ಪಾರ್ಲೇಜಿ ಬಿಸ್ಕಟ್ ಸಿಗದ ಉರುಗಳೇ ಇಲ್ಲ. ಯಾವುದೇ ಊರಿನಲ್ಲಿ ಇರುವ ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಸಹ ಪಾರ್ಲೇಜಿ ಬಿಸ್ಕಟ್ ದೊರಕದೆ ಇರುವುದೇ ಇಲ್ಲ. ನಮ್ಮಲ್ಲಿ ಬಹಳಷ್ಟು ಮಂದಿ ಇಂದಿಗೂ ಸಹ ಚಹಾ ಜೊತೆಗೆ ಪಾರ್ಲೇಜಿ ಬಿಸ್ಕಟ್ ಬೇಕೇ ಬೇಕು. ಅಷ್ಟೊಂದು ಈ ಬಿಸ್ಕಟ್ ಇಡೀ ವಿಶ್ವದ ತುಂಬಾ ಪ್ರಸಿದ್ಧಿ ಹೊಂದಿದೆ. ನಾವು ನಮ್ಮ ಬಾಲ್ಯದಲ್ಲಿ ತಿಂದ ಅತೀ ಹೆಚ್ಚು ಬಿಸ್ಕಟ್ ಅಂದ್ರೆ ಅದು ಪಾರ್ಲೇಜಿ ಬಿಸ್ಕಟ್. ತುಂಬಾ ಹಳೆಯ ಇತಿಹಾಸ ಹೊಂದಿರುವ ಪಾರ್ಲೇಜಿ ಬಿಸ್ಕಟ್ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋ
1929 ರಲ್ಲಿ ಮೋಹನ್ ಲಾಲ್ ದಯಾಲ್ ಚೌಹಾಣ್ ಅವರಿಂದ ಮುಂಬೈ ನ ವಿಲೇ ಪಾರ್ಲೆ ಎಂಬಲ್ಲಿ ಪಾರ್ಲೆ ಪ್ರಾಡಕ್ಟ್ಸ್ ಎಂಬ ಹೆಸರಿನಲ್ಲಿ ಒಂದು ಸಣ್ಣ ಕಂಪನಿ ಆರಂಭ ಆಯಿತು. ಆರಂಭದಲ್ಲಿ ಈ ಕಂಪನಿಯು ಕಾಫಿ ಚಾಕಲೇಟ್ ಗಳನ್ನು ಉತ್ಪಾದನೆ ಮಾಡುತ್ತಾ ಇರುತ್ತದೆ. ನಂತರ 10 ವರ್ಷಗಳ ನಂತರ ಇದೆ ಜಂಪನಿಯು ಬಿಸ್ಕೆಟ್ ತಯಾರಿಸಲು ಮುಂದಾಗುತ್ತದೆ. ಈ ಕಂಪನಿಯ ಬಿಸ್ಕೆಟ್ ಗಳ ಒಳ್ಳೆಯ ಗುಣಮಟ್ಟ ಮತ್ತು ಕಡಿಮೆ ಬೆಲೆಯಿಂದ ಕಂಪನಿ ಪ್ರಸಿದ್ಧಿ ಪಡೆಯುತ್ತದೆ. ಈ ಬಿಸ್ಕೆಟ್ ಗಳ ಹೆಸರು ಪಾರ್ಲೆ ಗ್ಲುಕೋ ಅಂತ ಇತ್ತು ಮುಂದೆ ಭಾರದದ ಸ್ವಾತಂತ್ರ್ಯಾ ನಂತರ ರೇಡಿಯೋ ಮತ್ತು ನ್ಯೂಸ್ ಪೇಪರ್ ಗಳಲ್ಲಿ ಭಾರೀ ಪ್ರಮಾಣದ ಅಡ್ವಾಟೈಸ್ ಕೊಡೋಕೆ ಆರಂಭಿಸಿತ್ತು. ಈ ಅಡ್ವಾಟೈಸ್ ಗಳಲ್ಲಿ ಭಾರತದ ಈ ಬಿಸ್ಕೆಟ್ ಗಳು ಬ್ರಿಟೀಷರ ಬಿಸ್ಕೆಟ್ ನ ಪರ್ಯಾಯ ಬಿಸ್ಕೆಟ್ ಅಗಳು ಅಂತ ಇದ್ದಿರುತ್ತದೆ. ಇದರಿಂದಾಗಿ ಪಾರ್ಲೆ ಭಾರತೀಯರ ಮೇಲೆ ಪರಿಣಾಮ ಬೀರತ್ತೆ. ಮತ್ತು ಪಾರ್ಲೆ ಗ್ಲುಕೋ ಅತೀ ಹೆಚ್ಚು ಮರಾಟವಾದ ಬಿಸ್ಕೆಟ್ ಆಗಿರುತ್ತದೆ.
1980 ರ ವರೆಗೂ ಈ ಬಿಸ್ಕೆಟ್ ಗಳನ್ನ ಪಾರ್ಲೆ ಗ್ಲುಕೋ ಎಂದು ಕರೆಯಲಾಗುತ್ತಿತ್ತು. 1980 ರ ನಂತರ ಇದರ ಹೆಸರನ್ನು ಬದಲಿಸಿ ಪಾರ್ಲೆ – ಜಿ ಎಂದು ಇಡಲಾಯಿತು. ಮೊದಲು ಜಿ ಅರ್ಥ ಗ್ಲುಕೋಸ್ ಅಂತ ಇತ್ತು ನಂತರ ಅದನ್ನು ಬದಲಿಸಿ ಜಿ ಅಂದರೆ ಜೀನಿಯಸ್ ಎಂದು ಬದಲಿಸಲಾಯಿತು. ಈ ಬಿಸ್ಕೆಟ್ ನ ಒಳ್ಳೆಯ ಗುಣ ಒಂದೇನಾಗಿತ್ತು ಅಂದರೆ ಈ ಬಿಸ್ಕೆಟ್ ಪ್ಯಾಕ್ ಯಾರೇ ನೋಡಿದರೂ ಸಹ ಇದು ಪಾರ್ಲೇಜಿ ಬಿಸ್ಕಿಟ್ಟೆ ಅಂತ ಸುಲಭವಾಗಿ ಕಂಡುಹಿಡಿಯುತ್ತಿದ್ದರು. ಪಾರ್ಲೇಜಿ ಬಿಸ್ಕೆಟ್ ಗಳು ಮೊದಲು ವ್ಯಾಕ್ಸ್ ಪೇಪರ್ ಗಳಲ್ಲಿ ಪ್ಯಾಕ್ ಆಗಿ ಬರುತ್ತಿತ್ತು ಆದರೆ ಈಗ ಕೆಲವು ವರ್ಷಗಳ ಹಿಂದಿನಿಂದ ಪ್ಲಾಸ್ಟಿಮ್ ಪೇಪರ್ ಗಳಲ್ಲಿ ಪ್ಯಾಕ್ ಆಗಿ ಬರುತ್ತಾ ಇವೆ. ಪಾರ್ಲೇಜಿ ಬಿಸ್ಕೆಟ್ ನ ಇನ್ನೊಂದು ಮುಖ್ಯವಾದ ಅಂಶ ಎಂದ್ರೆ ಈ ಬಿಸ್ಕೆಟ್ ಪ್ಯಾಕ್ ಮೇಲೆ ಇರುವ ಮುದ್ದು ಮುಖದ ಪುಟ್ಟ ಹುಡುಗಿಯ ಚಿತ್ರ. ಈಕೆ ಈ ಬಿಸ್ಕೆಟ್ ನ ಗುರುತು ಆಗಿದ್ದಾಳೆ. ಹೀಗೆ ಸ್ವಲ್ಪ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪಾರ್ಲೇಜಿ ಬಿಸ್ಕೆಟ್ ಮೇಲೆ ಇರುವ ಈ ಹುಡುಗಿಯು ನಾಗಪುರದ ನಿರೋದೇಶ್ ಪಾಂಡೆ ಅವರದ್ದು ಎಂದು ಕೆಲವು ಸುಳ್ಳು ಸುದ್ಧಿಗಳು ಹರಿದಾಡುತ್ತಾ ಇದ್ದವು. ಆದರೆ ಸತ್ಯಾಂಶ ಎಂದರೆ ಇದು ಒಂದು 1960 ರಲ್ಲಿ ಒಬ್ಬ ಚಿತ್ರಕಾರ ಇದನ್ನ ಈ ಹುಡುಗಿಯ ಚಿತ್ರವನ್ನು ಬಿಡಿಸಿದ್ದು ಅದನ್ನು ಪಾರ್ಲೆ ಕಂಪನಿಗೆ ನೀಡಿದ್ದ. 2003 ರಲ್ಲಿ ಈ ಬಿಸ್ಕೆಟ್ ಗಳು ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟವಾದ ಬಿಸ್ಕೆಟ್ ಆಗಿತ್ತು ಹಾಗೂ ಬಜಾರಾದಲ್ಲಿ ಇಂದಿಗೂ ಸಹ ಇದರ ಮಾರಾಟ ಹೆಚ್ಚಾಗಿಯೇ ಉತ್ತಮವಾಗಿ ಇದೆ.
ಮಾರ್ಕೆಟ್ ನಲ್ಲಿ ಗ್ಲೋಕೋಸ್ ಬಿಸ್ಕೆಟ್ ಗಳ ಮಾರಾಟದಲ್ಲಿ ಪಾರ್ಲೆ ಬಿಸ್ಕೆಟ್ 70 % ರಷ್ಟು ಮಾರಾಟ ಆಗುತ್ತಿದೆ. ಇದರ ನಂತರ 17 ರಿಂದ 18 % ಅಷ್ಟು ಬ್ರಿಟಾನಿಯ ಟೈಗರ್ ಬಿಸ್ಕಟ್ ಮಾರಾಟ ಆಗುತ್ತಿದೆ. ಮಾರ್ಕೆಟ್ ನಲ್ಲಿ ಇವತ್ತಿಗೂ ಸಹ ಪಾರ್ಲೇಜಿ ಬಿಸ್ಕಟ್ ಗಳು 5 ರೂಪಾಯಿನಿಂದ ಹಿಡಿದು 50 ರೂಪಾಯಿಯವರೆಗೂ ಲಭ್ಯವಿದೇ. ಆದರೆ ಇಂದಿಗೂ ಸಹ ಅತೀ ಹೆಚ್ಚು ಮಾರಾಟ ಆಗುವುದು ಅದೇ 5 ರೂಪಾಯಿಯ ಬಿಸ್ಕಟ್ ಗಳು. ವರ್ಷಕ್ಕೆ ಪಾರ್ಲೇಜಿಯ ಉತ್ಪಾದನೆ 100 ಕೋಟಿ ಅಷ್ಟು ಇರುತ್ತದೆ.