Pisces Horoscope 2024: ಮುಂದಿನ ಹೊಸ ವರ್ಷದ ಭವಿಷ್ಯದ ಪ್ರಕಾರ ಮೀನ ರಾಶಿಯಲ್ಲಿ ಜನಿಸಿದ ಜನರು ಈ ಹೊಸ ವರ್ಷದಲ್ಲಿ ಅವಕಾಶಗಳ ಭರವಸೆಯನ್ನ ನಿರೀಕ್ಷೆ ಮಾಡಬಹುದು ನಿಮ್ಮ ರಾಶಿಯ ಅಧಿಪತಿಯಾದ ಗುರು ನಿಮ್ಮ ಎರಡನೇ ಮನೆಯಲ್ಲಿ ನೆಲೆಸುವುದರಿಂದ ನಿಮ್ಮ ಕುಟುಂಬಕ್ಕೆ ರಕ್ಷಣೆಯನ್ನು ನೀಡುತ್ತಾನೆ ನಿಮ್ಮ ಸುಧಾರಿತ ಮಾತನಾಡುವ ರೀತಿಯೂ ನಿಮ್ಮ ಸಂಬಂಧಗಳನ್ನ ಉತ್ಕೃಷ್ಟಗೊಳಿಸುತ್ತದೆ ಹಾಗೆಯೇ ಈ ಸಮಯದಲ್ಲಿ ನೀವು ಸಂಪತ್ತನ್ನ ಗಳಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಮೀನ ರಾಶಿಯನ್ನು ಆಳುವ ಗ್ರಹ ಗುರು ಆಗಿದ್ದು ಇದು ಆಧ್ಯಾತ್ಮಿಕತೆಯನ್ನು ಸೂಚಿಸುವಂತದ್ದಾಗಿದೆ ಹಾಗಾಗಿ ಈ ವರ್ಷ ವೃತ್ತಿ ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ಗುರುವು ಸರಾಸರಿ ಫಲಿತಾಂಶವನ್ನು ಮೀನ ರಾಶಿಯವರಿಗೆ ನೀಡಲಿದ್ದಾನೆ.

ಶನಿ ಮತ್ತು ರಾಹು ಕೇತುಗಳ ಸಂಕ್ರಮಣ ಮೀನ ರಾಶಿಯವರಿಗೆ ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ ಆದರೆ ಗುರುವಿನಿಂದ ನೀವು ಹೆಚ್ಚಿನ ಮಟ್ಟದ ಭಾಗ್ಯವನ್ನು ನಿರೀಕ್ಷೆ ಮಾಡಬಹುದು ಈ ಮುಂಬರುವ ಹೊಸ ವರ್ಷದಲ್ಲಿ ಶನಿಯು ನಿಮ್ಮ 12ನೇ ಮನೆಯಲ್ಲಿ ಇರುವುದು ನಿಮ್ಮ ಕೆಲಸ ಕಾರ್ಯಗಳಿಗೆ ವಿಳಂಬವನ್ನ ಸೂಚಿಸುತ್ತದೆ. ಮೇ 1ನೇ ತಾರೀಖಿನ ನಂತರ ಮೂರನೇ ಮನೆಗೆ ಗುರು ಪ್ರವೇಶ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿನ ಯೋಗವು ಹೆಚ್ಚಾಗುತ್ತದೆ ಹಾಗೆಯೇ ನಿಮ್ಮ ಅದೃಷ್ಟದ ಬೆಳವಣಿಗೆಯನ್ನು ಸಹ ಗುರು ಉತ್ತೇಜಿಸುತ್ತಾನೆ ನಿಮ್ಮ ಜವಾಬ್ದಾರಿಗಳಿಗೆ ನಿಮ್ಮ ಸಮರ್ಪಣೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ ಆದ್ದರಿಂದ ನಿಮ್ಮ ಕುಟುಂಬದಲ್ಲಿ ಸಹ ನೆಮ್ಮದಿ ನೆಲೆಸುತ್ತದೆ. ಹಾಗೆಯೇ ಗುರು ನಿಮಗೆ ಹಣಕಾಸಿನ ವಿಚಾರವಾಗಿ ಸಹ ಎಚ್ಚರಿಕೆಯನ್ನು ನೀಡುತ್ತಾನೆ ವಿಶೇಷವಾಗಿ ವಿದೇಶಿ ಪ್ರಯಾಣಕ್ಕೆ ಖರ್ಚಾಗಬಹುದು ಇದಕ್ಕೆ ನೀವು ಸಿದ್ದರಾಗಿರಬೇಕು.

