ಕೆಲವು ವಿಶೇಷ ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತದೆ ಅಥವಾ ಕೆಲವು ವಿಷಯಗಳ ಬಗ್ಗೆ ನಾವು ಎಂದಿಗೂ ಯೋಚಿಸುವುದಿಲ್ಲ. ಉದಾಹರಣೆಗೆ ಪೊಲೀಸ್ ಯೂನಿಫಾರ್ಮ್ ಮೇಲೆ ಸ್ಟಾರ್ ಏಕೆ ಇರುತ್ತದೆ, ಚೈನಾ ಬರಗಾಲ ಎದುರಿಸುತ್ತದೆ ಅದಕ್ಕೆ ಕಾರಣ ಹೀಗೆ ಅನೇಕ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮೊಬೈಲ್ ನಲ್ಲಿ ಗೂಗಲ್ ಮ್ಯಾಪ್ ಬಳಸುವಾಗ ಒಂದು ವಾಯ್ಸ್ ಬರುತ್ತದೆ ಈ ವಾಯ್ಸ್ ನ್ಯೂಯಾರ್ಕ್ ನಗರದ ಒಬ್ಬ ಸೆಲೆಬ್ರಿಟಿ ಅವರದ್ದು ಆದರೆ ಈಗ ಅಮಿತಾ ಬಚ್ಚನ್ ಅವರು ಗೂಗಲ್ ನಲ್ಲಿ ವಾಯ್ಸ್ ಕೊಡಲಿದ್ದಾರೆ. ವಿಜ್ಞಾನಿಗಳು ಹೆಡ್ ಬ್ಯಾಗ್ಸ್ ತಯಾರಿಸಿದ್ದಾರೆ ಅದನ್ನು ಕುತ್ತಿಗೆಗೆ ಹಾಕಿಕೊಂಡಾಗ ಅಪಘಾತವಾಗುವ ಸಮಯದಲ್ಲಿ ತಲೆಯನ್ನು ರಕ್ಷಿಸುತ್ತದೆ ಮುಂದಿನ ದಿನದಲ್ಲಿ ಭಾರತಕ್ಕೂ ಬರಲಿದೆ. ಹೈಸ್ಪೀಡ್ ಇರುವ ಬೈಕನ್ನು ಟರ್ನ್ ಮಾಡಲು ಕಷ್ಟ ಆಗುತ್ತದೆ ಈ ಸಮಸ್ಯೆಯನ್ನು ನಿವಾರಿಸಲು ಯಮಹ ಕಂಪನಿ ನೈಕೆನ್ ಎಂಬ ಬೈಕ್ ಅನ್ನು ಬಿಡುಗಡೆ ಮಾಡಿದೆ ಈ ಬೈಕಿಗೆ ಫ್ರಂಟ್ ಎರಡು ಟೈಯರ್ ಅನ್ನು ಯೂಸ್ ಮಾಡಿದ್ದಾರೆ ಇದರಿಂದ ಎಷ್ಟೇ ಸ್ಪೀಡ್ ಇದ್ದರು ಟರ್ನ್ ಮಾಡುವಾಗ ಬೈಕ್ ಕೆಳಗೆ ಬೀಳುವುದಿಲ್ಲ.

2018ರಲ್ಲಿ ಟರ್ಕಿ ದೇಶದಲ್ಲಿ ಒಬ್ಬ ಫುಟ್ಬಾಲ್ ಅಭಿಮಾನಿಯನ್ನು ಫುಟ್ಬಾಲ್ ಅಥಾರಿಟಿ ಕಾರಣಾಂತರಗಳಿಂದ ಆತನನ್ನು 12 ವರ್ಷ ಸ್ಟೇಡಿಯಂಗೆ ಬರದಂತೆ ನಿಷೇಧ ಹೇರುತ್ತದೆ ಆದರೆ ಆತ ಫುಟ್ಬಾಲ್ ಆಟವನ್ನು ನೋಡಲು ಕ್ರೇನ್ ನನ್ನು ಬಾಡಿಗೆ ತೆಗೆದುಕೊಂಡು ಗ್ರೌಂಡ್ ಪಕ್ಕದಲ್ಲಿಟ್ಟು ಅದರ ಮೇಲೆ ನಿಂತುಕೊಂಡು ನೋಡುತ್ತಾನೆ.

1951 ರಲ್ಲಿ ಚೈನಾದಲ್ಲಿ ಗುಬ್ಬಿಗಳ ಸಂಖ್ಯೆ ಹೆಚ್ಚಾಗಿ ಆಹಾರಧಾನ್ಯವನ್ನು ತಿನ್ನುತ್ತಿದ್ದವು ಆಗಿನ ಕಾಲದಲ್ಲಿ ಚೈನಾ ಸರ್ಕಾರಕ್ಕೆ ಇದೊಂದು ಸಮಸ್ಯೆಯಾಗುತ್ತದೆ. ಈ ಕಾರಣದಿಂದ ಗುಬ್ಬಿಗಳನ್ನು ಕೊಲ್ಲಲು ಪ್ರಾರಂಭಿಸುತ್ತಾರೆ ಲಕ್ಷಾಂತರ ಗುಬ್ಬಿಗಳು ಸಾಯುತ್ತವೆ. ಪ್ರಕೃತಿ ಮನುಷ್ಯರ ಮೇಲೆ ತನ್ನ ಕೋಪವನ್ನು ತೋರಿಸಿಕೊಳ್ಳಲು ಆಗಲೇ ಆರಂಭಿಸುತ್ತದೆ. ಗುಬ್ಬಿಗಳಿಲ್ಲದೆ ಹುಳುಗಳು ಧಾನ್ಯಗಳನ್ನು ತಿನ್ನುತ್ತವೆ. ಧಾನ್ಯಗಳಿಲ್ಲದೆ ಬರಗಾಲ ಉಂಟಾಗುತ್ತದೆ. ಬರಗಾಲದಲ್ಲಿ 4ಕೋಟಿ 50 ಲಕ್ಷ ಜನರು ಆಹಾರವಿಲ್ಲದೆ ಸಾ ಯುತ್ತಾರೆ ಆಗ ಚೈನಾ ಬೇರೆ ದೇಶದಿಂದ ಗುಬ್ಬಿಗಳನ್ನು ಆಮದು ಮಾಡಿಕೊಳ್ಳುತ್ತದೆ.

ಮನುಷ್ಯರು ಪ್ರಕೃತಿಯ ವಿರುದ್ಧ ಹೋದರೆ ಹೀಗೆ ಆಗುತ್ತದೆ. 1975 ರಲ್ಲಿ ಅಲೆಕ್ಸಾ ಮಿಚೆಲ್ ಎಂಬ ವ್ಯಕ್ತಿ ಟಿವಿಯಲ್ಲಿ ಪ್ರಸಾರವಾಗುವ ಒಂದು ಕಾಮಿಡಿ ಶೋ ನೋಡುತ್ತಾ 25 ನಿಮಿಷಗಳ ಕಾಲ ನಿರಂತರವಾಗಿ ನಗುತ್ತಾ ಸತ್ತು ಹೋಗುತ್ತಾನೆ. ಅವನ ಹೆಂಡತಿ ತನ್ನ ಗಂಡನ ಕೊನೆಯ ಕ್ಷಣದಲ್ಲಿ ಸಂತೋಷವಾಗಿ ಇರುವಂತೆ ನೋಡಿಕೊಂಡ ಕಾಮಿಡಿ ಶೋ ಗೆ ಧನ್ಯವಾದ ತಿಳಿಸುತ್ತಾಳೆ. 2013ರಲ್ಲಿ ಮುಂಬೈನ 22 ವರ್ಷದ ಯುವಕ ಗ್ರ್ಯಾಂಡ್ ಮಸ್ತಿ ಸಿನಿಮಾ ನೋಡಿ ನಕ್ಕು ಹಾರ್ಟ್ ಅಟ್ಯಾಕ್ ನಿಂದ ಸಾಯುತ್ತಾನೆ.

ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಜಿಯೋ ಕಂಪನಿಗೆ ಗೂಗಲ್ ಕಂಪನಿ ಇನ್ವೆಸ್ಟ್ ಮಾಡಲಿದೆ. ಮುಖೇಶ್ ಅವರ ಒಟ್ಟು ಆಸ್ತಿಯಲ್ಲಿ ದಿನಕ್ಕೆ ಕೋಟಿ ರೂಪಾಯಿ ಖರ್ಚು ಮಾಡಿದರು ಸಾವಿರ ವರ್ಷಗಳು ಬೇಕಾಗುತ್ತದೆ.

ಪೊಲೀಸ್ ಯೂನಿಫಾರ್ಮ್ ಮೇಲೆ 1,2,3 ಸ್ಟಾರ್ ಇರುತ್ತದೆ. ಎಎಸ್ಐ ಅವರ ಯೂನಿಫಾರ್ಮ್ ಭುಜದ ಮೇಲೆ 1 ಸ್ಟಾರ್, ಸಬ್ ಇನ್ಸ್ಪೆಕ್ಟರ್ ಯೂನಿಫಾರ್ಮ್ ಭುಜದ ಮೇಲೆ 2 ಸ್ಟಾರ್, ಇನ್ಸ್ಪೆಕ್ಟರ್ ಅವರ ಯೂನಿಫಾರ್ಮ್ ಭುಜದ ಮೇಲೆ 3 ಸ್ಟಾರ್ ಇರುತ್ತದೆ ಹೀಗೆ ಮೇಲಾಧಿಕಾರಿಗಳ ಯೂನಿಫಾರ್ಮ್ ಭುಜದ ಮೇಲೆ ಬೇರೆಬೇರೆ ಸಂಕೇತಗಳು ಇರುತ್ತದೆ. ಮುಸ್ಲೀಮರು 786 ನಂಬರನ್ನು ಬಳಸುತ್ತಾರೆ ಇದಕ್ಕೆ ಕಾರಣ ಅವರ ಸಂಪ್ರದಾಯದಲ್ಲಿ ಪ್ರತಿಯೊಂದು ಅಕ್ಷರಗಳಿಗೂ ಒಂದೊಂದು ಸಂಖ್ಯೆ ಇರುತ್ತದೆ ಅಲ್ಲಾ ಅವರನ್ನು ಕರೆಯುವ ಹೆಸರುಗಳಲ್ಲಿ ಈ ಸಂಖ್ಯೆಗಳು ಬಳಸಲಾಗುತ್ತದೆ ಆದ್ದರಿಂದ ಮುಸ್ಲೀಮರು ಈ ಸಂಖ್ಯೆಗಳನ್ನು ಬಳಸುತ್ತಾರೆ.

Leave a Reply

Your email address will not be published. Required fields are marked *