ನೀವು ತಿನ್ನುವಂತ ಮ್ಯಾಗಿ ಹುಟ್ಟಿಕೊಂಡಿದ್ದೇ ಒಂದು ರೋಚಕ ಕಥೆ ನೋಡಿ.!

0 0

ಎಲ್ಲರ ಮನೆಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಫಾಸ್ಟ್ ಫುಡ್ ಮ್ಯಾಗಿ. ಸಣ್ಣ ಮಕ್ಕಳು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ಮಾಡುವ ದಂಪತಿಗಳ ಬ್ರೇಕ್ ಫಾಸ್ಟ್ ಮ್ಯಾಗಿ ಆಗಿದೆ. ಇಂತಹ ಮ್ಯಾಗಿಗೆ ಈ ಹೆಸರು ಬರಲು ಕಾರಣವೇನು ಹಾಗೂ ಇದರ ಬೆಳವಣಿಗೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತನ್ನದೇ ಆದ ಕೆಲಸ ಇರುತ್ತದೆ. ಒಬೊಬ್ಬರೇ ದೂರದ ನಗರಗಳಿಗೆ ಹೋಗಿ ಕೆಲಸ ಮಾಡುತ್ತಿರುತ್ತಾರೆ ಆಗ ಸರಿಯಾದ ಸಮಯಕ್ಕೆ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಆಗುವುದಿಲ್ಲ. ಕೆಲವರಿಗೆ ಅಡುಗೆ ಮಾಡಲು ಸಮಯ ಇದ್ದರೂ ಅಡುಗೆ ಮಾಡಲು ಬರುವುದಿಲ್ಲ ಹುಡುಗರಿಗೆ ಅಡುಗೆ ಬರುವುದು ಸ್ವಲ್ಪ ಕಷ್ಟವೆ. ಇಂತಹ ಸಂದರ್ಭದಲ್ಲಿ 2 ನಿಮಿಷದಲ್ಲಿ ಒಂದೇ ರೀತಿಯ ಅಡುಗೆ ಮಾಡುವ ಮ್ಯಾಗಿ ಎಂಬ ಫಾಸ್ಟ್ ಫುಡ್ ಎಲ್ಲರಿಗೂ ಸಹಾಯಕವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮ್ಯಾಗಿ ಗೊತ್ತಿದೆ.

ಈ ಮ್ಯಾಗಿಯ ಹಿಂದೆ ರೋಚಕ ಕಥೆಯಿದೆ. 1846 ಅಕ್ಟೋಬರ್ 4 ರಂದು ಜ್ಯೂಲಿಯಸ್ ಮ್ಯಾಗಿ ಎನ್ನುವವರು ಹುಟ್ಟುತ್ತಾರೆ ಈ ಫ್ಯಾಮಿಲಿ ಇಂಡಸ್ಟ್ರಿಯಲ್ ಫುಡ್ ಪ್ರೊಡಕ್ಷನ್ ಎಂಬ ಕಂಪನಿಯನ್ನು ನಡೆಸುತ್ತಿರುತ್ತದೆ. ಜ್ಯೂಲಿಯಸ್ ಮ್ಯಾಗಿ ತಮ್ಮ ಕಂಪನಿಯ ಜವಾಬ್ದಾರಿ ಹೊರುತ್ತಾರೆ ಸ್ವಲ್ಪ ವರ್ಷದ ನಂತರ ಅವರ ಕಂಪನಿ ನಷ್ಟಕ್ಕೆ ಗುರಿಯಾಗುತ್ತದೆ. ಆ ಸಮಯದಲ್ಲಿ ಹೊಸದಾದ ಫುಡ್ ಪ್ರೊಡಕ್ಟ ತಯಾರಿಸಿ ಮಾರಬೇಕೆಂದು ನಿರ್ಧಾರ ಮಾಡುತ್ತಾರೆ. ಆ ಸಮಯದಲ್ಲಿ ಇಂಡಸ್ಟ್ರಿಯಲ್ಲಿ ಅನೇಕ ಬದಲಾವಣೆಗಳು ಕಂಡುಬಂದಿತು. ಇದನ್ನು ನೋಡಿದ ಜ್ಯೂಲಿಯಸ್ ಮ್ಯಾಗಿ ಎಂಬ ವಿಭಿನ್ನವಾದ ರೆಡಿಮೇಡ್ ನೂಡಲ್ಸ್ ತಯಾರಿಸುತ್ತಾರೆ. ಮೊದಲು ಅಷ್ಟೊಂದು ಮಾರಾಟವಾಗದೆ ಇದ್ದರೂ ನಂತರದ ದಿನಗಳಲ್ಲಿ ಮ್ಯಾಗಿ ಎಲ್ಲರಿಗೂ ಅವಶ್ಯಕತೆಯಾಯಿತು ಇದರಿಂದ ಜ್ಯೂಲಿಯಸ್ ಮ್ಯಾಗಿ ಅವರ ಕಂಪನಿ ಲಾಭ ಗಳಿಸಿತು.

ನಂತರ ಮ್ಯಾಗಿ ಸಾಸ್, ಮ್ಯಾಗಿ ಮಸಾಲ ಉತ್ಪನ್ನಗಳನ್ನು ತಯಾರಿಸಲಾಯಿತು. ಒಂದು ಕಾಲದಲ್ಲಿ ನಷ್ಟ ಅನುಭವಿಸಿ ಕಂಪನಿ ಮುಚ್ಚಲು ನಿರ್ಧರಿಸಿದ ಕಂಪನಿಯು ಮ್ಯಾಗಿ ಎಂಬ ಒಂದು ಉತ್ಪನ್ನದಿಂದ ಲಾಭ ಗಳಿಸಲು ಹಾಗೂ ಜನರ ಬೇಡಿಕೆಯನ್ನು ಈಡೇರಿಸುವಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿತು. ಇಡೀ ಜಗತ್ತಿನಲ್ಲಿ ಮ್ಯಾಗಿ ಎಂಬ ಪ್ರೊಡಕ್ಟ್ ಫೇಮಸ್ ಆಗಬೇಕೆಂದು ನೆಸ್ಲೆ ಎಂಬ ಕಂಪನಿಯೊಂದಿಗೆ ಮರ್ಜ್ ಆಗುತ್ತದೆ. ನಂತರ ನೆಸ್ಲೆ ಕಂಪನಿ ಜಾಹೀರಾತಿನ ಮೂಲಕ ಹಲವು ಕಡೆ ಮ್ಯಾಗಿ ಪ್ರೊಡಕ್ಟನ್ನು ಜನರ ಮುಂದೆ ಇಡುತ್ತಾರೆ. ಪ್ರಪಂಚದ ತುಂಬಾ ಮ್ಯಾಗಿ ಫೇಮಸ್ ಆಗುತ್ತಿರುವ ಸಮಯದಲ್ಲಿ ಭಾರತಕ್ಕೂ ಬಂದು ಇಲ್ಲಿಯ ಜನರು ಮ್ಯಾಗಿಯನ್ನು ಖರೀದಿಸುತ್ತಾರೆ.

ಮ್ಯಾಗಿಯ 75% ಉತ್ಪನ್ನವನ್ನು ಭಾರತದಲ್ಲಿ ಖರೀದಿಸಲಾಗುತ್ತದೆ. 2015 ರಲ್ಲಿ ಫುಡ್ ಸೇಫ್ಟಿಂಗ್ ನಿಯಂತ್ರಕರು ಮ್ಯಾಗಿಯಲ್ಲಿ ಕಲಬೆರಕೆ ಇದೆ ಎಂದು ನೀಡಿದ ವರದಿ ಮೇಲೆ ಸರ್ಕಾರ ಮ್ಯಾಗಿ ಕಂಪನಿ ಮೇಲೆ ಕ್ರಮ ಕೈಗೊಂಡು ಬ್ಯಾನ್ ಮಾಡಿತು. ನಂತರ ಲ್ಯಾಬ್ ರಿಪೋರ್ಟ್ ಮೂಲಕ ಮ್ಯಾಗಿಯಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದು ಸಾಬೀತಾಗುತ್ತದೆ. ನಂತರ ಬೇರೆ ಬೇರೆ ಕಡೆ ಮ್ಯಾಗಿಯನ್ನು ಲ್ಯಾಬ್ ಟೆಸ್ಟ್ ಮಾಡಿಸಿದಾಗ ಮ್ಯಾಗಿಯಲ್ಲಿ ಕಲಬೆರಕೆ ಇಲ್ಲ ಎಂದು ತಿಳಿದುಬಂದಿತು. ಆಗ ಸರ್ಕಾರ ಬ್ಯಾನ್ ಮಾಡಿರುವುದನ್ನು ಹಿಂತೆಗೆದುಕೊಳ್ಳುತ್ತದೆ ಆದರೆ ಜನರು ಮ್ಯಾಗಿ ಉತ್ಪನ್ನಗಳನ್ನು ಮೊದಲಿನ ಹಾಗೆ ಖರೀದಿಸಲು ಮುಂದಾಗುವುದಿಲ್ಲ. ಕೆಲವೇ ಸಮಯದಲ್ಲಿ ಮೊದಲಿನ ಸ್ಥಾನವನ್ನು ಮ್ಯಾಗಿ ಪಡೆಯುತ್ತದೆ. ಜ್ಯೂಲಿಯಸ್ ಮ್ಯಾಗಿ ತಮ್ಮ ಕಂಪನಿಯನ್ನು ನಷ್ಟ ಅನುಭವಿಸಿದಾಗ ಮುಚ್ಚಿದ್ದರೆ ಇವತ್ತು ರೆಡಿಮೇಡ್ ನೂಡಲ್ಸ್ ಸಿಗುತ್ತಿರಲಿಲ್ಲ ಇದಕ್ಕೆ ಕಾರಣರಾದ ಜ್ಯೂಲಿಯಸ್ ಮ್ಯಾಗಿ ಅವರಿಗೆ ಒಂದು ಧನ್ಯವಾದಗಳು. ಹೀಗೆ ಮ್ಯಾಗಿ ಎಂಬ ಕುಟುಂಬದಿಂದ ಈ ಹೆಸರು ಬಂದಿರುವ ಕಥೆ ರೋಚಕವಾಗಿದೆ.

Leave A Reply

Your email address will not be published.