Pradeep Eshwar: 2023ರ ಚುನಾವಣೆಯಲ್ಲಿ ಹುಬ್ಬೇರಿಸುವಂತೆ ಮಾಡಿದ್ದು ಚಿಕ್ಕಬಳ್ಳಾಪುರದ ರಿಸಲ್ಟ್. ಇಲ್ಲಿನ ಅಭ್ಯರ್ಥಿ ಕೆ ಸುಧಾಕರ್ ಅವರ ಸೋಲು ಎಲ್ಲರಲ್ಲಿಯೂ ಆಶ್ಚರ್ಯ ಉಂಟು ಮಾಡಿದೆ. ಸುಧಾಕರ್ (Sudhakar) ವಿರುದ್ಧ ಗೆದ್ದು ಬೀಗಿದ ಈ ಪ್ರದೀಪ್ ಈಶ್ವರ್ ಯಾರು? ಆಗುವವರು ಈ ಚುನಾವಣೆಯನ್ನು ಗೆಲ್ಲಲು ಕಾರಣವೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಕೆ ಸುಧಾಕರ್ ಅವರು ಮೊದಲಿನಿಂದ ರಾಜಕೀಯದಲ್ಲಿ ಇದ್ದವರು ಹಾಗೂ ಇವರು ಆರೋಗ್ಯದ ಸಚಿವರಾಗಿದ್ದರು ಇಂತಹ ಪ್ರಭಾವಿ ನಾಯಕ ಸೋತಿದ್ದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಕೆ ಸುಧಾಕರ್ ಅವರನ್ನು ಸೋಲಿಸಲು ಆಗುವುದಿಲ್ಲ ಎನ್ನುವ ಮಾತು ಕೂಡ ಜನರ ಬಾಯಲ್ಲಿ ಬರುತ್ತಿತ್ತು ಆದರೂ ಕೂಡ ಪ್ರದೀಪ್ ಈಶ್ವರ್ ಅವರಿಗೆ ಗೆಲುವಾಯಿತು ಇದಕ್ಕೆ ಕಾರಣವೇನೆಂದು ಪ್ರದೀಪ್ ಈಶ್ವರ್ ಅವರ ಬಳಿ ಕೇಳಿದಾಗ ಅವರು ತನ್ನ ಗೆಲುವಿಗೆ ಆತ್ಮವಿಶ್ವಾಸವೇ ಕಾರಣ ಎಂದರು.
ಕೆ ಸುಧಾಕರ್ ಅವರಿಗೆ ಸೆಲೆಬ್ರಿಟಿ ಹಾಗೂ ಬಿಜೆಪಿ ಹೈಕಮಾಂಡ್ ಅವರ ಬೆಂಬಲವಿತ್ತು ಆದರೆ ನನಗೆ ನನ್ನ ಆತ್ಮವಿಶ್ವಾಸ ಹಾಗೂ ನನ್ನ ಪ್ರಮುಖ ಪ್ರಾಮಾಣಿಕತೆ ನನ್ನನ್ನು ಗೆಲ್ಲಿಸಿತು ಎಂದು ಪ್ರದೀಪ್ ಈಶ್ವರ ಅವರು ಹೇಳಿಕೊಂಡಿದ್ದಾರೆ. ಚುನಾವಣೆಗೆ ಬಳಸಿದ ಹಣ 27 ಲಕ್ಷ ಹಾಗೂ ನಾನು ಜನರಿಗೆ ಯಾವುದೇ ರೀತಿಯಾದಂತಹ ಹಣವನ್ನು ಮತ ಹಾಕಲು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪ್ರದೀಪ್ ಈಶ್ವರ್ ಅವರು ಚುನಾವಣೆಗಿಂತ ಮೊದಲು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದರು 22 ಜನ ಅಪ್ಪ ಅಮ್ಮ ಇಲ್ಲದ ಅನಾಥ ಮಕ್ಕಳಿಗೆ ಓದಿಸಿದ್ದಾರೆ. ನನ್ನ ವಿದ್ಯಾರ್ಥಿಗಳು ಡಾಕ್ಟರ್ ಇಂಜಿನಿಯರ್ ಆಗಿದ್ದಾರೆ ಎಂದು ಪ್ರದೀಪ್ ಈಶ್ವರ ಅವರು ಹೇಳಿದ್ದಾರೆ. ಇವರ ಇಂತಹ ಪ್ರಾಮಾಣಿಕತೆ ಅವರ ಗೆಲುವಿಗೆ ಸಾಕ್ಷಿಯಾಯಿತು ಎಂದು ಇವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Aishwariyaa Bhaskaran: ಸಿನಿಮಾ ಅವಕಾಶ ಇಲ್ದೆ ಸೋಪು ಮಾರುತಿದ್ದ ನಟಿ ಲಕ್ಷ್ಮಿ ಮಗಳಿಗೆ, ಖಾಸಗಿ ವಿಡಿಯೋ ಕಳುಹಿಸಿ ಕಾಟ ಕೊಟ್ಟ ಕಾಮುಕರು