ಹೊಸ ಮನೆ ಪ್ಲಾಸ್ಟರಿಂಗ್ ಮಾಡಿಸುವಾಗ ಗಮನದಲ್ಲಿಡಬೇಕಾದ ವಿಚಾರ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಹೊಸ ಮನೆ ಕಟ್ಟಿದ ನಂತರ ಎರಡು ತಿಂಗಳ ಒಳಗೆ ಮನೆಯ ಗೋಡೆಗೆ ಹೇರ್ ಲೈನ್ ಕ್ರ್ಯಾಕ್ ಕಂಡುಬರುತ್ತದೆ. ಈ ಸಮಸ್ಯೆಗೆ ಕಾರಣವೇನು ಹಾಗೂ ಈ ಸಮಸ್ಯೆಗೆ ಪರಿಹಾರ ಏನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹೇರ್ ಲೈನ್ ಕ್ರ್ಯಾಕ್ಸ್ ಇಂದ ಮನೆಯ ಸ್ಟ್ರಕ್ಚರ್ ಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ಹೊಸದಾಗಿ ಮನೆ ಕಟ್ಟಿರುತ್ತಾರೆ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ ಈ ಸಮಸ್ಯೆ ಕಂಡುಬರಲು ಹಲವು ಕಾರಣಗಳಿವೆ ಕಳಪೆ ಮಟ್ಟದ ಮರಳು ಮತ್ತು ಸಿಮೆಂಟ್ ಬಳಸುವುದು, ಮರಳು ಮತ್ತು ಸಿಮೆಂಟ್ ಮಿಶ್ರಣ ಸರಿಯಾಗಿ ಮಾಡದೆ ಇರುವುದು, ಇತ್ಯಾದಿ. ಈ ಸಮಸ್ಯೆಗೆ ಪರಿಹಾರವೆಂದರೆ ಮನೆ ಕಟ್ಟುವಾಗ ಉಪಯೋಗಿಸಿದ ಮರಳು ಉತ್ತಮವಾಗಿರಬೇಕು, ಮಣ್ಣಿನ ಅಂಶ ಇರುವ ಮರಳನ್ನು ಉಪಯೋಗಿಸಬಾರದು. ಮನೆ ಕಟ್ಟುವಾಗ ಬಳಸುವ ಸಿಮೆಂಟ್ ಯಾವುದೇ ಕಂಪನಿಯಾಗಿರಲಿ 43 ಗ್ರೇಡ್ ಆಗಿರಬೇಕು ಅಲ್ಲದೆ ಸಿಮೆಂಟ್ ತಯಾರಾಗಿ 3 ತಿಂಗಳಿಗಿಂತ ಹೆಚ್ಚಿನ ಸಮಯ ಆಗಿರಬಾರದು. ಮುಖ್ಯವಾಗಿ ಮರಳು ಮತ್ತು ಮಣ್ಣು ಮಿಕ್ಸಿಂಗ್ ಮಾಡಿ ಮಡ್ಡಿ ತಯಾರಿಸುತ್ತಾರೆ ಅದನ್ನು ಮನೆಯ ಹೊರಗಿನ ಪ್ಲಾಸ್ಟ್ರಿಂಗ್, ಮನೆಯ ಒಳಗಡೆಯ ಪ್ಲಾಸ್ಟ್ರಿಂಗ್ ಮತ್ತು ಛಾವಣಿ ಪ್ಲಾಸ್ಟ್ರಿಂಗ್ ಎಂದು ಮೂರು ಭಾಗ ಮಾಡಿಕೊಂಡು ಬೇರೆ ಬೇರೆ ಗ್ರೇಡ್ ಬಳಸಬೇಕು ಒಳಗಡೆ 1:6 ಅನುಪಾತದಂತೆ , ಹೊರಗಡೆ 1:3 ಅನುಪಾತದಂತೆ, ಛಾವಣಿಗೆ 1:4 ಅನುಪಾತದಂತೆ ಮಡ್ಡಿ ತಯಾರಿಸಬೇಕು. ಒಂದೇ ರೀತಿ ಸಿಮೆಂಟ್ ಮತ್ತು ಮರಳನ್ನು ಮಿಕ್ಸಿಂಗ್ ಮಾಡುವುದರಿಂದ ಹೇರ್ ಲೈನ್ ಕ್ರ್ಯಾಕ್ ಬರುತ್ತದೆ.

ಪ್ಲಾಸ್ಟ್ರಿಂಗ್ ಮಾಡುವ ಮೊದಲು ಗೋಡೆಗೆ ನೀರನ್ನು ಹಾಕಬೇಕು. ಸಿಮೆಂಟ್ ಮತ್ತು ಮರಳಿನಿಂದ ತಯಾರಿಸಿದ ಮಡ್ಡಿಯನ್ನು ಒಂದು ತಾಸಿಗಿಂಥ ಹೆಚ್ಚು ಸಮಯ ಹಾಗೆ ಬಿಡಬಾರದು. ಪ್ಲಾಸ್ಟ್ರಿಂಗ್ ಮಾಡುವ ಮೊದಲು ಚಿಕನ್ ಮೆಶ್ ಬಳಸಬೇಕು ವಾಲ್ ಮತ್ತು ಕಾಲಂ ಜಾಯಿಂಟ್ ಆಗುವ ಜಾಗಗಳಲ್ಲಿ ಬಳಸಬೇಕು, ಕ್ರ್ಯಾಕ್ ಬಂದಿರುವ ಜಾಗಗಳಲ್ಲಿ ಬಳಸಬೇಕು ಹಾಗೂ ಎಲೆಕ್ಟ್ರಿಕಲ್ ಲೈನ್ಸ್ ಹೋಗಿರುವ ಜಾಗಗಳಲ್ಲಿ ಬಳಸಬೇಕು. ಚಿಕನ್ ಮೆಶ್ ಬಳಸುವುದರಿಂದ ಹೇರ್ ಲೈನ್ ಕ್ರ್ಯಾಕ್ ಬರುವುದಿಲ್ಲ. ಗೋಡೆಗಳಿಗೆ ಪ್ಲಾಸ್ಟ್ರಿಂಗ್ ಮಾಡುವಾಗ 10mm ನಿಂದ 20mm ದಪ್ಪ ಇರಬೇಕು. ಪ್ಲಾಸ್ಟ್ರಿಂಗ್ 10 mm ಗಿಂತ ಕಡಿಮೆ ಇರಬಾರದು 20 mmಗಿಂತ ಹೆಚ್ಚು ಇರಬಾರದು ಪ್ಲಾಸ್ಟ್ರಿಂಗ್ ಮಾಡಿದ ನಂತರ 7-8 ದಿನಗಳ ಕಾಲ ಸರಿಯಾಗಿ ಕ್ಯೂರಿಂಗ್ ಮಾಡಬೇಕು. ಈ ಎಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಮನೆ ಕಟ್ಟಿದರೆ ಯಾವುದೇ ಹೇರ್ ಲೈನ್ ಕ್ರ್ಯಾಕ್ ಸಮಸ್ಯೆ ಬರುವುದಿಲ್ಲ. ಕಮರ್ಷಿಯಲ್ ಬಿಲ್ಡಿಂಗ್ ಗಳನ್ನು ಕಟ್ಟುವಾಗ ಇಂಜಿನಿಯರ್ ಈ ಅಂಶಗಳನ್ನು ಅನುಸರಿಸುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅದರಲ್ಲೂ ಮನೆ ಕಟ್ಟುವವರಿಗೆ ತಿಳಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *