ಪವಿತ್ರ ಲೋಕೇಶ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ಪವಿತ್ರ ಲೋಕೇಶ್ ತನ್ನ 16 ನೇ ವಯಸ್ಸಿನಲ್ಲಿ ಮೊದಲ ಪ್ರದರ್ಶನವನ್ನು ಮಾಡಿದರು. ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಹಾಗೂ 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ೨೦೦೬ ರಲ್ಲೀ ತೆರೆಕಂಡ ಕನ್ನಡದ ಚಿತ್ರವಾದ ನಾಯಿ ನೆರಳು ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. ಇವರ ಸಹೋದರ ಆದಿ ಲೋಕೇಶ್ ಹಾಗೂ ಪತಿ ಸುಚೇಂದ್ರ ಪ್ರಸಾದ್ ಇವರೂ ಕೂಡಾ ನಟರು. ಪವಿತ್ರ ಲೋಕೇಶ್ ಅವರ ಸುಂದರವಾದ ಕುಟುಂಬದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ತನ್ನ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಶೇಕಡಾ 80 ರಷ್ಟು ಅಂಕಗಳನ್ನು ಪಡೆದುಕೊಂಡ ನಂತರ ಅವರು ಭಾರತೀಯ ನಾಗರಿಕ ಸೇವೆಯನ್ನು ಸೇರಲು ಬಯಸಿದರು. ಹೀಗಿದ್ದಾಗ ಪವಿತ್ರ ಲೋಕೇಶ್ ಅವರ ತಂದೆಯ ಮರಣದ ನಂತರ ತನ್ನ ತಾಯಿಗೆ ಸಹಾಯ ಮಾಡಲು ನಿರ್ಧರಿಸಿದರು. ಅವರೇ ಹೇಳಿದಂತೆ ಅವರ ತಾಯಿ ಕುಟುಂಬದ ಜವಾಬ್ದಾರಿಗಳಿಂದಾಗಿ ಅತಿಯಾಗಿ ಹೊರೆಹೊತ್ತಿದ್ದರು. ಆರಂಭದಲ್ಲಿ ತನ್ನ ತಂದೆಯ ಹಾದಿಯನ್ನೇ ವೃತ್ತಿಜೀವನದಲ್ಲಿ ಅನುಸರಿಸಲು ಇಷ್ಟವಿರಲಿಲ್ಲ. ಅವರು SBRR ಮಹಾಜನ ಪ್ರಥಮ ದರ್ಜೆ ಕಾಲೇಜ್, ಮೈಸೂರುನಿಂದ ವಾಣಿಜ್ಯ ವಿಷಯದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಸಹ ಬರೆದರು. ಆದರೆ ತನ್ನ ಮೊದಲ ಪ್ರಯತ್ನದಲ್ಲಿ ಪರೀಕ್ಷೆಯನ್ನು ಪೂರ್ಣಗೊಳಿಸಲು ವಿಫಲವಾದ ನಂತರ ಅವರು ಬೆಂಗಳೂರಿಗೆ ತೆರಳುವ ಮೊದಲು ಅಭಿನಯಿಸಿದರು.
ಯಾವುದೇ ಮಾರ್ಗದರ್ಶಕರು ಇಲ್ಲದೆಯೇ ಪವಿತ್ರ ಲೋಕೇಶ್ ಅವರು ಅವಕಾಶ ಸಿಕ್ಕ ಎಲ್ಲಾ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದರು. ನಂತರ ಹಿಂದಿನ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಗುಪ್ತಗಾಮಿನಿ ಧಾರಾವಾಹಿಯಲ್ಲಿನ ಅವರ ಅಭಿನಯದಿಂದ ಪ್ರಭಾವಿತರಾದ ಕಾಸರವಳ್ಳಿ ಅವರು ವಿಧವೆಯಾದ ವೆಂಕಟಲಕ್ಷ್ಮಿ, ಸೊಸೆ ಮತ್ತು ಇತರ ಎರಡು ಪಾತ್ರಗಳ ತಾಯಿಯಾಗಿ ನಟಿಸಲು ಅವಕಾಶವನ್ನು ನೀಡಿದರು. ಆದರೆ ಸಿನಿಮಾ ಎಂದ ಕೂಡಲೇ ನಮಗೆಲ್ಲ ನೆನಪಾಗುವುದು ಬಣ್ಣ ಬಣ್ಣದ ಕಲ್ಪನೆ . ಅದರ ಕಷ್ಟ ಸುಖಗಳು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅಂತಹ ಕಲಾವಿದರಲ್ಲಿ ನಟಿ ಪವಿತ್ರಾ ಲೋಕೇಶ್ ಕೂಡ ಒಬ್ಬರು. ಅಂತಹ ಅದ್ಭುತ ನಟಿಯ ಜೀವನದಲ್ಲಿ ನಡೆದ ಘಟನೆಯನ್ನು ಕೇಳಿದರೆ ಕಣ್ಣಿನಲ್ಲಿ ನೀರು ಬರುತ್ತದೆ. ಚಿತ್ರರಂಗ ಕೇಳುವುದಕ್ಕೆ ನೋಡುವುದಕ್ಕೆ ವರ್ಣಮಯವಾಗಿದ್ದರೂ ಆಳದಲ್ಲಿ ತುಂಬಾ ಏಳು ಬೀಳಿನ ತೊಂದರೆಗಳು ಇರುತ್ತವೆ.
2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಎಂಬುವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕಷ್ಟಗಳಿಗೆ ಎದೆಗೊಂದದೆ ಧೈರ್ಯವಾಗಿ ಎದುರಿಸಿ ಇಂದು ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿ ನಟನೆಯಲ್ಲಿ ತೊಡಗಿರುವುದು ಸಣ್ಣ ವಿಷಯವೇ ಅಲ್ಲ. ಇವರ ಮನಸ್ಥೈರ್ಯ ಮತ್ತು ದೃಢ ನಿರ್ಧಾರದಿಂದ ಮಾತ್ರ ಇದು ಸಾಧ್ಯವಾಗಿದೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಧೈರ್ಯ ಮತ್ತು ದೃಢ ನಿರ್ಧಾರದಿಂದ ಬರುವಂಥ ಎಲ್ಲಾ ಕಷ್ಟಗಳನ್ನು ಎದುರಿಸಿ ಛಲದಿಂದ ಗುರಿಯತ್ತ ಹೆಜ್ಜೆ ಇಡಬೇಕು ಆಗ ಮಾತ್ರ ಗೆಲುವು ನಿಶ್ಚಿತ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದರು ಇಂದು ಗಂಡ ಮತ್ತು ಮಕ್ಕಳ ಜೊತೆಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ. ನಟಿ ಪವಿತ್ರ ಲೋಕೇಶ್ ಅವರ ಕುಟುಂಬದ ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ಇಲ್ಲಿ ಕಾಣಬಹುದು.