petrol vehicle convert electric: ನಿಮ್ಮ ಬಳಿ ಹಳೆಯ ವಾಹನ ಇದೆಯೇ? ಹೊಸ ವಾಹನ ಖರೀದಿ ಮಾಡಲು ಬಜೆಟ್ ತೊಂದರೆ ಇದೆಯೇ ಅಂತವರು ನಿಮ್ಮ ಹಳೆಯ ವಾಹನವನ್ನು ಎಲೆಕ್ಟ್ರಾನಿಕ್ ವಾಹನವಾಗಿ ಕನ್ವರ್ಟ್ ಮಾಡಿಕೊಳ್ಳಬಹುದು, ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿಕೊಟ್ಟಿದ್ದೇವೆ.

ನಿಮ್ಮ ಬಳಿ ಇರುವ exhausting vehicle ಅನ್ನು electronic vehicle ಆಗಿ convert ಮಾಡಿಕೊಡುತ್ತಾರೆ. ಅಂದರೆ 8 ವರ್ಷ ಅಥವಾ ಹತ್ತು ವರ್ಷ ಹಳೆಯದಾದ ವಾಹನವನ್ನು electronic vehicle ಯಾಗಿ ಕನ್ವರ್ಟ್ ಮಾಡುತ್ತಾರೆ. ಕೆಲವರಿಗೆ ಹಳೆಯ ಗಾಡಿಯ ಮೇಲೆ ಸೆಂಟಿಮೆಂಟ್ ಫೀಲಿಂಗ್ ಇರುತ್ತದೆ, ಅಂತವರು electronic vehicle ಆಗಿ ಕನ್ವರ್ಟ್ ಮಾಡಿಕೊಂಡರೆ ಒಳ್ಳೆಯದು ಏಕೆಂದರೆ ಹೊಸ ವಾಹನ ಖರೀದಿ ಮಾಡುವುದಾದರೆ ಸುಮಾರು 1 ಲಕ್ಷ ಬೇಕಾಗುತ್ತದೆ ಅದರ ಬದಲು ನೀವು ನಿಮ್ಮ ವಾಹನವನ್ನು ಕನ್ವರ್ಟ್ ಮಾಡಿಕೊಂಡರೆ ನಿಮಗೆ ಲಾಭವಾಗುತ್ತದೆ.

ನಾವು ತಯಾರಿಸುವ model ವಾಹನವನ್ನು ಪೆಟ್ರೋಲ್ ನಲ್ಲೂ ಕೂಡ ರನ್ ಮಾಡಬಹುದು ಮತ್ತು ಪೆಟ್ರೋಲ್ ಖಾಲಿ ಆದಾಗ EV ಗೆ ಕನ್ವರ್ಟ್ ಮಾಡಿಕೊಳ್ಳಬಹುದು. ಒಂದು ಸಲ ಫುಲ್ ಚಾರ್ಜ್ ಮಾಡಿದರೆ 60 ಕಿ.ಮೀ ವರೆಗೂ ಹೋಗಬಹುದು ಹಾಗೂ ಈ ಬ್ಯಾಟರಿ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ. ನೀವು ಒಂದು ಸಲ ಚಾರ್ಜ್ ಮಾಡಿದಾಗ ನಿಮಗೆ 15 ರಿಂದ 20 ರೂಪಾಯಿ ಕರೆಂಟ್ ಬಿಲ್ ಬರಬಹುದು ಆದರೆ ಇದು ಪೆಟ್ರೋಲ್ ಗಿಂತ ಒಳ್ಳೆಯದು ಏಕೆಂದರೆ ಒಂದು ಲೀಟರ್ ಪೆಟ್ರೋಲ್ ಗೆ ನೀವು 101 ರೂಪಾಯಿ ಕೊಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಒಂದು ಲೀಟರ್ ಪೆಟ್ರೋಲ್ ನಲ್ಲಿ ಅಂದಾಜು 45 ಕಿಲೋಮೀಟರ್ ಅಷ್ಟೇ ಚಲಿಸಬಹುದು, ಆದರೆ ಎಲೆಕ್ಟ್ರಾನಿಕ್ ವೆಹಿಕಲ್‌ನಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ರನ್ ಮಾಡಬಹುದು.

ಎಲೆಕ್ಟ್ರಾನಿಕ್ ವೆಹಿಕಲ್ ಗೆ ಸರ್ವಿಸ್ ನ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಇದಕ್ಕೆ ಇಂಜಿನ್ ಆಯಿಲ್ ಹಾಕುವಂತ ಅವಶ್ಯಕತೆ ಇರುವುದಿಲ್ಲ. ಆದರೆ ಗೇರ್ ಚೆಕ್ ಮಾಡುತ್ತಾ ಇರಬೇಕಾಗುತ್ತದೆ. ನೀವು ಚಾರ್ಜಿಂಗ್ ಮೂಲಕ ರನ್ ಮಾಡುತ್ತಿದ್ದಾಗ ಚಾರ್ಜ್ ಡೌನ್ ಆದರೆ ಪೆಟ್ರೋಲ್ ಗೆ ಕನ್ವರ್ಟ್ ಮಾಡಿಕೊಳ್ಳಬಹುದು .ಅದೇ ಪೂರ್ತಿಯಾಗಿ ಎಲೆಕ್ಟ್ರಾನಿಕ್ ವೆಹಿಕಲ್ ತೆಗೆದುಕೊಂಡಿದ್ದಾರೆ ನಿಮಗೆ ಚಾರ್ಜ್ ಡೌನ್ ಆದರೆ ಎನ್ನುವ ಭಯ ಇರುತ್ತದೆ. ಅಥವಾ ಪೆಟ್ರೋಲ್ ವಾಹನವಾಗಿದ್ದರೆ ಪೆಟ್ರೋಲ್ ಖಾಲಿ ಆಗುವ ಸಮಯದಲ್ಲಿ ನೀವು ಪೆಟ್ರೋಲ್ ಬಂಕನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದರೆ ನಾವು ಹೇಳುವಂತಹ ರೀತಿ ಮಾಡಿದರೆ ನಿಮಗೆ ಇಂತಹ ಸಮಸ್ಯೆಗಳು ಬರುವುದಿಲ್ಲ.

RTO ಹಿಡಿದು ಬ್ಯಾಟರಿ ವಾರಂಟಿ, ಮೋಟಾರ್ ವಾರೆಂಟಿ, ಚಾರ್ಜರ್ ವಾರೆಂಟಿ ಎಲ್ಲ ಸೇರಿ 65000 rupee(+gst) ಆಗುತ್ತದೆ. ಸದ್ಯಕ್ಕೆ TVS, Hero Honda and Suzuki vehicle ಗೆ ಮಾತ್ರ electronic vehicle ಆಗಿ ಮಾಡುತ್ತಿದ್ದೇವೆ. ಇದು ಈಗ ಬೆಂಗಳೂರಿನಲ್ಲಿ ಮಾತ್ರ ಪ್ರಾರಂಭವಾಗಿದೆ. Gruha Lakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸುಲಭ ವಿಧಾನ

By AS Naik

Leave a Reply

Your email address will not be published. Required fields are marked *