ಹೊಟ್ಟೆಗೆ ತಂಪು ನೀಡುವ ಜೊತೆಗೆ ನರ ದೌರ್ಬಲ್ಯ ಸಮಸ್ಯೆಗೆ ಪಪ್ಪಾಯ ಮದ್ದು

0 2

ಪಪ್ಪಾಯ ಹಣ್ಣು, ಅದರ ಗಿಡದ ಎಲೆಗಳು, ಬೀಜಗಳು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಬಾಯಿಯ ರುಚಿಯ ಜೊತೆಗೆ ಹೊಟ್ಟೆಗೆ ತಂಪನ್ನು ನೀಡುವ ಈ ಹಣ್ಣನ್ನು ಔಷಧೀಯ ಆಗರ ಅಂದರೆ ತಪ್ಪಾಗಲಾರದು. ಕೀರ್ಣ ಕ್ರಿಯೆಗೆ ರಾಮ ಬಾಣದಂತೆ ವರ್ತಿಸುವ ಈ ಹಣ್ಣು ಜೀರ್ಣಾಂಗದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೇ. ಪಪ್ಪಾಯ ಹಣ್ಣಿನಲ್ಲಿ, ಕೊಬ್ಬು, ಪ್ರಾಸ್ಪರಸ್, ಪ್ರೊಟೀನ್ ನಿವಾಳಸಿನ್ ಖನಿಜಅಂಶಗಳು, ಕಾರ್ಬೋ ಹೈಡ್ರೇಟ್ ಗಳು ಅಧಿಕವಾಗಿ ಇರತ್ತೆ. ಅಲ್ಲದೆ ವಿಟಮಿನ್ A ಹೆಚ್ಚಾಗಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೂತ್ರಕೋಶ, ಮೂತ್ರನಾಳದಲ್ಲಿ ಕಲ್ಲು ಉಂಟಾಗುವ ವ್ಯಕ್ತಿಗಳು ಪ್ರತೀ ದಿನ ಪಪ್ಪಾಯ ಸೇವಿಸುವುದು ಒಳ್ಳೆಯದು. ಮಕ್ಕಳಲ್ಲಿ ನರ ದೌರ್ಭಲ್ಯ ಕಂಡು ಬಂದರೆ, ಪಪ್ಪಾಯದ ಜೊತೆಗೆ ಹಾಲು ಮತ್ತು ಜೇನುತುಪ್ಪ ಸೇರಿಸಿ ತಿನ್ನಲು ಕೊಡಿ. ಎಲ್ಲರಲೂ ಕಂಡುವರುವ ಜಂತುಹುಳ ಸಮಸ್ಯೆಗೆ ಪಪ್ಪಾಯ ಉತ್ತಮ ಔಷಧ. ಪಪ್ಪಾಯ ತಿನ್ನುವಾಗ ಅದರ ಜೊತೆಗೆ ಕೆಲವೂ ಬೀಜಗಳನ್ನು ಸೇರಿಸಿ ತಿನ್ನುವುದು ಅಥವಾ ಪ್ರತ್ಯೇಕವಾಗಿ ಪಪ್ಪಾಯ ಬೀಜದ ಜೊತೆಗೆ ನಾಲ್ಕು ಹನಿ ನಿಂಬೆ ರಸ ಸೇರಿಸಿ ತಿಂಗಳಿಗೆ ಎರಡು ಬಾರಿ ತೆಗೆದುಕೊಳ್ಳುವುದರಿಂದ ಜಂತುಹುಳಗಳ ಸಂಜಿರ್ ನಿವಾರಣೆ ಆಗತ್ತೆ.

ಪಪಾಯ ರಸಕ್ಕೆ ಮೊಸರು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಕಡಲೆ ಹಿಟ್ಟಿನಿಂದ ಕೂದಲು ತೊಳೆಯುವುದರಿಂದ ಕೂದಲು ಉದುರುವುದು ಕಡಿಮೆ ಆಗಿ ಸೊಂಪಾಗಿ ಬೆಳೆಯತ್ತೆ. ಪಪಾಯ ಮತ್ತು ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚು ಆಗುತ್ತದೆ. ಮುಖದ ಜಿಡ್ಡಿನ ಸಮಸ್ಯೆ ಇರುವವರು ಬ್ಲಾಕ್ ಟೀ ಮಾಡಿ ಸೋಸಿಕೊಂಡು ಅದನ್ನು ತಣಿಸಿಕೊಂಡು ಪಪಾಯ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ ನಂತರ ತಣ್ಣೀರಿನಿಂದ ಮುಖ ತೊಳೆಯುವುದರಿಂದ ಜಿಡ್ಡಿನ ಸಮಸ್ಯೆ ದೂರ ಆಗುತ್ತದೆ. ಹೀಗೆ ಸುಲಭವಾಗಿ ದೊರೆಯುವ ಪಪ್ಪಾಯವನ್ನು ಬಳಸಿಕೊಂಡು ಸಾಕಷ್ಟು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave A Reply

Your email address will not be published.