ಕಣ್ಣಿನ ದೃಷ್ಟಿ ದೋಷ ಡೆಂಗ್ಯೂ ಸಮಸ್ಯೆಗಳಿಗೆ ರಾಮಬಾಣ ಈ ಪಪ್ಪಾಯ

0 3

ಸಾಮಾನ್ಯವಾಗಿ ಎಲ್ಲಾ ಕಾಲಮಾನಗಳಲ್ಲಿಯೂ ಸಹ ದೊರೆಯುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡ ಒಂದು ಪ್ರಮುಖ ಹಣ್ಣಾಗಿದೆ, ಅಲ್ಲದೇ ಇತ್ತೀಚಿನ ಆಧುನಿಕ ಜೀವನ ಶೈಲಿಯಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವವರ ಬೆಳಗ್ಗಿನ ಉಪಹಾರವಾಗಿದೆ ಮತ್ತು ಪರಂಗಿ ಹಣ್ಣನ್ನು ಒಂದು ಹಣ್ಣಾಗಿ ನೋಡುವುದು ಮಾತ್ರವಲ್ಲದೇ ಉತ್ತಮ ಪೋಷಕಾಂಶಗಳನ್ನು ತನ್ನಲ್ಲಿ ಒಳಗೊಂಡಿರುವ ಮತ್ತು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಳಸುವ ಒಂದು ಏಕೈಕ ಹಣ್ಣು ಇದಾಗಿದೆ.

ಪರಂಗಿ ಹಣ್ಣನ್ನು ಪ್ರತಿನಿತ್ಯ ಬೆಳಗ್ಗಿನ ಸಮಯದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಮನುಷ್ಯನ ದೇಹದ ಜೀರ್ಣ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ಸಾಗಲು ಇದು ನೆರವಾಗುತ್ತದೆ ಅಲ್ಲದೇ ಪರಂಗಿ ಹಣ್ಣು ಸೇವನೆಯು ದೇಹದಲ್ಲಿನ ರಕ್ತ ಪರಿಚಲನೆಯನ್ನು ವೃದ್ದಿಸಲು ಮತ್ತು ದೇಹದ ಆಂತರಿಕವಾಗಿ ಇರುವಂತಹ ಉರಿಯೂತಗಳನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ, ಪರಂಗಿ ಹಣ್ಣು ಎಷ್ಟು ಮುಖ್ಯವೋ ಅದೇ ರೀತಿ ಪರಂಗಿ ಹಣ್ಣಿನಲ್ಲಿರುವ ಬೀಜಗಳೂ ಸಹ ಅಷ್ಟೇ ಪ್ರಮುಖವಾದುವು ಆದ್ದರಿಂದ ಪರಂಗಿ ಹಣ್ಣನ್ನು ತಿನ್ನುವಾಗ ಪರಂಗಿ ಹಣ್ಣಿನೊಂದಿಗೆ ಅದರ ಬೀಜಗಳನ್ನು ಸಹ ತಿನ್ನುವುದು ಒಳಿತು ಮತ್ತು ಈ ಬೀಜಗಳೂ ಸಹ ದೇಹದಲ್ಲಿ ಜೀರ್ಣ ಕ್ರಿಯೆಗೆ ಸಹಕರಿಸುತ್ತವೆ.

ಪರಂಗಿ ಹಣ್ಣಿನ ಬೀಜಗಳನ್ನು ಚೆನ್ನಾಗಿ ಒಣಗಿಸು ಅದನ್ನು ಪುಡಿ ಮಾಡಿಕೊಂಡು ನಿಯಮಿತವಾಗಿ ಆ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಪ್ರತಿನಿತ್ಯ ಕುಡಿಯುತ್ತಾ ಬಂದರೆ ದೇಹದ ತೂಕ ಗಣನೀಯವಾಗಿ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ, ಪರಂಗಿ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಹೆಚ್ಚಾಗಿ ಇರುವುದರಿಂದ ಪರಂಗಿ ಹಣ್ಣಿನ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿರು ಕ್ಯಾನ್ಸರ್ ಕಣಗಳ ಪ್ರಮಾಣ ಕ್ರಮೇಣ ಕಡಿತವಾಗುತ್ತದೆ ಮತ್ತು ಡೆಂಗ್ಯೂ ಕಾಯಿಲೆಗೂ ಸಹ ಇದರ ರಸ ಬಹಳ ಉಪಯುಕ್ತವಾದದ್ದು.

ಪರಂಗಿ ಹಣ್ಣನ್ನು ದಿನನಿತ್ಯ ಸೇವಿಸುವುದರಿಂದ ಕಣ್ಣಿನ ದೃಷ್ಟಿ ದೋಷಗಳು ಮತ್ತು ನರಗಳ ದೌರ್ಬಲ್ಯ ಇರುವವರಿಗೆ ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆ ಮತ್ತು ಪರಂಗಿ ಹಣ್ಣು ಚರ್ಮಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವುದರಲ್ಲಿ ಸಾಹಾಯ ಮಾಡುತ್ತದೆಯಲ್ಲದೇ, ನಿರ್ಜೀವ ಕೋಶಗಳನ್ನು ಶಮನ ಮಾಡಿ ಉತ್ತಮ ಕೋಶಗಳು ರಚನೆಯಾಗುವಲ್ಲಿ ಇದು ನೆರವಾಗುತ್ತದೆ ಮತ್ತು ಪರಂಗಿ ಹಣ್ಣಿನಲ್ಲಿರುವ ವಿಟಮಿನ್ ಸಿ ಪೋಷಕಾಂಶವು ಚರ್ಮದ ಕಲ್ಮಶಗಳನ್ನು ತೆಗೆದು ಹಾಕಿ ಬಿಸಿಲಿನ ಹೊಡೆತದಿಂದ ಚರ್ಮವನ್ನು ಕಾಯುವಲ್ಲಿ ಇದು ಬಹು ಉಪಕಾರಿಯಾಗಿದೆ ಮತ್ತು ಪರಂಗಿ ಹಣ್ಣಿನ ಸೇವನೆ ಕರುಳಿನಲ್ಲಿ ಸೇರಿಕೊಳ್ಳುವ ಜಂತು ಹುಳುಗಳನ್ನು ನಾಶಪಡಿಸುತ್ತದೆ.

Leave A Reply

Your email address will not be published.