ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳೋದು ಹೇಗೆ?

0 14

ರಾಜ್ಯ ಸರ್ಕಾರ ಕಾರ್ಮಿಕ ಕಾರ್ಡ್ ನ ಸೌಲಭ್ಯ ಒದಗಿಸುವ ಒಳ್ಳೆಯ ಸುದ್ದಿಯನ್ನು ಕಾರ್ಮಿಕರಿಗೆ ನೀಡಿದೆ. ಹಾಗೆಯೇ ಈಗ ರೈತರಿಗೆ ಒಂದು ಹೊಸ ಸುದ್ದಿ ನೀಡಿದೆ. ಪೌತಿಖಾತೆ ಬದಲಾವಣೆ ಇನ್ನು ಮುಂದೆ ಅತ್ಯಂತ ಸುಲಭವಾಗಲಿದೆ. ಪೌತಿಖಾತೆ ಬದಲಾವಣೆಗೆ ಸರಳ ನಿಯಮವನ್ನು ರೂಪಿಸಿದೆ. ಆಂದೋಲನ ರೂಪದಲ್ಲಿ ಪೌತಿಖಾತೆ ಬದಲಾವಣೆಗೆ ಮುಂದಾಗಿದೆ. ನಾವು ಇಲ್ಲಿ ರಾಜ್ಯ ಸರ್ಕಾರದ ಪೌತಿಖಾತೆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾಜ್ಯ ಸರ್ಕಾರ ಪೌತಿಖಾತೆ ಬದಲಾವಣೆಗೆ ಸರಳ ನಿಯಮವನ್ನು ರೂಪಿಸಿದೆ. ಇದು ಆಂದೋಲನ ರೂಪದಲ್ಲಿ ಪೌತಿಖಾತೆ ಬದಲಾವಣೆಗೆ ಮುಂದಾಗಿದೆ. ವ್ಯಕ್ತಿ ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಜಮೀನಿನ ಖಾತೆ ಬದಲಾವಣೆಗಾಗಿ ಸಾಕಷ್ಟು ಸಮಯ ಕಾಯಬೇಕಿತ್ತು. ಈಗ ಇಂತಹವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈಗ ಅದರ ನಿಯಮಗಳನ್ನು ಸಡಿಲಗೊಳಿಸಿ ಪರಿಹಾರ ಮತ್ತು ಭೂಮಿ ತಂತ್ರಾಂಶದಲ್ಲಿ ಬಾಕಿ ಇರುವ ಸುಮಾರು ಎರಡು ಲಕ್ಷದ ಎಪ್ಪತ್ತೊಂದು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಆಂದೋಲನದ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದು ಹೇಳಲಾಗಿದೆ.

ಮ ರಣ ಹೊಂದಿದ ನಂತರ ಮರಣ ಪ್ರಮಾಣ ಪತ್ರ ಮತ್ತು ವಾರಸುದಾರರ ವಂಶವೃಕ್ಷ ಪಡೆದು ಪೌತಿಖಾತೆ ನಮೂನೆಯಲ್ಲಿ ದಾಖಲಿಸಲಾಗುತ್ತದೆ. ಅರ್ಜಿದಾರರ ಮಾಹಿತಿಯನ್ನು ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸಲಾಗುವುದು. ಒಂದು ವೇಳೆ ಕೃಷಿಯ ಜಮೀನಿನ ಮಾಲೀಕರಿದ್ದು ನಿಧನರಾದ ನಂತರ ಪೌತಿಖಾತೆಯು ಉತ್ತರಾಧಿಕಾರಿ ಹೆಸರಿಗೆ ಬದಲಾವಣೆ ಆಗದಿದ್ದಲ್ಲಿ ಸಾಲಪಡೆಯಲು ಮತ್ತು ಸರ್ಕಾರದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಪೌತಿಖಾತೆ ಬದಲಾವಣೆಯ ಯುಟೇಷನ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಯುಟೇಷನ್ ವಿಲೇವಾರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಅಧಿಕೃತವಾದ ಅರ್ಜಿಗಳಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ನಾಡಕಛೇರಿಗಳಲ್ಲಿ ಪೌತಿಖಾತೆ ಮಾಡಿಸಿಕೊಳ್ಳಲು ನಮೂನೆವೊಂದರ ಅರ್ಜಿ ಲಭ್ಯವಿರುತ್ತದೆ. ಈ ನಮೂನೆಯನ್ನು ಭರ್ತಿ ಮಾಡಿ ಪೌತಿಖಾತೆ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮೊದಲು ಪೌತಿಖಾತೆ ಬದಲಾವಣೆ ತರಲು ಬಹಳಷ್ಟು ದಿನ ಕಾಯಬೇಕಿತ್ತು. ಆದರೆ ಈಗ ಬಹಳ ಸುಲಭವಾಗಿದೆ. ಅಷ್ಟೊಂದು ದಿನ ಕಾಯುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಸರ್ಕಾರದಿಂದ ಸುಲಭವಾಗಿ ಸಾಲ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

Leave A Reply

Your email address will not be published.