Ultimate magazine theme for WordPress.

ನಟಿ ರಕ್ಷಿತಾ ಪ್ರೇಮ್ ಅವರ ಮನೆ ಯಾವ ಅರಮೆನೆಗೂ ಕಮ್ಮಿ ಇಲ್ಲ ನೋಡಿ

0 1

ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ರಕ್ಷಿತಾ ಕೂಡ ಒಬ್ಬರಾಗಿದ್ದರು. ಹಾಗೆಯೇ ಸ್ಟಾರ್ ಆಗಿ ಮಿಂಚುತ್ತಿದ್ದರು. ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್ ನಂತರ ಎಕ್ಸ್‍ಕ್ಯೂಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆ ಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಕ್ಷಿತಾ ಅವರು  ಕನ್ನಡ ಚಿತ್ರರಂಗದ ನಾಯಕಿಯರಲ್ಲಿ ಒಬ್ಬರು. ಮುಂಬೈನಲ್ಲಿ ಹುಟ್ಟಿದ ಶ್ವೇತಾ ಅಂದ್ರೆ ಕನ್ನಡಿಗರ ಪ್ರೀತಿಯ ಫೇವರಿಟ್ ಹೀರೋಯಿನ್ ಕ್ರೇಜಿ ಕ್ವೀನ್ ರಕ್ಷಿತಾ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕನ್ನಡಿಗರ ಸುಂಟರಗಾಳಿಯ ಬೆಡಗಿ. ಆದ್ದರಿಂದ ನಾವು ಇಲ್ಲಿ ರಕ್ಷಿತಾ ಮತ್ತು ಪ್ರೇಮ್ ಅವರ ಮನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

1983 ಮಾರ್ಚ್31ರಲ್ಲಿ ನಟಿ ರಕ್ಷಿತಾ ಅವರು ಜನಿಸಿದ್ದಾರೆ. ಇವರು ಮಮತಾ ರಾವ್ ಹಾಗೂ ಬಿ.ಸಿ. ಗೌರಿಶಂಕರ್ ರವರ ಮಗಳು. ಬಿ.ಸಿ. ಗೌರಿಶಂಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಛಾಯಾಗ್ರಹಕರು.ಇವರ ಹುಟ್ಟು ಹೆಸರು ಶ್ವೇತಾ ಆಗಿದೆ. ಇವರ ತಂದೆಯ ಹೆಸರು ಬಿ.ಸಿ.ರವಿಶಂಕರ್. ಇವರು ಖ್ಯಾತ ಸಿನಿಮಾಟೋಗ್ರಾಫರ್ ಆಗಿದ್ದರು. ಹಾಗೆಯೇ ಇವರ ತಾಯಿಯ ಹೆಸರು ಮಮಾತಾರಾವ್. ಇವರು ಕೂಡ ಪ್ರಸಿದ್ಧ ನಟಿಯಾಗಿದ್ದರು. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ಓಡುತ್ತಿದ್ದವರು ನಂತರ ನಟನೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. ಸುಮಾರು ಒಂದು ತಿಂಗಳು ನಟನಾ ತರಬೇತಿ ಪಡೆದರು.

ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟರು. 2007ರಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಕ್ರೇಜಿ ಕ್ವೀನ್ ರಕ್ಷಿತಾ ಅವರು  ಮದುವೆಯಾದರು. ಇಂದು ಖುಷಿ ಖುಷಿಯಿಂದ ಜೀವನ ಕಳೆಯುತ್ತಿದ್ದಾರೆ. ಇವರಿಬ್ಬರದೂ ತದ್ವಿರುದ್ಧ ಗುಣಗಳು. ಇವರ ಮದುವೆ ಆದದ್ದೇ ನಿಜಕ್ಕೂ ಆಶ್ಚರ್ಯಕರವಾದ ವಿಷಯವಾಗಿದೆ. ಪ್ರೇಮ್ ಅವರು ಮಂಡ್ಯದವರು ಇಂಗ್ಲಿಷ್ ಗೊತ್ತಿಲ್ಲ. ಆದರೆ ರಕ್ಷಿತಾ ಮಾತ್ರ ಸಿಟಿಯಲ್ಲಿ ಶ್ರೀಮಂತ ಮನೆಯಲ್ಲಿ ಬೆಳೆದವರು. ರಕ್ಷಿತಾಗೆ ಹಳ್ಳಿಯ ಬದುಕು ಸೊಗಡಿನ ಬಗ್ಗೆ ಏನೂ ಗೊತ್ತಿಲ್ಲ. ಇವರಿಬ್ಬರು ಹೇಗೆ ಪ್ರೀತಿ ಮಾಡಿದರು? ಹೇಗೆ ಮದುವೆಯಾದರು ಎಂಬುದು ಹಲವರಿಗೆ ಇನ್ನೂ ಆಶ್ಚರ್ಯವಾಗಿ ಉಳಿದಿದೆ. ಮನಸು ಮನಸುಗಳು ಒಂದಾದರೆ ಇನ್ನೇನು ಬೇಕು ಅಲ್ಲವೇ ಹಾಗೆಯೇ ರಕ್ಷಿತಾ ಮತ್ತು ಪ್ರೇಮ್ ಪ್ರೀತಿಸಿ ಮದುವೆಯಾದರು.

ಇಂದು ಈ ದಂಪತಿಗೆ ಸೂರ್ಯ ಎಂಬ ಮಗನಿದ್ದಾನೆ. ಹಾಗೆಯೇ ತಮ್ಮ ಇಚ್ಛೆಯಂತೆ ವಿಶಾಲವಾದ ಮತ್ತು ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ. ಇವರ ಮನೆಯು ಮೂರು ಅಂತಸ್ತುಗಳನ್ನು ಹೊಂದಿದೆ. ಇವರ ಮನೆ ಕರ್ನಾಟಕದ ರಾಜಧಾನಿ ಆದ ಬೆಂಗಳೂರಿನಲ್ಲಿ ಚಂದ್ರಲೇಔಟ್ ನಲ್ಲಿ ಇದೆ. ಇವರು ಇವರ ಮನೆಗೆ ತಮ್ಮ ಮುದ್ದಿನ ಮಗನ ಹೆಸರನ್ನು ಇಟ್ಟಿದ್ದಾರೆ. ಅಂದರೆ ಇವರ ಮನೆಯ ಹೆಸರು ಸೂರ್ಯ ಆಗಿದೆ. ನಟಿ ರಕ್ಷಿತಾ ಮದುವೆ ಆದ ಮೇಲೆ ಹಂತ ಹಂತವಾಗಿ ಚಿತ್ರರಂಗದಿಂದ ದೂರ ಸರಿದಿದ್ದಾರೆ. ಈಗ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ. ಜೀ ಕನ್ನಡದಲ್ಲಿ ಬರುವ ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಇನ್ನೂ ಮುಂತಾದ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ.

Leave A Reply

Your email address will not be published.