು ನಂತರದಲ್ಲಿ ಮೋಬೈಲ್ ನಲ್ಲಿ ಉಪಯೋಗ ಮಾಡುವಾಗ ಎಡ ಭಾಗದಲ್ಲಿ ಮೂರು ಗೆರೆಗಳು ಕಂಡುಬರುತ್ತದೆ ಅದಕ್ಕೆ ಕ್ಲಿಕ್ ಮಾಡಿದಾಗ ಎನ್ರೋಲ್ಲ್ಮೆಂಟ್ ನಲ್ಲಿ ಪ್ರಧಾನಮಂತ್ರಿ ಶ್ರಮ್ ಯೋಗಿ ಮಾಂಧನ್ ಯೋಜನೆ ಎಂದು ತೋರಿಸುತ್ತದೆ ಅದನ್ನು ಆಯ್ಕೆ ಮಾಡಬೇಕು ನಂತರ ಆಧಾರ್ ಕಾರ್ಡ ನ ಸಂಖ್ಯೆ, ಹೆಸರು ಮೊಬೈಲ್ ಸಂಖ್ಯೆ ಇಮೇಲ್ ಐಡಿ, ಹುಟ್ಟಿದ ದಿನಾಂಕ, ರಾಜ್ಯ ಹಾಗೂ ಜಿಲ್ಲೆ ಮಾಹಿತಿಯನ್ನು ಖಾಲಿ ಬಿಟ್ಟಿರುವ ಜಾಗದಲ್ಲಿ ತುಂಬಬೇಕು.
ನಂತರ ಪಿನ್ ಕೋಡ್ ಜಾತಿ, ಉದ್ಯೋಗದ ಬಗ್ಗೆ ಮಾಹಿತಿ ನೀಡಬೇಕು. ನಂತರ ಡಿಕ್ಲರೇಷನ್ ಎಂಬಲ್ಲಿ ಕ್ಲಿಕ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು ನಂತರ ತುಂಬಿದ ಮಾಹಿತಿಯ ಬಗ್ಗೆ ಒಂದು ಬಾಕ್ಸ್ನಲ್ಲಿ ತೋರಿಸುತ್ತದೆ. ಕೆಳಗಡೆಯಲ್ಲಿ ಓಟಿಪಿಯನ್ನು ಆಯ್ಕೆ ಮಾಡಿಕೊಂಡು ವೆರಿಫಿಕೇಷನ್ ಯೂಸಿಂಗ್ ಬಯೋ ಒಥೆಂಟಿಫಿಕೇಷನ್ ಮೇಲೆ ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ಸಂಖ್ಯೆ ಕಾಣಿಸುತ್ತದೆ ನಂತರ ಕೆಳಗಡೆ ಜನರೇಟ್ ಓಟಿಪಿ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಮೋಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ನಂತರ ಓಟಿಪಿಯನ್ನು ಬಾಕ್ಸ್ ನಲ್ಲಿ ಹಾಕಿ ವೆಲಿಡೇಟ್ ಓಟಿಪಿಯ ಮೇಲೆ ಕ್ಲಿಕ್ ಮಾಡಿದ ನಂತರ ಈಗಾಗಲೇ ತುಂಬಿದ ಮಾಹಿತಿಗಳನ್ನು ತೋರಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಬೇಕು. ಕಾಂಟ್ರಿಬ್ಯೂಷನ್ ಫ್ರೀಕ್ವೆನ್ಸಿ ಎನ್ನುವುದರಲ್ಲಿ ಎಷ್ಟು ತಿಂಗಳಿಗೊಮ್ಮೆ ಹಣ ಕಟ್ಟುತ್ತೇವೆ ಎಂಬುದನ್ನು ನೀಡಲಾದ ಆಯ್ಕೆಯಲ್ಲಿ ಕ್ಲಿಕ್ ಮಾಡಬೇಕು. ಡಿಕ್ಲರೇಷನ್ ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ ಸಬ್ ಮಿಟ್ ಎಂಡ್ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಅಪ್ಲಿಕೇಷನ್ ಫಾರ್ಮ್ ಆಗುತ್ತದೆ. ಇದನ್ನು ಪ್ರಿಂಟ್ ತೆಗೆದುಕೊಂಡು ಅದರ ಮೇಲೆ ಅರ್ಜಿದಾರನು ಸಹಿ ಮಾಡಬೇಕು ನಂತರ ಅದನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಪೇಮೆಂಟ್ ಎಂಬ ಆಯ್ಕೆ ಬರುತ್ತದೆ ಅದರಲ್ಲಿ ವಯಸ್ಸಿನ ಆಧಾರದ ಮೇಲೆ ಎಷ್ಟು ಹಣವನ್ನು ಕಟ್ಟಬೇಕು ಎಂಬುದರ ಬಗ್ಗೆ ಮಾಹಿತಿ ಇರುತ್ತದೆ ಅದನ್ನು ಖಾತೆಯ ಮೂಲಕ, ಡೆಬಿಟ್ ಕಾರ್ಡ್ ಅಥವಾ ಆನ್ ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ನಂತರ ಈ ಅರ್ಜಿಯ ಪ್ರಿಂಟ್ ತೆಗೆದುಕೊಂಡು ಇದರಲ್ಲಿ ಐಡಿ ಕಾರ್ಡ್ ರೆಫರೆನ್ಸ್ ನಂಬರ್ ಸಿಗುತ್ತದೆ. ಇದರ ಮೂಲಕ ಐಡಿ ಕಾರ್ಡ್ ಪಡೆಯುಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನೀಡಿದ್ದು , ಅರ್ಜಿಯನ್ನು ಸಲ್ಲಿಸಿ ತಿಂಗಳಿಗೆ ಮೂರುಸಾವಿರ ರೂಪಾಯಿ ಪಡೆಯಿರಿ.