ಎರಡು ನಿಮಿಷದಲ್ಲಿ 2 ಲಕ್ಷ ರೂಪಾಯಿ ಲೋನ್ ನೀಡುತ್ತೆ ಈ pyetm ಪಡೆಯುವುದು ಹೇಗೆ ನೋಡಿ

0 1

ಸಾಲ ಬೇಕೆಂದರೆ ಬ್ಯಾಂಕಿನಲ್ಲಿ ಕಷ್ಟಪಟ್ಟು ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಆನ್ ಲೈನ್ ಮೂಲಕವೇ ಸಾಲ ಸಿಗುವುದಾದರೆ ಒಳ್ಳೆಯದಿತ್ತು ಎಂದು ಅಂದುಕೊಂಡಿರುವವರು ಬಹಳಷ್ಟು ಜನರಿದ್ದಾರೆ. ಅಂತವರಿಗೆ ಪೇಟಿಎಂ ಸಿಹಿಸುದ್ದಿ ನೀಡಿದೆ ಅದೇನೆಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಸಾಲ ತೆಗೆದುಕೊಳ್ಳಬೇಕೆಂದು ಇದ್ದವರಿಗೆ ಪೇಟಿಎಂ ಆಪ್ ಮೂಲಕ ಇಲ್ಲಿದೆ ಸಿಹಿಸುದ್ದಿ. ನಗದು ವ್ಯವಹಾರವನ್ನು ಕಡಿಮೆಗೊಳಿಸಿದ ಡಿಜಿಟಲ್ ಆಪ್ ಪೇಟಿಎಂ ಈಗ ತನ್ನ ಗ್ರಾಹಕರಿಗೆ 2 ಲಕ್ಷ ಸಾಲ ನೀಡಲು ಮುಂದಾಗಿದೆ. ಇಷ್ಟೇ ಅಲ್ಲ 2 ನಿಮಿಷದಲ್ಲಿ ಸಾಲ ಸಿಗಲಿದೆ ಎನ್ನುವುದು ವಿಶೇಷ. ಜೊತೆಗೆ ವರ್ಷದ 365 ದಿನ, ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತದೆ ಮಧ್ಯ ರಾತ್ರಿ ಅಥವಾ ಸರ್ಕಾರಿ ರಜಾ ದಿನಗಳಲ್ಲಿ ಸಾಲ ಪಡೆಯಬಹುದು. ಕೇವಲ 2 ನಿಮಿಷದಲ್ಲಿ ಸಾಲದ ಹಣ ಖಾತೆಗೆ ಬರುತ್ತದೆ. ಉದ್ಯೋಗಿಗಳು, ಸಣ್ಣ ಉದ್ದಿಮೆದಾರರು, ವೃತ್ತಿಪರರು, ಪೇಟಿಎಂ ಮೂಲಕ ಸಾಲ ಪಡೆಯಬಹುದು. ಬ್ಯಾಂಕಿನಲ್ಲಿ ಸಾಲ ಪಡೆಯುವುದಾದರೆ ಬ್ಯಾಂಕಿಗೆ ಬೇಕಾದ ಎಲ್ಲ ದಾಖಲೆಗಳನ್ನು ಅಲೆದಾಡಿ ಸಲ್ಲಿಸಬೇಕು ಆದರೆ ಪೇಟಿಎಂ ಮೂಲಕ ಸಾಲ ಪಡೆಯುವುದಾದರೆ ಮನೆಯಿಂದಲೇ ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಲೋನ್ ಫಾರ್ಮ್ ತುಂಬಬಹುದು. ಲೋನ್ ಪಡೆಯುವಾಗ ಸೂಕ್ತ ದಾಖಲೆ ಒದಗಿಸಬೇಕು. ಈ ಮಹತ್ತರ ಸೇವೆಯನ್ನು ಜನರಿಗೆ ಒದಗಿಸಲು ಬ್ಯಾಂಕ್ ಹಾಗೂ ಬ್ಯಾಂಕೇತರ ಇತರ ಹಣಕಾಸು ಸಂಸ್ಥೆಗಳು ಪೇಟಿಎಂ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈಗಾಗಲೇ ಬೀಟಾ ಮೂಲಕ ಪೇಟಿಎಂ 400 ಗ್ರಾಹಕರಿಗೆ ಸಾಲ ನೀಡಿದೆ ಮಾರ್ಚ್ ವೇಳೆಗೆ 10 ಲಕ್ಷ ಜನರಿಗೆ ಸಾಲ ನೀಡುವ ಗುರಿಯನ್ನು ಪೇಟಿಎಂ ಹೊಂದಿದೆ. ಸಾಲ ಪಡೆದ ನಂತರ 18ರಿಂದ 36 ತಿಂಗಳುಗಳ ಒಳಗೆ ಸಾಲವನ್ನು ಪಾವತಿಸಬೇಕು. ಈ ಅವಧಿಯ ಮೇಲೆ ಇಎಂಐ ನಿರ್ಧಾರವಾಗುತ್ತದೆ. ಪೇಟಿಎಂ ಮೂಲಕ ಸಾಲ ಪಡೆಯುವ ವಿಧಾನವು ಹೀಗಿರುತ್ತದೆ. ಮೊದಲಿಗೆ ಪೇಟಿಎಂ ನಲ್ಲಿ ಫೈನಾನ್ಸಿಯಲ್ ಸರ್ವಿಸ್ ಸೆಕ್ಷನ್ ಗೆ ಹೋಗಿ ಪರ್ಸನಲ್ ಲೋನ್ ಟ್ಯಾಬ್ ಕ್ಲಿಕ್ ಮಾಡಿ ಮುಂದುವರೆಯಿರಿ. ಪೇಟಿಎಂ ಮೂಲಕ ಲೋನ್ ಪಡೆಯುವುದರಲ್ಲಿ ಯಾವುದೇ ಮೋಸವಿಲ್ಲ ನಂಬಿಕೆಯಿಂದ ಯಾರೇ ಆಗಲಿ ಲೋನ್ ಪಡೆಯಬಹುದಾಗಿದೆ. ಲೋನ್ ಪಡೆಯುವವರು ಸೂಕ್ತ ದಾಖಲೆಯೊಂದಿಗೆ ಪೇಟಿಎಂ ಮೂಲಕ ಲೋನ್ ಪಡೆಯಿರಿ.

Leave A Reply

Your email address will not be published.