pomegranate benefits for health: ಎಲ್ಲಾ ಸೀಸನ್ಗಳಲ್ಲೂ ಮಾರ್ಕೆಟ್ ನಲ್ಲಿ ಸಿಗುವಂತಹ ಹಣ್ಣು ಅಂದರೆ ಅದು ದಾಳಿಂಬೆ ಹಣ್ಣು. ಹೌದು ಇದು ವರ್ಷಪೂರ್ತಿ ಸಿಗುವಂತಹ ಹಣ್ಣು ಅಂತಾನೆ ಹೇಳಬಹುದು. ಆದರೆ ಈ ಹಣ್ಣಿನ ಬೆಲೆ ಮಾತ್ರ ಯಾವಾಗಲೂ ಜಾಸ್ತಿ ಇರುತ್ತದೆ. ಅದಕ್ಕೆ ಹೆಚ್ಚು ಜನರು ಈ ಹಣ್ಣಿನ ಗೋಜಿಗೆ ಹೋಗುವುದಿಲ್ಲ. ಹಣ್ಣಿನ ಬೆಲೆ ಹೆಚ್ಚಾದರೂ ಪರವಾಗಿಲ್ಲ ಆದರೆ ಈ ಹಣ್ಣನ್ನ ನೀವು ದಿನಾಲು ತಿನ್ನಲೇಬೇಕು. ಈ ಹಣ್ಣಿನ ಉಪಯೋಗವನ್ನು ನಾವು ತಿಳಿದುಕೊಳ್ಳೋಣ.
ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ಸ್ ಗಳು, ಖನಿಜಾಂಶಗಳು ಮತ್ತು ಪೊಲೀಕ್ ಆಸಿಡ್ಗಳು ಇರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಹಕ್ಕೆ ವಿಶೇಷವಾದ ಆಂಟಿ ಆಕ್ಸಿಡೆಂಟನ್ನ ಒದಗಿಸುತ್ತದೆ ಅಂತಾನೆ ಹೇಳಬಹುದು. ರಕ್ತದ ಒತ್ತಡವು ಈಗಿನ ಜನರೇಶನ್ ನಲ್ಲಿ ಅಧಿಕವಾಗಿಬಿಟ್ಟಿದೆ. ವೈದ್ಯರು ಕೊಡುವ ಮೆಡಿಸಿನ್ ಜೊತೆಗೆ ಈ ದಾಳಿಂಬೆ ಹಣ್ಣನ್ನು ಕೂಡ ನಾವು ನಿಯಮಿತವಾಗಿ ತಿಂದರೆ ರಕ್ತದೊತ್ತಡವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು.
pomegranate benefits for health
ದಾಳಿಂಬೆ ಹಣ್ಣನ್ನ ತಿನ್ನುವುದರಿಂದ ಹೃದ್ರೋಗ ಬರುವುದಿಲ್ಲ. ಹೃದಯವನ್ನು ಗಟ್ಟಿಯಾಗಿ ಇಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಹೃದಯದ ಸಮಸ್ಯೆ ಇರುವವರು ಪ್ರತಿದಿನ ದಾಳಿಂಬೆ ಜ್ಯೂಸನ್ನು ಸೇವಿಸಬೇಕು. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಹಾಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೆಲ್ಲ ದೂರ ಮಾಡುತ್ತದೆ.
ಇನ್ನು ವಿಶೇಷವಾಗಿ ಎಂದರೆ ಪುರುಷರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಯಾರ ಹತ್ತಿರನು ಕೂಡ ಹೇಳಿಕೊಳ್ಳಲಾಗದ ಒಂದು ಸಮಸ್ಯೆ ಇದು. ಹೀಗಾಗಿ ಪುರುಷರು ಒಂದು ಲೋಟ ದಾಳಿಂಬೆ ಜ್ಯೂಸನ್ನು ದಿನನಿತ್ಯ ಸೇವಿಸುವುದರಿಂದ ಅವರ ಸಮಸ್ಯೆ ದೂರವಾಗುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ದಿನನಿತ್ಯ ಕುಡಿಯುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಇದು ತಡೆಗಟ್ಟುತ್ತದೆ. ಇದಕ್ಕೆ ಕಾರಣ ಈ ಹಣ್ಣಿನಲ್ಲಿರುವ ಪಾಲಿಪಿನಾಲ್ ಎಂಬ ಆಂಟಿ ಆಕ್ಸಿಡೆಂಟ್ ಕಾರಣವಾಗಿದೆ.
ಅಷ್ಟೇ ಅಲ್ಲ ಇದು ಸೌಂದರ್ಯವರ್ಧಕವು ಆಗಿದೆ, ಇದನ್ನ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ದಾಳಿಂಬೆ ಹಣ್ಣಿನ ಜ್ಯೂಸ್ ಅನ್ನ 14 ಕುಡಿತ ಬಂದರೆ ನಿಮಗೆ ಕೇವಲ ಎರಡು ವಾರದಲ್ಲಿ ಇದರ ಫಲಿತಾಂಶ ಕಾಣುತ್ತದೆ ಮುಖದ ಚರ್ಮ ಹೊಳೆಯುತ್ತದೆ. ಒಳ್ಳೆಯ ಗ್ಗ್ಲೋ ಕಾಣಿಸುತ್ತದೆ. ಇಷ್ಟೆಲ್ಲ ದಾಳಿಂಬೆ ಹಣ್ಣಿನ ಪ್ರಯೋಜನವನ್ನು ಎಷ್ಟು ಹೇಳಿದರು ಸಾಲದು. ಇನ್ನು ಹತ್ತು ಹಲವಾರು ಪ್ರಯೋಜನಗಳಿವೆ.