ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಪುನೀತ್ ರಾಜ್‌ಕುಮಾರ್, ಸಾಕ್ಷ್ಯಚಿತ್ರವೊಂದರ ಸಲುವಾಗಿ ಗಾಜನೂರಿಗೆ ಭೇಟಿ ನೀಡಿದ್ದಾರೆ. ವರನಟ ಡಾ.ರಾಜ್ ಆಡಿ ಬೆಳೆದ ಮನೆಗೆ ಪುನೀತ್ ಭೇಟಿ. ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಗುರುವಾರ ತಮ್ಮ ತಂದೆ ಡಾ.ರಾಜ್‌ಕುಮಾರ್ ಅವರ ಹುಟ್ಟೂರು, ತಾಳವಾಡಿ ಸಮೀಪದ ದೊಡ್ಡ ಗಾಜನೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಕಳೆದ 4 ದಿನಗಳಿಂದ ಇದರ ಚಿತ್ರೀಕರಣ ನಡೆಯುತ್ತಿದ್ದು, ವನ್ಯಜೀವಿಗಳ ಕುರಿತು ಸಾಕ್ಷ್ಯಚಿತ್ರ ತಯಾರಾಗ್ತಿದೆ. ಚಾಮರಾಜನಗರ ಜಿಲ್ಲೆಯ ಬಿಆರ್ ಟಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ಬೂದಿಪಡಗ, ಪುಣಜನೂರು, ಬೇಡಗುಳಿ, ಹೊನ್ನಮೇಟಿ ಸೇರಿದಂತೆ ಇತರೆ ಪ್ರಸಿದ್ಧ ಜಾಗದಲ್ಲಿ ಶೂಟಿಂಗ್ ನಡೆಸಲಾಗಿದೆ. ತಮ್ಮದೇ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಮೂರು ದಿನಗಳಿಂದ ತೊಡಗಿದ್ದ ಅವರು ಗುರುವಾರ ತಂದೆಯ ಹುಟ್ಟಿದ ಮನೆ, ಅವರು ಓಡಾಡಿದ ಜಾಗಗಳಿಗೆ ಭೇಟಿ ನೀಡಿದರು.
ಈ ವೇಳೆ ಬಿಡುವು ಮಾಡಿಕೊಂಡು ಪುನೀತ್ ತಮ್ಮ ತಂದೆ, ವರನಟ ಹುಟ್ಟಿ ಬೆಳೆದ ಮನೆಗೆ ಭೇಟಿ ನೀಡಿದ್ದಾರೆ. ಹಳೇ ಮನೆಯ ತುಂಬೆಲ್ಲ ಓಡಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಡಾ.ರಾಜ್ ಕುಮಾರ್ ತಂಗಿ ನಾಗಮ್ಮ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಗಾಜನೂರಿಗೆ ಹೋದಾಗ ಅಣ್ಣಾವ್ರು ಕುಳಿತುಕೊಳ್ಳುತ್ತಿದ್ದ ಆಲದ ಮರದ ಬಳಿಗೂ ತೆರಳಿದ ಪುನೀತ್, ಅಲ್ಲಿ ಕೆಲ ಸಮಯ ಕಳೆದರು. ತಂದೆಯ ನೆನಪುಗಳನ್ನು ಮೆಲುಕು ಹಾಕಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದಿದ್ದರು. ಅಭಿಮಾನಿಗಳ ಜೊತೆ ಫೋಟೋ ಫೋಸ್ ನೀಡಿದ್ದಾರೆ. ಇನ್ನು ಮೂರು ದಿನಗಳ ಕಾಲ ಚಿತ್ರೀಕರಣ ಮುಗಿಸಿ ಮರಳಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸೋದರತ್ತೆ ನಾಗಮ್ಮ ಅವರೊಂದಿಗೆ ಪುನೀತ್ ಅವರು ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆಯೇ, ಸುತ್ತಮುತ್ತಲಿನ ಜನರು ಅವರ ಮನೆಯ ಮುಂದೆ ನೆರೆದರು. ಮನೆಯಿಂದ ಬಂದ ಪುನೀತ್, ಅವರೊಂದಿಗೂ ಬೆರೆತರು. ಅಭಿಮಾನಿಗಳು, ಸೆಲ್ಫಿ, ಫೋಟೊಗೆ ಮುಗಿಬಿದ್ದರು. ಚಾಮರಾಜನಗರದಿಂದಲೂ ಹೋಗಿದ್ದ ಕೆಲವು ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ಮಂಗಳವಾರದಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಪುನೀತ್ ರಾಜ್‌ಕುಮಾರ್ ಅವರು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೂಡಿಪಡಗ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವನ್ಯಜೀವಿಗಳ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ. ಚಿತ್ರೀಕರಣಕ್ಕಾಗಿ ಅರಣ್ಯ ಇಲಾಖೆ ಅನುಮತಿಯನ್ನೂ ನೀಡಿತ್ತು. ಪುನೀತ್ ರಾಜ್‌ಕುಮಾರ್ ಅವರು ದೊಡ್ಡ ಗಾಜನೂರು ಭೇಟಿಯ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.