ಅಪ್ಪು ಆಚರಿಸಿದ ಪಾರ್ವತಮ್ಮ ಅವರ ಬರ್ತಡೇ ಸೆಲೆಬ್ರೇಷನ್ ಹೇಗಿತ್ತು ಅಪರೂಪದ ವೀಡಿಯೊ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ದೊಡ್ಡಮನೆ ಪರಿವಾರದ ಸದಸ್ಯರಲ್ಲಿ ಅತ್ಯಂತ ಪ್ರಮುಖರಾದ ಪಾರ್ವತಮ್ಮ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಆಸ್ತಿ ಎಂದರೆ ಅತಿಶಯೋಕ್ತಿಯಲ್ಲ. ಅವರು ನಿರಂತರವಾಗಿ ಐದು ದಶಕಗಳಿಗಿಂತಲೂ ಹೆಚ್ಚಿನ ಕಾಲ ನೀಡಿರುವ ಗುಣಮಟ್ಟದ ಚಿತ್ರಗಳು ಬೇರೆ ಭಾಷೆಯವರು ನಮ್ಮ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿದವು. ರಾಜಕುಮಾರ್ ಅವರು ಕಂಡಂತಹ ಕನಸುಗಳನ್ನು ನನಸು ಮಾಡುವುದಕ್ಕೆ ಯಾವಾಗಲೂ ಪ್ರಯತ್ನಿಸುತ್ತಿದ್ದರು ಪಾರ್ವತಮ್ಮ ರಾಜ್ ಕುಮಾರ್ ಅವರು.

ವರ ನಟ ಡಾಕ್ಟರ್ ರಾಜಕುಮಾರ್ ಎಂಬ ಮಹಾನ್ ನಟನ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರು ಅವರಿಗೆ ಶಕ್ತಿಯಾಗಿದ್ದರು. ಅವರು ಕೇವಲ ರಾಜಕುಮಾರ್ ಅವರಿಗೆ ಮಾತ್ರ ಶಕ್ತಿ ಆಗಿರಲಿಲ್ಲ ತಮ್ಮ ಮೂವರು ಮಕ್ಕಳಿಗೂ ಕೂಡ ಯಶಸ್ಸಿನ ಮೆಟ್ಟಿಲಾಗಿದ್ದರು ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಪುನೀತ್ ರಾಜಕುಮಾರ್ ಎಂಬ ಮೂರು ರತ್ನಗಳನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದರು. ಪಾರ್ವತಮ್ಮ ರಾಜಕುಮಾರ್ ಅವರು ಕನ್ನಡ ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಕೂಡ ಅಪಾರವಾಗಿತ್ತು.

ಪಾರ್ವತಮ್ಮ ರಾಜಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಮನೆಯನ್ನು ಕೂಡ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದರು ಮಕ್ಕಳನ್ನು ಸದಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರನ್ನು ಕಳೆದುಕೊಂಡು ಚಿತ್ರರಂಗ ಕೂಡ ಒಂದು ಅಮೂಲ್ಯವಾದ ಆಸ್ತಿಯನ್ನು ಕಳೆದುಕೊಂಡಿದೆ ಎಂದು ಹೇಳಬಹುದು.

ಇತ್ತೀಚೆಗೆ ಕನ್ನಡ ಚಿತ್ರರಂಗದ ಮಾಣಿಕ್ಯ ಪಾರ್ವತಮ್ಮನವರ ನೆಚ್ಚಿನ ಮಗನಾದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕರ್ನಾಟಕ ಇನ್ನೂ ಕೂಡ ದುಃಖದ ಮಡುವಿನಲ್ಲಿ ಇದೆ. ಡಿಸೆಂಬರ್ ಆರು ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟಿದ ದಿನ ಅವರ ಹುಟ್ಟುಹಬ್ಬವನ್ನು ಮನೆಯ ಸದಸ್ಯರು ಸಂಭ್ರಮದಿಂದ ಆಚರಿಸುತ್ತಿದ್ದರು.

ಅವರು ವಿಧಿವಶರಾಗಿರುವುದಕ್ಕೆ ಮೊದಲು ಆಚರಿಸಿಕೊಂಡ ಹುಟ್ಟುಹಬ್ಬದ ವಿಡಿಯೋದಲ್ಲಿ ಪುನೀತ್ ರಾಜಕುಮಾರ್ ಅವರು ತುಂಬಾ ಸಡಗರದಿಂದ ಮನೆಯವರೊಟ್ಟಿಗೆ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *