ಮೂಲವ್ಯಾಧಿ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಂಡುಬರುತ್ತಿದೆ. ಸುಮಾರು ಹತ್ತು ಜನರಲ್ಲಿ ಮೂರು ಜನರಲ್ಲಾದರೂ ಕಂಡು ಬರುವಂತಹ ಸಮಸ್ಯೆ ಇದಾಗಿದೆ. ಈ ಸಮಸ್ಯೆ ಹೆಚ್ಚಾದರೆ ಅದರ ನೋವನ್ನ ಯಾರಮುಂದು ಹೇಳಲಾಗದೆ ಒಬ್ಬರೇ ಅನುಭವಿಸಬೇಕಾಗುತ್ತದೆ. ಇದರ ನೋವು ಬಂದರೆ ಕೂತಲ್ಲಿ ಕುಳಿತುಕೊಳ್ಳಲು ಆಗಲ್ಲ, ನಿಂತಲ್ಲಿ ನಿಲ್ಲಕೂ ಆಗಲ್ಲ. ಈ ಮೂಲವ್ಯಾಧಿಯನ್ನ ಇಂಗ್ಲಿಷ್ ನಲ್ಲಿ ಪೈಲ್ಸ್ ಎಂದು ಕರೆಯುತ್ತಾರೆ, ಇದರಲ್ಲಿ ಎರಡುರೀತಿಯಲ್ಲಿದೆ ಒಂದು ಆಂತರಿಕ ಇನ್ನೊಂದು ಬಾಹ್ಯ ಪೈಲ್ಸ್. ಈ ಪೈಲ್ಸ್ ಗೆ ಸೂಕ್ತ ಪರಿಹಾರವನ್ನು ನೀಡುವಂತ ಎರಡು ಬಗೆಯ ಮನೆಮದ್ದನ್ನು ತಿಳಿಸುತ್ತೇವೆ ಅವುಗಳು ಯಾವುವು ಹಾಗೂ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿಯೋಣ

ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾದಾಗ, ಐರನ್ ಪ್ರಮಾಣವು ಸಹ ಕಡಿಮೆಯಾಗುತ್ತದೆ ಇದರಿಂದಲೇ ನಮಗೆ ಮೂಲವ್ಯಾಧಿಯ ಸಮಸ್ಯೆ ಕಂಡುಬರುವುದು. ಇದಕ್ಕೆ ಪರಿಹಾರ ಇಲ್ಲಿದೆ ಈ ಉಪಯುಕ್ತ ವಿಚಾರ ನಿಮಗೆ ಇಷ್ಟವಾದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಮೊದಲನೆಯ ಮನೆಮದ್ದು ಯಾವುದು ಅನ್ನೋದಾದರೆ ಈರುಳ್ಳಿಯನ್ನ ಚನ್ನಾಗಿ ರುಬ್ಬಿ ಅದರ ರಸವನ್ನ ತೆಗೆದಿಟ್ಟುಕೊಳ್ಳಿ, ಮತ್ತು ಕಲ್ಲು ಸಕ್ಕರೆಯನ್ನ ಚನ್ನಾಗಿ ಕುಟ್ಟಿ ಪುಡಿಮಾಡಿಕೊಳ್ಳಿ. ನಂತರ ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಕಲ್ಲು ಸಕ್ಕರೆಯನ್ನ ಬೆರೆಸಿ ಒಂದೆರಡು ನಿಮಿಷಗಳ ಬಳಿಕ ಸೇವಿಸಬೇಕು. ಇದನ್ನ ನಾವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು, ಇದನ್ನ ಕನಿಷ್ಠ ನಾಲ್ಕು ದಿನಗಳವರೆಗೆ ಸೇವಿಸುವುದರಿಂದ ಈ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿಹೊಂದ ಬಹುದು.

ಇನ್ನು ಎರಡನೆಯ ಮನೆಮದ್ದು ಯಾವುದು ಅನ್ನೋದಾದ್ರೆ ಹಸುವಿನ ಹಾಲನ್ನ ಚನ್ನಾಗಿ ಕಾಯಿಸಿ ಆರಿಸಿದ ಹಾಲನ್ನ ಒಂದು ಲೋಟ ತೆಗೆದುಕೊಳ್ಳಿ, ನಂತರ ಅದಕ್ಕೆ ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಚನ್ನಾಗಿ ಕಲಸಿರಿ, ನೀವು ನಿಂಬೆ ರಸ ಹಾಕಿದ ತಕ್ಷಣ ಹಾಲು ಒಡೆದು ಮೊಸರಿನಂತಾಗುತ್ತದೆ ಇದನ್ನ ಕಲಸಿ ತಕ್ಷಣ ಕುಡಿಯಬೇಕು, ಇದನ್ನು ಸಹ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿಯನ್ನ ಹೊಂದಬಹುದಾಗಿದೆ.

By

Leave a Reply

Your email address will not be published. Required fields are marked *