ಪ್ರಧಾನಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಆರಂಭದ ಸಂಕೇತವಾಗಿ ಮೇ 30, 2019 ರಂದು ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಜನ್ಮ ಪಡೆದ ಮೊದಲ ಪ್ರಧಾನಮಂತ್ರಿ ಶ್ರೀ. ಮೋದಿ ಅವರಾಗಿದ್ದಾರೆ. ಕ್ರಿಯಾಶೀಲ, ಸಮರ್ಪಿತ ಮತ್ತು ನಿರ್ದಿಷ್ಟ, ಶ್ರೀ. ನರೇಂದ್ರ ಮೋದಿ ಅವರು ಒಂದು ಶತಕೋಟಿಗೂ ಅಧಿಕ ಭಾರತೀಯರ ಆಶೋತ್ತರ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತಾರೆ. ಪ್ರಧಾನ ಮಂತ್ರಿಯಾಗಿ ಮೇ 2014ರಲ್ಲಿ ಜವಾಬ್ದಾರಿ ಪಡೆದ ಮೇಲೆ ಮೊದಲ ಹೆಜ್ಜೆಯಾಗಿ, ಪ್ರತಿಯೊಬ್ಬ ಭಾರತೀಯನೂ ಒಟ್ಟಾರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯ ಕಾರ್ಯಗಳಲ್ಲಿ ಸಹಪಯಣಿಗನಾಗಿ ತಮ್ಮ ಆಶೋತ್ತರ ಹಾಗೂ ಅಪೇಕ್ಷೆಗಳು ಫಲಕಾಣುವ ಹಾಗೂ ಅವುಗಳ ಅನುಭವಗಳಿಸುವ ಅವಕಾಶ ಸೃಷ್ಠಿಸಿದರು. ಇಂತಹ ಪ್ರಧಾನ ಮಂತ್ರಿಯ ಜೊತೆ ಒಮ್ಮೆ ಆದರೂ ನೇರವಾಗಿ ಮಾತನಾಡಬೇಕು ಅವರನ್ನು ಭೇಟಿ ಆಗಬೇಕು ಎನ್ನುವ ಹಂಬಲ ಎಲ್ಲರಿಗೂ ಇದ್ದೆ ಇರುತ್ತದೆ. ಅಂತವರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆ ಮುಖ್ಯವಾದ ಮಾತುಕತೆ ನಡೆಸಬೇಕಿದ್ದರೆ ಅಥವ ಭೇಟಿಯಾಗಿದ್ದರೆ ಅವರನ್ನು ಸಂಪರ್ಕಿಸಲು ಕೆಲವು ನಂಬರ್ ಮತ್ತು ಅಡ್ರೆಸ್ ಗಳನ್ನು ನೀಡಲಾಗಿದೆ ಅವುಗಳನ್ನು ನೋಟ್ ಮಾಡಿಕೊಳ್ಳಿ.

ಪ್ರಧಾನಿ ನರೇಂದ್ರ ಮೋದಿ ಅವರ ಇಮೇಲ್ ವಿಳಾಸ , ನಂಬರ್ ಮತ್ತು ಸಾಮಾಜಿಕ ಜಾಲತಾಣಗಳ ವಿಲಾಸ ಹೀಗಿದೆ. ಪ್ರಧಾನಿ ಮೋದಿ ಅವರು ದೇಶದಷ್ಟೇ ಅಲ್ಲ, ವಿಶ್ವದ ದೊಡ್ಡ ನಾಯಕರಲ್ಲಿ ಒಬ್ಬರು. ದೇಶ ಮತ್ತು ವಿದೇಶಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಬಹಳಷ್ಟಿದೆ ಹಾಗು ದಿನೇ ದಿನೇ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ನಾಯಕರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಬೇಕು ಅಥವಾ ಬೇರೆ ಮಾಧ್ಯಮಗಳ ಮೂಲಕ ಅವರನ್ನು ಸಂಪರ್ಕಿಸಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ಈ ಆಲೋಚನೆ ನಿಮ್ಮ ಮನಸ್ಸಿನಲ್ಲಿಯೂ ಬಂದಿದ್ದರೆ, ನಮ್ಮ ಈ ವರದಿಯನ್ನು ಓದಿ, ಪ್ರಧಾನಿ ಮೋದಿಯವರನ್ನು ಹೇಗೆ ಸಂಪರ್ಕಿಸಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೊಬೈಲ್ ಸಂಖ್ಯೆ, ಅವರ ವಿಳಾಸ, ಇಮೇಲ್ ಐಡಿ ಮತ್ತು ಸಾಮಾಜಿಕ ಮಾಧ್ಯಮಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

ಅಂದಹಾಗೆ, ಜನಪ್ರಿಯತೆಯಲ್ಲಿ ಯಾರೂ ಕೂಡ ಪ್ರಧಾನಿ ಮೋದಿಯವರಿಗೆ ಸ್ಪರ್ಧೆ ನೀಡಲು ಸಾಧ್ಯವಿಲ್ಲ ಮತ್ತು ಅಂತಹ ಪರಿಸ್ಥಿತಿಯಲ್ಲಿ, ನೀವು ಅವರನ್ನು ನೇರವಾಗಿ ಸಂಪರ್ಕಿಸಬೇಕಾದರೆ, ಇದಕ್ಕಾಗಿ ಹಲವು ಮಾರ್ಗಗಳಿವೆ. ಮೊದಲನೆಯದಾಗಿ, ಅವರ ಸೋಶಿಯಲ್ ಮೀಡಿಯಾಗಳಿಗೆ ಸಂಬಂಧಿಸಿದ ಅಕೌಂಟ್ ಗಳ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ, ಅಲ್ಲಿ ನೀವು ಅವರನ್ನು ನೇರವಾಗಿ ಸಂಪರ್ಕಿಸಬಹುದು. ಯಾಕೆಂದರೆ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ.

ಅವರ ಫೇಸ್ಬುಕ್ ಅಕೌಂಟ್ ಲಿಂಕ್ ಹೀಗಿದೆ https://www.facebook.com/narendramodi
ಅವರ ಟ್ವಿಟ್ಟರ್ ಅಕೌಂಟ್ ಲಿಂಕ್ ಹೀಗಿದೆ https://twitter.com/narendramodi ಹಾಗು
ಅವರ Instagram ಅಕೌಂಟ್ ಲಿಂಕ್ ಕೆಳಗಿನಂತಿದೆ https://www.instagram.com/narendramodi/

ಸೋಶಿಯಲ್ ಮೀಡಿಯಾ ಅಕೌಂಟ್ಸ್ ಗಳ ನಂತರ, ನಿಮಗೆ ಅವರ ಇಮೇಲ್ ಐಡಿ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನೀವು ಪ್ರಧಾನಿ ಮೋದಿ ಅವರ ವೈಯಕ್ತಿಕ ಇಮೇಲ್ ಐಡಿ ಜೊತೆಗೆ ಪಿಎಂಒ ಅವರ ಇಮೇಲ್ ಐಡಿಯೊಂದಿಗೂ ಸಂಪರ್ಕ ಸಾಧಿಸಬಹುದು. PMO ನ ಇ-ಮೇಲ್ ಐಡಿ [email protected] ಆಗಿದ್ದು, ಅದೇ ಪ್ರಧಾನಿ ಮೋದಿಯವರ ವೈಯಕ್ತಿಕ ಇ-ಮೇಲ್ ಐಡಿ ಕೂಡ [email protected] ಆಗಿದೆ.

ಅಷ್ಟೇ ಅಲ್ಲ ನೀವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಕೂಡ ಸಂಪರ್ಕಿಸಬಹುದು. ನೀವು ವೆಬ್ ಇನ್ಫಾರ್ಮೇಶನ್ ಮ್ಯಾನೇಜರ್, ಸೌಥ್ ಬ್ಲಾಕ್, ರೈಸೀನಾ ಹಿಲ್ಸ್, ನವದೆಹಲಿ, ಪಿನದ ಕೋಡ್ 110011 ಅಡ್ರೆಸ್ ಗೂ ಪತ್ರ ಕಳಿಸಿಬಹುದು. ನಿಮ್ಮ ಮೂಲಕ ಕಳಿಸಲಾದ ಪತ್ರ ನೇರವಾಗಿ ಪ್ರಧಾನಿ ಮೋದಿಯವರ ಪ್ರಧಾನಮಂತ್ರಿ ಕಾರ್ಯಾಲಕ್ಕೆ ತಲುಪುತ್ತದೆ. ಒಂದು ವೇಳೆ ಈ ಪತ್ರದಲ್ಲಿ ನೀವು ಪ್ರಧಾನಮಂತ್ರಿಯವರನ್ನ ಉಲ್ಲೇಖಿಸಿದ್ದರೆ ಆ ಪತ್ರ ಪ್ರಧಾನಮಂತ್ರಿಗಳಿಗೆ ತಲುಪಿಸಲಾಗುತ್ತದೆ. ನೀವು ಇವುಗಳನ್ನ ಹೊರತುಪಡಿಸಿ ಪ್ರಧಾನಮಂತ್ರಿ ನಿವಾಸದ ಅಡ್ರೆಸ್‌ಗೂ ನೇರವಾಗಿ ಪತ್ರ ಕಳಿಸಬಹುದು. ಇದಕ್ಕಾಗಿ ನೀವು ಅವರ ಅಧಿಕೃತ ನಿವಾಸ 7 NCR, ನವದೆಹಲಿ ವಿಳಾಸಕ್ಕೆ ಪತ್ರ ಕಳಿಸಬಹುದು

ಈ ಎಲ್ಲ ಮಾಧ್ಯಮಗಳ ಬಳಿಕ ಪ್ರಧಾನಮಂತ್ರಿಗಳನ್ನ ಸಂಪರ್ಕಿಸಲು ಉಳಿದ ಮತ್ತೊಂದು ಹಾಗು ಕೊನೆಯ ವಿಧಾನವೆಂದರೆ ಅದು ಪ್ರಧಾನಮಂತ್ರಿಗಳ ಕಾಂಟ್ಯಾಕ್ಟ್ ನಂಬರ್. ಅವುಗಳು ಹೀಗಿವೆ ನೋಡಿ, ಪ್ರಧಾನಮಂತ್ರಿಗಳನ್ನ ನೀವು ಸಂಪರ್ಕಿಸಲು 011-23012312 (PMO), 011-23015603, 11-23018939, 011-23018668 ಹಾಗು +91-1800-110-031 (PMO ಹೆಲ್ಪ್‌ಲೈನ್) ಮೂಲಕವೂ ಸಂಪರ್ಕಿಸಬಹುದಾಗಿದೆ. ಇದರ ಹೊರತಗಾಗಿ ನೀವು ನಿಮ್ಮ ಸಂದೇಶವನ್ನ 011-23016857 ನಂಬರ್‌ಗೂ ಫ್ಯಾಕ್ಸ್ ಮಾಡಬಹುದು.

Leave a Reply

Your email address will not be published. Required fields are marked *