ಕನ್ನಡ ಚಿತ್ರರಂಗದಲ್ಲಿ 90ನೇ ದಶಕದಲ್ಲಿ ತಮ್ಮ ಅಭಿನಯದ ಮೂಲಕವೇ ಜನರ ಮೆಚ್ಚುಗೆಗೆ ಪಾತ್ರರಾದ ನಟಿ ಪ್ರೇಮಾ. ಪ್ರೇಮಾ ಅವರು ಜನವರಿ 6 1977 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರು ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸುವ ದಕ್ಷಿಣ ಭಾರತದ ನಟಿ. ಕನ್ನಡದ 1995ರಲ್ಲಿ ಬಂದ ಸವ್ಯಸಾಚಿ ಪ್ರೇಮಾ ಅವರ ಮೊದಲ ಚಿತ್ರ. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗಿದ್ದಲ್ಲಿ ನಾವಿಲ್ಲಿ ಪ್ರೇಮಾ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಪ್ರೇಮಾ ಕೊಡವ ಜನಾಂಗಕ್ಕೆ ಸೇರಿದ್ದು ನೆರವಂಡ ಮನೆತನದವರು. ಬೆಂಗಳೂರಿನ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ಬಳಿಕ ಪಿಯುಸಿಯನ್ನು ಎಸ್ಎಸ್ಎಮ್ ಆರ್ವಿ ಕಾಲೇಜಿನಲ್ಲಿ ಉತ್ತೀರ್ಣರಾದರು. ಇವರು ರಾಷ್ಟ್ರಮಟ್ಟದಲ್ಲಿ ಹೈ ಜಂಪ್ ಮತ್ತು ವಾಲಿ ಬಾಲ್ ಆಟದಲ್ಲಿ ಭಾಗವಹಿಸಿದ್ದಾರೆ. ಪ್ರೇಮಾ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರನ್ನು ಜುಲೈ 6 2006ರಲ್ಲಿ ವಿವಾಹವಾದರು. ಮದುವೆಯ ನಂತರ ಚಿತ್ರರಂಗದಿಂದ ದೂರವುಳಿಯುತ್ತಾರೆ. ಕೆಲವರ್ಷಗಳ ಬಳಿಕ ವಿಚ್ಛೇದನ ಪಡೆದರು.

ಪ್ರೇಮ ಅವರು ಗಂಡನಿಂದ ವಿಚ್ಛೇದನ ಪಡೆದ ಬಳಿಕ ಅವರ ತಾಯಿಯ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಇತ್ತೀಚಿನ ದಿನದಲ್ಲಿಯೇ ಪ್ರೇಮಾ ಅವರ ತಂದೆ ಅಸುನೀಗಿದ್ದಾರೆ. ತಂದೆಯನ್ನು ಕಳೆದುಕೊಂಡ ಪ್ರೇಮಾ ಅವರು ಒಬ್ಬಂಟಿಯಾಗಿ ಇರುವುದಕ್ಕೆ ಅವರಿಗೆ ಇನ್ನೊಂದು ಮದುವೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಪ್ರೇಮಾ ಅವರಿಗೆ ಈಗ 44 ವರ್ಷ ವಯಸ್ಸಾಗಿದೆ. ಪ್ರೇಮಾ ಅವರ ತಮ್ಮ ಕ್ರಿಕೆಟಿಗ ಅಯ್ಯಪ್ಪ ಅವರು ಕೂಡ ಮದುವೆಯಾಗಿದ್ದಾರೆ. ಆದರೆ ತಂದೆಯನ್ನು ಕಳೆದುಕೊಂಡ ಪ್ರೇಮಾ ಅವರು ಇದೀಗ ತಾಯಿಯ ಜೊತೆ ಇದ್ದು ಒಬ್ಬಂಟಿ ಜೀವನವನ್ನು ಮಾಡುತ್ತಿದ್ದಾರೆ.

ಹೀಗಾಗಿ ಪ್ರೇಮಾ ಅವರಿಗೆ ಅವರ ತಾಯಿ ಇನ್ನೊಂದು ಮದುವೆ ಮಾಡಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಪ್ರೇಮಾ ಅವರ ತಾಯಿ ಪ್ರೇಮ ಅವರ ಮುಂದೆ ಇಟ್ಟಿದ್ದಾರೆ. ಆದರೆ ಪ್ರೇಮ ಅವರು ಮದುವೆಯಾಗುವುದಿಲ್ಲವೆಂದು ಹೇಳುತ್ತಿದ್ದು ತಾಯಿಯ ಮಾತನ್ನು ನೆರವೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಏನೇ ಆಗಲಿ ಪ್ರೇಮ ಅವರ ವೈಯಕ್ತಿಕ ಜೀವನವು ಸುಧಾರಿಸಿ ಒಳ್ಳೆಯ ರೀತಿಯಿಂದ ಜೀವನವಾಗಲಿ ಎಂದು ಕೇಳಿಕೊಳ್ಳೋಣ.

By

Leave a Reply

Your email address will not be published. Required fields are marked *