ಈ ಬಾರಿಯ ಐಪಿಎಲ್ ನಲ್ಲಿ ಅರೇಂಜ್ ಕ್ಯಾಪ್ ಹಾಗೂ ಕಾರು ಸಿಕ್ಕಿದು ಯಾರಿಗೆ ನೋಡಿ

0 1

ಕಷ್ಟದ ಜೀವನದಿಂದ ಬಂದು ಕ್ರಿಕೆಟ್ ಪ್ರಪಂಚದಲ್ಲಿ ಮಿಂಚುತ್ತಿರುವ ಕೆ.ಎಲ್ ರಾಹುಲ್ ಅವರು ಎರಡು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಅದು ಯಾವ ಪ್ರಶಸ್ತಿ ಹಾಗೂ ಬಹುಮಾನ ಕಾರು ಯಾವ ತಂಡಕ್ಕೆ ಸಿಗಲಿದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಇದೀಗ ಕುತೂಹಲಕಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13, 2020 ಮುಗಿದಿದೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್​ಗಳಿಂದ ಮುಂಬೈ ಇಂಡಿಯನ್ಸ್ ತಂಡ ಸೋಲಿಸಿದೆ ಅಲ್ಲದೇ 5 ನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಆದರೆ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ವಿನ್ನರ್​ಗಳು ಮುಂಬೈ ಇಂಡಿಯನ್ಸ್ ತಂಡದವರಲ್ಲ ಎಂಬುದು ವಿಶೇಷವಾಗಿದೆ. ಆ ಪ್ರಶಸ್ತಿಯನ್ನು ಪಡೆದವರು ಕೆ.ಎಲ್ ರಾಹುಲ್.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾದ ಕೆ.ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೂರ್ನಿಯಲ್ಲಿ 670 ರನ್​ಗಳೊಂದಿಗೆ ಭರ್ಜರಿ ಪ್ರದರ್ಶನ ನೀಡಿದ ಕೆ.ಎಲ್ ರಾಹುಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಬೇಸರದ ವಿಷಯವೆಂದರೆ ಆರಂಭದಿಂದಲೂ ಕುತೂಹಲಕ್ಕೆ ಕಾರಣವಾಗಿದ್ದ ಆಲ್ಟ್ರೋಜ್ ಕಾರು ಮಾತ್ರ ಮುಂಬೈ ಇಂಡಿಯನ್ಸ್​ ತಂಡದವರ ಪಾಲಾಗಿದೆ. ಒಟ್ಟಿನಲ್ಲಿ ಕೆ.ಎಲ್ ರಾಹುಲ್ ಅವರ ಉತ್ತಮ ಆಟಕ್ಕೆ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಲಭಿಸಿತು ಅವರಿಗೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸೋಣ.

Leave A Reply

Your email address will not be published.