ಇನ್ನು ರಾಹು ಮತ್ತು ಕೇತುವಿನಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಏರುಪೇರುಗಳು ಉಂಟಾಗಬಹುದು ಆದ್ದರಿಂದ ನಿಮ್ಮ ಮಾತಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಬೇಕು ಸಂಬಂಧವನ್ನು ಹಾಳು ಮಾಡಿಕೊಳ್ಳಬಾರದು ಜೊತೆಗೆ ನಿಮ್ಮ ಯಾವುದೇ ನಿರ್ಧಾರವನ್ನ ಹಠಾತ್ ತೆಗೆದುಕೊಳ್ಳಬಾರದು ಸ್ವಲ್ಪ ಯೋಜನೆ ಮಾಡಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ಐದನೇ ಮನೆಯಲ್ಲಿ ಮಂಗಳನ ಪ್ರಭಾವ ಸಣ್ಣ ಸಣ್ಣ ಸವಾಲುಗಳಿಗೆ ಕಾರಣವಾಗಬಹುದು ಆದರೆ ಅದನ್ನ ಎದುರಿಸುವ ಧೈರ್ಯವನ್ನ ಗುರುವು ನಿಮಗೆ ಕೊಡುತ್ತಾನೆ. ವರ್ಷದ ಮಧ್ಯದ ಅವಧಿಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕಾಗುತ್ತದೆ ಏಕೆಂದರೆ ನಿಮ್ಮ ಸಂಬಂಧದಲ್ಲಿ ಬಿರುಕಗಳು ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯ ನಿಮ್ಮ ಪ್ರೀತಿ ಪಾತ್ರರಿಗೆ ಕಳವಳವನ್ನ ಉಂಟು ಮಾಡಬಹುದು. ಮೇ ತಿಂಗಳ ನಂತರದಲ್ಲಿ ನೀವು ಸಾಕಷ್ಟು ಅದೃಷ್ಟವನ್ನು ಪಡೆಯಲು ಸಾಧ್ಯವಾಗುತ್ತದೆ.

ನಿಮ್ಮ ವೃತ್ತಿ ಜೀವನದಲ್ಲಿ ಈ ಹೊಸ ವರ್ಷ ಆಶಾವಾದಿಯಾಗಿ ಕಂಡು ಬರಲಿದೆ ಮತ್ತು ನಿಮ್ಮ ಕೆಲಸದಲ್ಲಿ ನೀವು ಉತ್ಕೃಷ್ಟ ಸ್ಥಾನದಲ್ಲಿ ಇರುತ್ತೀರಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುತ್ತಾರೆ. ನೀವು ವಿದೇಶಕ್ಕೆ ಹೋಗಿ ಕೆಲಸವನ್ನು ಮಾಡುವ ಅವಕಾಶ ಕೂಡ ನಿಮಗೆ ಬರಬಹುದು.
ಮೀನ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷದ ಆರಂಭವು ಹೊಸ ಭರವಸೆಯನ್ನು ಮೂಡಿಸಲಿದ್ದು ಯಾವುದೇ ಅಡೆತಡೆಗಳಿದ್ದರೂ ಸಹ ನಿಮ್ಮ ಆಸಕ್ತಿ ವಿದ್ಯಾಭ್ಯಾಸದ ಕಡೆಗೆ ಕೇಂದ್ರೀಕೃತಗೊಳ್ಳುತ್ತದೆ. ಹಾಗೂ ಕುಟುಂಬ ಜೀವನದಲ್ಲಿಯೂ ಸಹ ಇರುವಂತಹ ಕೆಲವೊಂದು ಸವಾಲುಗಳನ್ನು ನೀವು ಎದುರಿಸಲು ಸಶಕ್ತರಾಗಿರುತ್ತೀರಿ. ಇನ್ನು ಈ ವರ್ಷ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಣ್ಣಿನ ಸಮಸ್ಯೆ ಹಾಗೂ ಕಾಲಿನ ಪಾದದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಡುವಂತಹ ಸಾಧ್ಯತೆಗಳು ಹೆಚ್ಚಾಗಿವೆ ಆದ್ದರಿಂದ ಆರೋಗ್ಯಕರ ದಿನಾಚರಣೆ ಅನುಸರಿಸುವುದು ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *