ಅನು ಪ್ರಭಾಕರ್ ಕನ್ನಡ ಚಿತ್ರರಂಗದ ಒಳ್ಳೆಯ ನಟಿ. ಅವರು ಹಲವು ಸಿನಿಮಾಗಳಲ್ಲಿ ಮಾತ್ರವಲ್ಲದೆ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು ಇತ್ತೀಚೆಗೆ ಒಂದು ಫೋಟೋವನ್ನು ಹಾಕಿದ್ದಾರೆ ಅದು ಯಾವ ಫೋಟೋ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಅನು ಪ್ರಭಾಕರ್ ಅವರು ತಮ್ಮ 10 ನೇ ವಯಸ್ಸಿನಲ್ಲಿ ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದಾರೆ. ನಂತರ ಹೃದಯ ಹೃದಯ, ಸ್ನೇಹಲೋಕ ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಕನ್ನಡದಲ್ಲಷ್ಟೇ ಅಲ್ಲದೆ ತಮಿಳಿನಲ್ಲೂ ಸಹ 50 ಕ್ಕೂ ಹೆಚ್ಚು ಚಿತ್ರವನ್ನು ಮಾಡಿದ್ದಾರೆ. ರಘು ಮುಖರ್ಜಿ ಅವರು ಪ್ಯಾರಿಸ್ ಪ್ರಣಯ, ಸವಾರಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರು. ರಘು ಮುಖರ್ಜಿ ಹಾಗೂ ಅನು ಪ್ರಭಾಕರ್ ಅವರು ಮದುವೆಯಾಗಿ ಅವರಿಗೆ ಪುಟ್ಟ ಮುದ್ದಾದ ಮಗಳಿದ್ದಾಳೆ. ಅನು ಪ್ರಭಾಕರ್ ಮುಖರ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿರುತ್ತಾರೆ. ತಮ್ಮನ್ನು ಇನ್ಸ್ಟಾಗ್ರಾಮದಲ್ಲಿ ಹಾಗೂ ಫೇಸ್ ಬುಕ್ ಗಳಲ್ಲಿ ಫಾಲೋ ಮಾಡುವವರಿಗೆ ತಮ್ಮ ಚಿಕ್ಕ ವಯಸ್ಸಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮೇಘನಾ ರಾಜ್ ಅವರ ಕುಟುಂಬಕ್ಕೆ ಸೇರಿದ ಒಂದು ಫೋಟೋವನ್ನು ಅನು ಪ್ರಭಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳಿಗೆ ಸ್ವಲ್ಪ ಆಶ್ಚರ್ಯವಾಗಬಹದು ಏಕೆಂದರೆ ಅನು ಪ್ರಭಾಕರ್ ಅವರ ಕುಟುಂಬ ಹಾಗೂ ಅರ್ಜುನ್ ಸರ್ಜಾ ಅಂದರೆ ಮೇಘನಾ ರಾಜ್ ಅವರ ಕುಟುಂಬಕ್ಕೂ ಸಂಬಂಧ ಇದೆ. ಅರ್ಜುನ ಸರ್ಜಾ ಅವರು ಅನು ಪ್ರಭಾಕರ್ ಅವರ ಸ್ವಂತ ಭಾವ.

ಅನು ಪ್ರಭಾಕರ್ ಅರ್ಜುನ್ ಸರ್ಜಾ ಅವರ ಎಂಗೇಜಮೆಂಟ್ ಫೋಟೋವನ್ನು ಇನ್ಸಟಾಗ್ರಾಮ್ ನಲ್ಲಿ ಶೇರ್ ಮಾಡಿ ನನ್ನ ಅಕ್ಕ ನಿವೇದಿತಾ ಹಾಗೂ ಭಾವ ಅರ್ಜುನ್ ಸರ್ಜಾ ಅವರ ನಿಶ್ಚಿತಾರ್ಥದ ಫೋಟೋ, ಭಾವನ ತೊಡೆಯ ಮೇಲೆ ಚಿರು ಸರ್ಜಾ, ಅಕ್ಕನ ತೊಡೆಯ ಮೇಲೆ ನಾನು ಎಂದು ಅನು ಅವರು ಬರೆದು ಐಶ್ವರ್ಯ ಅರ್ಜುನ್, ರಘು ಮುಖರ್ಜಿ, ಮೇಘನಾ ರಾಜ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅದನ್ನು ನೋಡಿದ ಮೇಘನಾ ರಾಜ್ ಅವರು ಇನ್ಸಟಾಗ್ರಾಮ್ ನಲ್ಲಿ ಐ ಲವ್ ದಿಸ್ ಪಿಕ್ಚರ್ ಎಂದು ರಿಪ್ಲೈ ಮಾಡುವ ಮೂಲಕ ಅವರ ಕುಟುಂಬದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. ಐಶ್ವರ್ಯ ಅರ್ಜುನ್ ಸಹ ಈ ಫೋಟೋವನ್ನು ಇಷ್ಟಪಟ್ಟಿದ್ದಾರೆ. ಈ ಎರಡು ಕುಟುಂಬದವರು ತಮ್ಮ ಸಂಬಂಧವನ್ನು ಮರೆಯದೆ ಖುಷಿಯಾಗಿದ್ದಾರೆ. ಹೀಗೆ ಈ ಎರಡು ಕುಟುಂಬಗಳು ಸಂತೋಷವಾಗಿ ಇರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *