ಈ ಹಣ್ಣಿನ ಸೀಸನ್ ಶುರುವಾಗಿದೆ, ಶರೀರದ ಯಾವೆಲ್ಲ ಕಾಯಿಲೆ ಸಮಸ್ಯೆಗೆ ಔಷಧಿಯಾಗಿ ಕೆಲಸ ಮಾಡುತ್ತೆ ನೋಡಿ

0 52

ಹಲಸಿನ ಹಣ್ಣು ಎಂದರೆ ಅದು ಸುವಾಸನೆ ಹಾಗೂ ರುಚಿ ಎರಡನ್ನೂ ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ. ಅದೇ ರೀತಿಯಾಗಿ ಹಲಸಿನ ಹಣ್ಣನ್ನು ಹಾಗೆಯೂ ಕೂಡಾ ತಿನ್ನಬಹುದು. ಇದು ಬೇಸಗೆಯಲ್ಲಿ ಹೆಚ್ಚಾಗಿ ಬೆಳೆಯುವ ಕಾರಣದಿಂದಾಗಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲಸಿನ ಹಣ್ಣನ್ನು ಯಥೇಚ್ಛವಾಗಿ ಬಳಸುವರು. ಇದರಿಂದ ಹಪ್ಪಳ, ದೋಸೆ ಹಾಗೂ ಇತ್ಯಾದಿ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಪ್ರಕೃತಿದತ್ತವಾಗಿ ಸಿಗುವಂತಹ ಈ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ವಿಟಮಿನ್ ಬಿ, ಪೊಟಾಶಿಯಂ ಮತ್ತು ಪ್ರೋಟೀನ್ ಇದರಲ್ಲಿ ಸಮೃದ್ಧವಾಗಿದೆ. ಇದರಲ್ಲಿನ ಇತರ ಕೆಲವೊಂದು ಪೋಷಕಾಂಶಗಳು ಈ ಹಣ್ಣನ್ನು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸುವಂತೆ ಮಾಡಿದೆ. ಈ ಲೇಖನದ ಮೂಲಕ ನಾವು ಹಲಸಿನ ಹಣ್ಣಿನ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ? ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರಾವಳಿ ಭಾಗಗಳಲ್ಲಂತೂ ಇದು ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್, ವಿಟಮಿನ್ ಎ, ಸಿ ಮತ್ತು ಪೊಟಾಷಿಯಂ ಇದರಲ್ಲಿದ್ದು ಅದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶ ಹಾಗೂ ಅಧಿಕ ನಾರಿನಾಂಶ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಇದು ಅತೀ ಉತ್ತಮ ಎಂದೇ ಹೇಳಬಹುದು. ಖನಿಜಾಂಶ, ವಿಟಮಿನ್ ಗಳು ಮತ್ತು ಆಹಾರದ ನಾರಿನಾಂಶ ಹೊಂದಿರುವಂತಹ ಹಲಸಿನ ಹಣ್ಣು ನೈಸರ್ಗಿಕ ವಿರೇಚಕ ಗುಣ ಹೊಂದಿದ್ದು ಇದು ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯನ್ನು ದೂರ ಮಾಡುವುದು. ವಿಟಮಿನ್ ಎ ಯನ್ನು ಹೊಂದಿರುವ ಹಲಸಿನ ಹಣ್ಣು ಕಣ್ಣಿಗೆ ಕೂಡ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬು ಇಲ್ಲದಿರುವುದು ಇದರ ಮತ್ತೊಂದು ಗುಣವಾಗಿದೆ. ವಿಟಮಿನ್ ಬಿಯಿಂದ ಸಮೃದ್ಧವಾಗಿರುವ ಇದರಲ್ಲಿ ನಿಯಾಸಿನ್, ಪಿರಿಡಾಕ್ಸಿನ್, ರಿಬೋಫ್ಲಾವಿನ್ ಮತ್ತು ಫೋಲಿಕ್ ಆಮ್ಲವಿದೆ. ವಿಟಮಿನ್ ಸಿ ಕೂಡ ಇರುವ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವಲ್ಲಿ ತುಂಬಾ ಸಹಕಾರಿ ಆಗಿರುವುದು.

ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ ಮತ್ತು ಸಪೋನಿನ್ ಗಳಂತಹ ಹಲವಾರು ರಿತಿಯ ಪೈಥೋ ಕೆಮಿಕಲ್ ಗಳು ಇವೆ. ಇದೆಲ್ಲವೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ. ಹಲಸಿನ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು ಮತ್ತು ಕೆಲವು ಕ್ಯಾನ್ಸರ್ ನ್ನು ಇದು ತಡೆಯುವುದು. ಹಲಸಿನ ಹಣ್ಣಿನಲ್ಲಿ ಇರುವಂತಹ ಲ್ಯಾಕ್ಟಿನ್ ಎನ್ನುವ ಅಂಶವು ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದು ಎಂದು ಅಧ್ಯಯನವು ಹೇಳಿವೆ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆ, ಅನ್ನನಾಳದಂತಹ ಕ್ಯಾನ್ಸರ್ ನ್ನು ತಡೆಯುವುದು. ಬೊಜ್ಜು ದೇಹಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದೆ. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವಂತಹ ಹಲಸಿನ ಹಣ್ಣು ತಿಂದರೆ ತುಂಬಾ ಒಳ್ಳೆಯದು. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಇದನ್ನು ತಿಂದರೆ ಅದರಿಂದ ಇತರ ಹಲವಾರು ರೀತಿಯ ಲಾಭಗಳು ಕೂಡ ದೇಹಕ್ಕೆ ಲಭ್ಯವಾಗುವುದು. ಪೊಟ್ಯಾಶಿಯಂ ಅಂಶವು ಅತ್ಯಧಿಕವಾಗಿ ಇರುವಂತಹ ಹಲಸಿನ ಹಣ್ಣು ರಕ್ತದೊತ್ತಡ ಕಡಿಮೆ ಮಾಡುವುದು ಮತ್ತು ಇದನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.

ಹಲಸಿನ ಹಣ್ಣು ನಮ್ಮ ದೇಹದಲ್ಲಿ ಕೊಲೆಜನ್ ಎಂಬ ಪ್ರೊಟೀನ್ ಉತ್ಪಾದನೆಗೆ ನೆರವಾಗುತ್ತದೆ. ಈ ಕೊಲೆಜನ್ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಕು. ಇದು ತ್ವಚೆಯನ್ನು ಕಾಪಾಡುತ್ತದೆ. ಸುಕ್ಕು ಗಟ್ಟದಂತೆ ತಡೆಯುತ್ತದೆ. ವಿಟಮಿನ್ ಸಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕಂತೂ ಬಹಳಷ್ಟು ಉತ್ತಮ. ಹಲಸಿನ ಹಣ್ಣಿನಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಲಭ್ಯವಾಗುತ್ತದೆ. ಇನ್ನು ಅನಿಮಿಯ ಸಮಸ್ಯೆ ಇರುವವರಿಗೆ ಹಲಸು ರಾಮಬಾಣ. ಹಲಸಿನ ಹಣ್ಣನ್ನು ತಿನ್ನುವುದರಿಂದ ರಕ್ತ ಪರಿಚಲನೆ ತುಂಬಾ ಚೆನ್ನಾಗಿ ಆಗುತ್ತದೆ. ಅಸ್ತಮ ರೋಗಿಗಳೂ ಹಲಸು ತಿನ್ನಬೇಕು. ಹಲಸನ್ನು ನೀರಿನಿಂದ ಚೆನ್ನಾಗಿ ಬೇಯಿಸಿ ತಿಂದರೆ ಅಸ್ತಮ ಗುಣವಾಗುತ್ತದೆ.

ಚಿಕಾಗೊದಲ್ಲಿ ನಡೆದ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ಹಲಸಿನ ಕಾಯಿ ಮತ್ತು ಹಣ್ಣನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್‌ನವರಿಗೆ ಗ್ಲಿಸಮಿಕ್ ನಿಯಂತ್ರಣವಾಗುತ್ತದೆ ಎಂದು ತಿಳಿದುಬಂದಿದೆ. ಹಲಸಿನ ಕಾಯಿಯನ್ನು ಅನ್ನದ ಜೊತೆ, ದೋಸೆ, ಇಡ್ಲಿ, ಉಪ್ಮಾಗಳಲ್ಲಿ ಹಿಟ್ಟಿನ ರೂಪದಲ್ಲಿ ಸೇವಿಸುತ್ತಾರೆ. ಈ ಅಧ್ಯಯನವನ್ನು ನಡೆಸಿದವರು ಜೇಮ್ಸ್ ಜೊಸೆಫ್ ಎನ್ನುವವರು. ಅನ್ನ ಮತ್ತು ಗೋಧಿ ಹಿಟ್ಟಿನ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು. ಹಲಸಿನ ಕಾಯಿ ತೊಳೆಯನ್ನು ಹಿಟ್ಟಿನ ರೂಪ ಮಾಡಲಾಗುತ್ತದೆ. ಕಾರ್ಬೊಹೈಡ್ರೇಟ್ ಗಳನ್ನು ಕಡಿಮೆ ಮಾಡಬಹುದು. ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕವನ್ನು ಇಳಿಸಿಕೊಳ್ಳಲು ಸಹ ಇದು ನೆರವಾಗುತ್ತದೆ. ಮಧುಮೇಹ ಅಥವಾ ಮಧುಮೇಹ ರೋಗಿಯು ವೈದ್ಯರ ಚಿಕಿತ್ಸಾಲಯಕ್ಕೆ ಬಂದಾಗ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ವೈದ್ಯಕೀಯ ಪೌಷ್ಠಿಕ ಚಿಕಿತ್ಸೆಯನ್ನು ಅವರಿಗೆ ಸೂಚಿಸಲಾಗುತ್ತದೆ. ಹಲಸಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಮಧುಮೇಹ ರೋಗಿಗಳಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮತ್ತು ಬೊಜ್ಜು ರೋಗಿಗಳಿಗೂ ಸಹ ಉತ್ತಮ.

ಹಲಸಿನ ಕಾಯಿ ಇತ್ತೀಚೆಗೆ ಹೊರದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಸೆರ್ಬಿಯಾ ಮೂಲದ ಆಹಾರ ಸಲಹೆಗಾರ ಸಿಮಿ ಮ್ಯಾಥ್ಯು ಹಲಸಿನ ಹಿಟ್ಟಿನಲ್ಲಿರುವ ಆರೋಗ್ಯ ಅಂಶವನ್ನು ಹೇಳುತ್ತಾರೆ. 
ಹಲವು ವರ್ಷಗಳ ಹಿಂದೆ, ನಾನು ಪ್ರಾದೇಶಿಕ ಚಾನೆಲ್‌ನಲ್ಲಿ ಅಡುಗೆ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದೆ. ಕಾರ್ಯಕ್ರಮದ ಬಾಣಸಿಗರು ಹಲಸಿನ ಪ್ರಯೋಜನಗಳ ಬಗ್ಗೆ ಮಾತನಾಡಿದರು ಮತ್ತು ಹಿಟ್ಟನ್ನು ಬೇಕಿಂಗ್‌ಗೆ ಬಳಸಬಹುದೆಂದು ಪ್ರಸ್ತಾಪಿಸಿದರು. ಆದ್ದರಿಂದ ನನ್ನ ತಾಯಿ ಹಲಸಿನ ಕಾಯಿಯನ್ನು ಒಣಗಿಸಿ ಹಿಟ್ಟು ತಯಾರಿಸುತ್ತಾರೆ. ನಾನು ಈಗ ಅದನ್ನು ಪ್ಯಾನ್‌ ಕೇಕ್, ಕುಕೀಗಳಲ್ಲಿ ಮತ್ತು ಪುಟ್ಟು ತಯಾರಿಸಲು ಸಹ ಬಳಸುತ್ತೇನೆ ಎಂದು ಸಿಮಿ ಎಂಬವರು ಹೇಳುತ್ತಾರೆ. ಆದರೆ ಭಾರತದಲ್ಲಿ ಇದನ್ನು ಕಡೆಗಣಿಸುತ್ತಾರೆ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಮತ್ತು ಆಹಾರ ತಂತ್ರಜ್ಞೆ ಜೆಫ್ರಿಯಾ ಜೊಬಿ. ಜೊ ಫಿಟ್ ನೆಸ್ ಸ್ಥಾಪಕರಾಗಿರುವ ಇವರು ಔಷಧಿ ಜೊತೆ ಹೋಲಿಕೆ ಮಾಡಬಹುದಾದ ಹಲಸನ್ನು ಪೌಷ್ಟಿಕಾಂಶವಾಗಿ, ವಿಟಮಿನ್ ಸಿ ಸೇವನೆಗೆ, ದೇಹದಲ್ಲಿ ಶಕ್ತಿ ಬಲವರ್ಧನೆಗೆ, ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಸಬಹುದು. ಇದರ ಬಳಕೆ ಸರಿಯಾಗಿ ಆಗುತ್ತಿಲ್ಲ ಎನ್ನುತ್ತಾರೆ.

Leave A Reply

Your email address will not be published.