Gruha lakshmi scheme apply online: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಯಾವ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ. ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಸೇವಾ ಸಿಂಧು ವೆಬ್ ಸೈಟ್ ಗೆ ಹೋಗಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಲೆಫ್ಟ್ ಕಾರ್ನಲ್ಲಿ apply for services ಎನ್ನುವ ಆಪ್ಷನ್ ಕ್ಲಿಕ್ ಮಾಡಿದಾಗ ಅದರ ಕೆಳಗೆ view all available service ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ನಂತರ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಬರುತ್ತದೆ ಅಲ್ಲಿ ನಿಮ್ಮ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ. ರೇಷನ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ಮತ್ತು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಭರ್ತಿ ಮಾಡಿ ಆಗ ನಿಮ್ಮ ಮಾಹಿತಿ ಆಟೋಮ್ಯಾಟಿಕ್ ಆಗಿ ಫೀಲ್ ಆಗುತ್ತದೆ.

ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಹಾಗೆಯೇ ಆಧಾರ್ ಕಾರ್ಡಿಗೆ ಫೋನ್ ನಂಬರ್ ಲಿಂಕ್ ಆಗಿರಬೇಕು. ಎಲ್ಲ ಮಾಹಿತಿಯನ್ನು ತುಂಬಿದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ನೀವು ಫೀಲ್ ಮಾಡಬೇಕು ನಂತರ validate ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ otp verified successfully ಎಂದು ಬರುತ್ತದೆ ನಂತರ ok ಕ್ಲಿಕ್ ಮಾಡಿ.

ನಂತರ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ಕೇಳುತ್ತದೆ .ಅಲ್ಲಿ ಎರಡು ರೀತಿಯ ಆಪ್ಷನ್ ಅನ್ನು ನೀಡಿದ್ದಾರೆ ಮೊದಲನೆಯದಾಗಿ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದು ಅಥವಾ ಬೇರೆ ಬ್ಯಾಂಕ್ ಅಕೌಂಟ್ ಗೂ ಕೂಡ ಹಣ ನಿಮಗೆ ಯಾವ ಆಪ್ಷನ್ ಬೇಕು ಅದರ ಮೇಲೆ ಕ್ಲಿಕ್ ಮಾಡಿ. ನಂತರ ಅದರ ದೃಢೀಕರಣದ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ captcha ಹಾಕಿ ಸಬ್ಮಿಟ್ ಅನ್ನು ಪ್ರೆಸ್ ಮಾಡಬೇಕು ಅಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆ ಕೊನೆಗೊಳ್ಳುತ್ತದೆ.

ಇದು ಕೇವಲ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಸಾಮಾನ್ಯ ಪ್ರೈವೇಟ್ ಸೆಕ್ಟರ್ ರಲ್ಲಿ ಅಪ್ಲಿಕೇಶನ್ ಹಾಕಲು ಸಾಧ್ಯವಿಲ್ಲ.ಇದನ್ನೂ ಓದಿ Gruha Jyoti: ಗೃಹ ಜ್ಯೋತಿಗೆ ಅರ್ಜಿಹಾಕಿದ್ದರು ಕೂಡ ಈ ಕೆಲಸ ಮಾಡದಿದ್ದರೆ ಉಚಿತ ಕರೆಂಟ್ ಸಿಗಲ್ಲ, ಈ ರೀತಿ ಮಾಡಿದ್ರೆ ಮಾತ್ರ ಫ್ರೀ

By AS Naik

Leave a Reply

Your email address will not be published. Required fields are marked *