ಕನ್ನಡದ ಈ ಸೆಲೆಬ್ರೆಟಿಗಳು ತಮ್ಮ ಕನಸಿನ ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೋತ್ತಾ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಸೆಲೆಬ್ರೆಟಿಗಳ ಮನೆಗಳು ಯಾವ ಅರಮನೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಇರುತ್ತದೆ. ನಮ್ಮ ಕನ್ನಡ ಸಿನಿಮಾರಂಗದ ಬಹುತೇಕ ನಟರು ಕೂಡ ತಮ್ಮ ಮನೆಗಳನ್ನು ಆಕರ್ಷಕವಾಗಿ ಕಟ್ಟಿಸಿಕೊಂಡಿದ್ದಾರೆ. ತಮ್ಮ ಕನಸಿನ ಮನೆಗೆ ಪ್ರೀತಿಯಿಂದ ಹೆಸರುಗಳನ್ನು ಇಟ್ಟಿದ್ದಾರೆ ಹಾಗಾದರೆ ನಮ್ಮ ನೆಚ್ಚಿನ ನಟರು ಅವರ ಮನೆಗಳಿಗೆ ಯಾವ ಹೆಸರನ್ನು ಇಟ್ಟಿದ್ದಾರೆ ಯಾವ ಕಾರಣಕ್ಕಾಗಿ ಆ ಹೆಸರನ್ನು ಇಟ್ಟಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ದುನಿಯಾ ವಿಜಯ್ ಇವರಿಗೆ ದುನಿಯಾ ಚಿತ್ರ ಕನ್ನಡ ಚಿತ್ರರಂಗದಲ್ಲಿ ತುಂಬಾ ಹೆಸರನ್ನು ತಂದುಕೊಟ್ಟಂತಹ ಚಿತ್ರ ಅದಕ್ಕಾಗಿ ಅವರು ತಮ್ಮ ಕನಸಿನ ಮನೆಗೆ ದುನಿಯಾ ಋಣ ಎಂಬ ಹೆಸರನ್ನು ಇಟ್ಟಿದ್ದಾರೆ. ಋಣ ಎಂಬುದು ತಂದೆ ರುದ್ರಪ್ಪ ತಾಯಿ ನಾರಾಯಣಮ್ಮ ಅವರ ಹೆಸರಾಗಿದೆ. ಸದಾಶಿವನಗರದಲ್ಲಿರುವ ಡಾಕ್ಟರ್ ರಾಜಕುಮಾರ್ ಅವರು ವಾಸಿಸುತ್ತಿದ್ದ ಮನೆಯನ್ನು ವೈಟ್ ಹೌಸ್ ಎಂದು ಕರೆಯುತ್ತಿದ್ದರು.

ಆ ಮನೆಯಲ್ಲಿ ಪುನೀತ್ ರಾಜಕುಮಾರ ಹಾಗೂ ರಾಘಣ್ಣ ಅವರು ವಾಸಮಾಡುತ್ತಿದ್ದರು ಹಳೆಮನೆಯ ಜಾಗದಲ್ಲಿ ವಿದೇಶಿ ಶೈಲಿಯಲ್ಲಿ ಹೊಸ ಮನೆಯನ್ನು ವಿನ್ಯಾಸ ಮಾಡಿದ್ದು ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರಿಗೆ ಒಂದೇ ರೀತಿಯ ಎರಡು ಮನೆಗಳನ್ನು ನಿರ್ಮಿಸಲಾಗಿದ್ದು ಇದುವರೆಗೂ ಅದಕ್ಕೆ ಯಾವುದೇ ರೀತಿಯ ಹೆಸರನ್ನು ಇಟ್ಟಿಲ್ಲ ಆದರೆ ಅಭಿಮಾನಿಗಳು ಪ್ರೀತಿಯಿಂದ ಅದನ್ನು ದೊಡ್ಮನೆ ಎಂದು ಕರೆಯುತ್ತಾರೆ.

ರಕ್ಷಿತಾ ಮತ್ತು ಪ್ರೇಮ್, ಕ್ರೇಜಿ ಕ್ವೀನ್ ರಕ್ಷಿತ ಹಾಗೂ ಡೈರೆಕ್ಟರ್ ಪ್ರೇಮ್ ದಂಪತಿಗಳು ಎರಡು ಸಾವಿರದ ಒಂಬತ್ತರಲ್ಲಿ ಮಗ ಸೂರ್ಯ ಹುಟ್ಟಿದಮೇಲೆ ಚಂದ್ರ ಲೇಔಟ್ ನಲ್ಲಿ ಮೂರು ಅಂತಸ್ತಿನ ಮನೆಯನ್ನು ಕಟ್ಟಿಸಿದ್ದು ಮನೆಗೆ ಮಗ ಸೂರ್ಯನ ಹೆಸರನ್ನು ಇಟ್ಟಿದ್ದಾರೆ.

ನವರಸ ನಾಯಕ ಜಗ್ಗೇಶ್ ಅವರು ಮಲ್ಲೇಶ್ವರಂನಲ್ಲಿ ಮೂರು ಅಂತಸ್ತಿನ ಸುಂದರವಾದ ಮನೆಯನ್ನು ಕಟ್ಟಿಸಿದ್ದು ಈ ಮನೆಗೆ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದಾರೆ. ಈ ಮನೆಗೆ ಹಾಗೆ ಹೆಸರಿಡಲು ಕಾರಣ ಜಗ್ಗೇಶ್ ಅವರು ರಾಘವೇಂದ್ರ ಸ್ವಾಮಿಗಳ ಪರಮಭಕ್ತರಾಗಿದ್ದು ಅವರ ಮೂಲ ಹೆಸರು ಸುಧಾ ಪರಿಮಳ ಆಚಾರ್ಯ ಆಗಿದ್ದು ಜೊತೆಗೆ ಪ್ರೀತಿಸಿ ಮದುವೆಯಾದ ಹೆಂಡತಿಯ ಹೆಸರು ಕೂಡ ಪರಿಮಳ ಆಗಿರುವುದರಿಂದ ತಮ್ಮ ಮನೆಗೆ ಪರಿಮಳ ನಿವಾಸ ಎಂದು ಹೆಸರಿಟ್ಟಿದ್ದಾರೆ.

ಶಿವರಾಜ್ ಕುಮಾರ್ ಅವರ ಮನೆ ಮುಕ್ಕಾಲು ಎಕರೆ ಜಾಗದಷ್ಟು ವಿಸ್ತೀರ್ಣವನ್ನು ಹೊಂದಿದ್ದು ಈ ಮನೆಗೆ ಶ್ರೀಮುತ್ತು ಎಂದು ಹೆಸರಿಟ್ಟಿದ್ದಾರೆ. ಶಿವರಾಜ್ ಕುಮಾರ್ ಅವರ ತಂದೆ ರಾಜಕುಮಾರ್ ಅವರ ಮೂಲ ಹೆಸರು ಮುತ್ತುರಾಜ್ ಆಗಿತ್ತು ಆ ಕಾರಣಕ್ಕಾಗಿ ಮನೆಗೆ ತಂದೆಯ ಹೆಸರನ್ನು ಇಟ್ಟಿದ್ದಾರೆ. ಅಂಬರೀಶ್ ಅವರ ಮನೆ ಕತ್ರಿಗುಪ್ಪೆಯಲ್ಲಿ ಇದ್ದು ಅಂಬರೀಶ್ ಅವರು ಪ್ರೀತಿಯಿಂದ ಕಟ್ಟಿಸಿದ ಮನೆಯಾಗಿದ್ದು ಅಂಬರೀಶ್ ಅವರ ಮರಣದ ನಂತರ ಈ ಮನೆಯ ಗ್ರಹಪ್ರವೇಶ ಮಾಡಲಾಗಿದೆ ಹಾಗಾಗಿ ಇವರ ಪತ್ನಿ ಮತ್ತು ಮಗ ಈ ಮನೆಗೆ ಪ್ರೀತಿಯಿಂದ ಅಂಬಿ ಮನೆ ಎಂದು ಹೆಸರಿಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಅವರು ಪುಟ್ಟೇನಹಳ್ಳಿಯಲ್ಲಿ ಮನೆ ಕಟ್ಟಿಸಿದ್ದು ಅಪ್ಪನ ಆಸೆಯಂತೆ ಸುದೀಪ್ ಅವರು ಹೆಂಡತಿ-ಮಕ್ಕಳೊಂದಿಗೆ ಈಗಲೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಈ ಮನೆಗೆ ಸುದೀಪ್ ಅವರ ತಂದೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ ಸುದೀಪ್ ಅವರ ತಂದೆ ತಾಯಿ ಇಬ್ಬರೂ ವೆಂಕಟೇಶ್ವರನ ಭಕ್ತರಾಗಿದ್ದು ಮನೆಗೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ.

ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ತಂದೆ ಅವರು ಕಟ್ಟಿಸಿರುವ ಮನೆಗೆ ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ ಎಂದು ಹೆಸರಿಟ್ಟಿದ್ದಾರೆ. ನಟಿ ತಾರಾ ಅವರು ಅವರ ಮನೆಗೆ ತಾರಾ ಅನುರಾಧ ಚಿಗುರು ಎಂದು ಹೆಸರಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜರಾಜೇಶ್ವರಿ ನಗರದಲ್ಲಿ ಹೊಸದಾಗಿ ಮನೆಯನ್ನು ಕಟ್ಟಿಸಿದ್ದು ಗಣಪತಿಯ ಮೇಲೆ ಅಪಾರ ಭಕ್ತಿ ಇರುವ ಗಣೇಶ್ ಅವರು ತಮ್ಮ ಮನೆಗೆ ಗಣಪ ಎಂದು ಹೆಸರಿಟ್ಟಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಮನೆಗೆ ಸು ಮನೆ ಎಂದು ಹೆಸರಿಟ್ಟಿದ್ದು ಎಸ್ ಎನ್ನುವುದು ಇವರ ಸಹೋದರ ಸುಧೀಂದ್ರ ಅವರ ಹೆಸರಾಗಿದ್ದು ಯು ಉಪೇಂದ್ರ ಎಂದಾಗಿದ್ದು ಸು ಮನೆ ಎಂದು ಹೆಸರಿಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಜಾಜಿನಗರದಲ್ಲಿ ಅಂದದ ಮನೆಯನ್ನು ಕಟ್ಟಿಸಿದ್ದು ಮನೆಗೆ ತೂಗುದೀಪ ನಿಲಯ ಎಂದು ಹೆಸರಿಟ್ಟಿದ್ದಾರೆ. ತೂಗುದೀಪ ಎನ್ನುವುದು ಅವರ ತಂದೆಯ ಹೆಸರಾಗಿದ್ದು ಫಾರ್ಮ್ ಹೌಸ್ ಗೂ ಕೂಡ ತೂಗುದೀಪ ಎಂದು ಹೆಸರಿಟ್ಟಿದ್ದಾರೆ. ವಿನೋದ್ ಪ್ರಭಾಕರ್ ಇವರು ಅವರ ತಂದೆ ಟೈಗರ್ ಪ್ರಭಾಕರ್ ಅವರು ಕಟ್ಟಿಸಿರುವ ಮನೆಯಲ್ಲಿ ವಾಸವಿದ್ದು ಮನೆಗೆ ಟೈಗರ್ ಪ್ರಭಾಕರ್ ಎಂದು ಹೆಸರಿಟ್ಟಿದ್ದಾರೆ.

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ತಮ್ಮ ಮನೆಗೆ ಶಬರಿ ಎಂದು ಹೆಸರಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಹೊಸದಾಗಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಎರಡು ಫ್ಲಾಟ್ ಗಳನ್ನು ಖರೀದಿಸಿದ್ದು ಇದು ವಿಧಾನಸೌಧದ ಹತ್ತಿರ ಇದೆ. ಇದಿಷ್ಟು ಕನ್ನಡ ಸಿನಿಮಾರಂಗದ ನಟರು ತಮ್ಮ ಮನೆಗೆ ಯಾವ ಹೆಸರುಗಳನ್ನು ಇಟ್ಟಿದ್ದಾರೆ ಎಂಬುದರ ಕುರಿತಾದ ಮಾಹಿತಿಯಾಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *