ಈ ಎಲೆ ಎಲ್ಲಿ ಸಿಕ್ಕರೂ ಬಿಡಬೇಡಿ ಒಂದು ಟೈಮ್ ನಲ್ಲಿ ಬಂಗಾರಕ್ಕಿಂತ ಬೆಲೆಯುಳ್ಳದ್ದು ಯಾಕೆ ಗೊತ್ತೇ?

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಹಳ್ಳಿಗಳಲ್ಲಿ ಕಂಡುಬರುವ ಪಪ್ಪಾಯ ಹಣ್ಣಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಪಪ್ಪಾಯ ಹಣ್ಣಿನ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆದರೆ ಪಪ್ಪಾಯ ಎಲೆಯ ಸೇವನೆಯಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಪಪ್ಪಾಯ ಎಲೆಯ ಸೇವನೆಯಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಅದರ ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಪಪ್ಪಾಯ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಲ್ಲದೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ನಮ್ಮ ದೇಹಕ್ಕೆ ಬೇಕಾಗಿರುವ ಪ್ರೋಟಿನ್, ವಿಟಮಿನ್ ಪಪ್ಪಾಯ ಹಣ್ಣಿನಿಂದ ದೊರೆಯುತ್ತದೆ. ಪಪ್ಪಾಯ ಹಣ್ಣು ನಮ್ಮ ಅನೇಕ ಖಾಯಿಲೆಗಳನ್ನು ನಿವಾರಿಸುತ್ತದೆ. ಪಪ್ಪಾಯ ಹಣ್ಣು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂಬ ವಿಷಯ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಪಪ್ಪಾಯ ಗಿಡದ ಎಲೆಗಳೂ ಸಹ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೆಲವು ಕಡೆ ಪಪ್ಪಾಯ ಗಿಡದ ಎಲೆಯನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಪಪ್ಪಾಯ ಎಲೆಗಳಲ್ಲಿ ಆಂಟಿ ಕ್ಯಾನ್ಸರ್ ಗುಣ ಹೇರಳವಾಗಿರುತ್ತದೆ, ಸಂಶೋಧನೆಯ ಪ್ರಕಾರ ಬ್ರೆಸ್ಟ್ ಕ್ಯಾನ್ಸರ್, ಸರ್ವೈಕಲ್ ಕ್ಯಾನ್ಸರ್, ಲಂಗ್ ಕ್ಯಾನ್ಸರ್ ಗೆ ಕಾರಣವಾಗುವ ವೈರಸ್ ಜೊತೆಗೆ ಹೋರಾಡಿ ವ್ಯಾಧಿ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಪ್ಪಾಯ ಎಲೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಪಪ್ಪಾಯ ಎಲೆಗಳಲ್ಲಿ 50 ಆಕ್ಟೀವ್ ಪದಾರ್ಥಗಳು ಇರುತ್ತದೆ. ಕಾರ್ಪಿನ್ ಅನ್ನುವ ಕಂಟೆಂಟ್ ಫಂಗಸ್ ಹಾಗೂ ವಾರ್ಮ್ ಪರಾಣ‌ ಜೀವಿಗಳು ಇತರೆ ಕ್ಯಾನ್ಸರ್ ನಂತಹ ಅತಿ ಸೂಕ್ಷ್ಮವಾದ ಜೀವಗಳು ನಮ್ಮ ದೇಹದಲ್ಲಿ ವೃದ್ಧಿಯಾಗದಂತೆ ವಿರೋಧಿಸುವ ಲಕ್ಷಣಗಳು ಪಪ್ಪಾಯ ಎಲೆಗಳಲ್ಲಿ ಹೆಚ್ಚಾಗಿದೆ. ಈ ಎಲೆಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲೆಗಳಲ್ಲಿ ಆಂಟಿ ಮಲೇರಿಯಾ ಲಕ್ಷಣಗಳು ಹೆಚ್ಚಾಗಿರುತ್ತದೆ. ಈ ಎಲೆಗಳನ್ನು ಸೇವಿಸುವುದರಿಂದ ಪರಿಣಾಮಕಾರಿಯಾಗಿ ಮಲೇರಿಯಾ ರೋಗವನ್ನು ವಾಸಿ ಮಾಡುತ್ತದೆ. ಪಪ್ಪಾಯ ಎಲೆಯ ರಸವನ್ನು ಕುಡಿಯುವುದರಿಂದ ಮಲೇರಿಯಾ, ಡೆಂಗ್ಯೂ ಖಾಯಿಲೆಗಳು ಬೇಗ ನಿವಾರಣೆಯಾಗುತ್ತದೆ. ಡೆಂಗ್ಯೂ ವೈರಸ್ ನಿಂದ ಲಿವರ್ ಡ್ಯಾಮೇಜ್ ಆಗದಂತೆ ಅಲ್ಲದೆ ಬ್ಲಡ್ ಕ್ಲೊಟ್ ಆಗದಂತೆ ನೋಡಿಕೊಳ್ಳುತ್ತದೆ.

ಬಹಳ ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ಪೀರಿಯಡ್ ಸಮಯದಲ್ಲಿ ಹೊಟ್ಟೆ ನೋವು ಬರುತ್ತದೆ ಆಗ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಒಂದು ಪಪ್ಪಾಯ ಎಲೆ ಅದಕ್ಕೆ ಸ್ವಲ್ಪ ಉಪ್ಪು, ಹುಣಸೆ ಹಣ್ಣನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಆ ನೀರನ್ನು ಸೋಸಿ ಉಗುರು ಬೆಚ್ಚಗೆ ಆದ ನಂತರ ಕುಡಿಯಬೇಕು ಹೀಗೆ ಕುಡಿಯುವುದರಿಂದ ಪೀರಿಯಡ್ ಸಮಯದಲ್ಲಿ ಹೊಟ್ಟೆ ನೋವು ಬರುವುದಿಲ್ಲ ಮತ್ತು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪೀರಿಯಡ್ ಆಗುತ್ತದೆ. ದಿನನಿತ್ಯ ಎರಡು ಚಮಚ ಪಪ್ಪಾಯ ಎಲೆಯ ರಸವನ್ನು ಕುಡಿಯುವುದರಿಂದ ದೇಹದಲ್ಲಿ ಬ್ಲಡ್ ಪ್ಲೇಟ್ಸ್ ಹೆಚ್ಚಾಗುತ್ತದೆ. ಪಪ್ಪಾಯ ಎಲೆಯ ರಸ ಕುಡಿಯುವುದರಿಂದ ದೇಹದಲ್ಲಿ ವಿಷ ಪದಾರ್ಥವನ್ನು ಹೊರ ಹಾಕಿ ಮೈಕೈ ನೋವು, ನಿಶ್ಯಕ್ತಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿಕೊಂಡು ಪ್ರತಿದಿನ 10 ಗ್ರಾಂ ಪಪ್ಪಾಯ ಎಲೆಯ ಪುಡಿಯನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಬಿಟ್ಟು ಕುಡಿಯುವುದರಿಂದ ಜ್ವರ ನಿವಾರಣೆಯಾಗುತ್ತದೆ.

ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆ, ಅಜೀರ್ಣ ಇರುವವರು ಪಪ್ಪಾಯ ಎಲೆಯ ರಸವನ್ನು ಕುಡಿಯುವುದು ಒಳ್ಳೆಯದು. ಪಪ್ಪಾಯ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪೌಡರ್ ಮಾಡಿ ಅದಕ್ಕೆ ನೀರನ್ನು ಸೇರಿಸಿ ಪೇಸ್ಟ್ ರೀತಿ ಮಾಡಿಕೊಂಡು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು, ಮೊಡವೆ ಕಲೆಗಳನ್ನು ನಿವಾರಿಸಲು ಬಹಳ ಸಹಾಯವಾಗುತ್ತದೆ. ಚರ್ಮ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ. ಪಪ್ಪಾಯ ಎಲೆಯಲ್ಲಿ ಕ್ಯಾಲ್ಶಿಯಂ, ವಿಟಮಿನ್ ಸಿ, ವಿಟಮಿನ್ ಕೆ ಇರುತ್ತದೆ ಪಪ್ಪಾಯ ಎಲೆಯ ರಸದಿಂದ ನಮ್ಮ ಮೂಳೆಯ ಆರೋಗ್ಯ ಉತ್ತಮವಾಗಿರುತ್ತದೆ ಅಲ್ಲದೆ ಕೀಲು ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ. ಎನ್ವೆದ ಅವರ ಇಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ಪಪ್ಪಾಯ ಎಲೆಗಳನ್ನು ಬಳಸಿ ತಯಾರಿಸುತ್ತಾರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಮಾತ್ರೆಯನ್ನು ಬೆಳಗ್ಗೆ ಒಂದು, ಸಾಯಂಕಾಲ ಒಂದು ತೆಗೆದುಕೊಳ್ಳಬಹುದು. ಪಪ್ಪಾಯ ಎಲೆಗಳ ಪೇಸ್ಟ್ ಮಾಡಿಕೊಂಡು ತಲೆ ಕೂದಲಿಗೆ ಹಚ್ಚುವುದರಿಂದ ಹೊಟ್ಟು ನಿವಾರಣೆಯಾಗಿ ಕೂದಲು ಬಲವಾಗುತ್ತದೆ ಅಲ್ಲದೆ ಆರೋಗ್ಯವಾಗಿ ಬೆಳೆಯುತ್ತದೆ. ಗರ್ಭಿಣಿ ಮಹಿಳೆಯರು ಪಪ್ಪಾಯ ಹಣ್ಣು ಅಥವಾ ಎಲೆಯನ್ನು ಸೇವಿಸಬಾರದು. ಈ ರೀತಿ ಪಪ್ಪಾಯ ಹಣ್ಣು ಮಾತ್ರವಲ್ಲದೆ ಅದರ ಎಲೆಯು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಪಪ್ಪಾಯ ಗಿಡವನ್ನು ಮನೆಯಲ್ಲಿ ಬೆಳೆಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *