ಬಹುತೇಕ ಜನರು ಕಿತ್ತಳೆಹಣ್ಣು ಸೇವನೆ ಮಾಡುತ್ತಿರುತ್ತಾರೆ, ಆದ್ರೆ ಕೆಲವರಿಗೆ ಈ ಕಿತ್ತಳೆಹಣ್ಣಿನಲ್ಲಿರುವಂತ ಔಷಧಿಯ ಗುಣಗಳ ಬಗ್ಗೆ ಅಷ್ಟೊಂದು ಗೊತ್ತಿರೋದಿಲ್ಲ ಆದ್ದರಿಂದ ಈ ಮೂಲಕ ತಿಳಿದುಕೊಂಡರೆ ಇನ್ನು ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ. ಕಿತ್ತಳೆಹಣ್ಣು ಬೀಜ, ಎಲೆ, ಹೂವು, ಯಾವೆಲ್ಲ ಔಷದಿ ಗುಣಗಳನ್ನು ಹೊಂದಿದೆ ಹಾಗೂ ಇದರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಕಿತ್ತಳೆಯ ರಸವನ್ನು ಬೆಚ್ಚನೆಯ ನೀರಿನಲ್ಲಿ ಬೆರಸಿ ಕುಡಿದರೆ ನೆಗಡಿ ಭಾದೆ ಕಡಿಮೆಯಾಗುತ್ತದೆ, ಬಹುತೇಕ ಜನರು ನೆಗಡಿ ಬೇಗನೆ ವಾಸಿಯಾಗಿಲ್ಲ ಎಂಬುದಾಗಿ ಹೇಳುತ್ತಿರುತ್ತಾರೆ, ಅಂತವರಿಗೆ ಇದು ಪ್ರಯೋಜನಕಾರಿಯಾಗಿದೆ. ಇನ್ನು ಕಿತ್ತಳೆಯ ರಸವನ್ನು ಆಗ್ಗಾಗೆ ಸೇವಿಸುವುದರಿಂದ ಜ್ವರದ ತಾಪ ಹಾಗೂ ದಣಿವು ಇಲ್ಲವಾಗುತ್ತದೆ.

ಇನ್ನು ಕಿತ್ತಳೆ ರಸಕ್ಕೆ ಸಕ್ಕರೆ ಮತ್ತು ಚಿಟಿಕೆ ಉಪ್ಪನ್ನು ಬೆರಸಿ ಜ್ಯುಸ್ ಮಾಡಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಿ ಅರ್ಧ ಗಂಟೆಯ ಅನಂತರ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಹಾಗೂ ಮುಖದ ಕಲೆಗಳು ನಿವಾರಣೆಯಾಗುತ್ತವೆ.

ಹೊಟ್ಟೆನೋವು ನಿವಾರಣೆ ಮಾಡುವ ಜೊತೆಗೆ ಒಳ್ಳೆಯ ನಿದ್ರೆ ನೀಡುವ ಉಪಯೋಗವನ್ನು ಕಿತ್ತಳೆ ಹೊಂದಿದೆ. ಹೌದು ಕಿತ್ತಳೆಯ ಹೂವುಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವಿಸಿದರೆ ಹೊಟ್ಟೆನೋವು ಗುಣವಾಗುತ್ತದೆ. ಇದು ನಿದ್ರಾಕಾರವು ಹೌದು. ಇನ್ನು ಒಣಗಿದ ಕಿತ್ತಳೆಯ ಎಳೆಗಳು ಹಾಗೂ ಹೊಗಳ ಕಷಾಯವು ಅಜೀರ್ಣ, ಹೊಟ್ಟೆ ಉರಿ, ಹೊಟ್ಟೆಯುಬ್ಬರ, ವಾಂತಿಗಳಿಗೆ ಉತ್ತಮ ಔಷದಿ.

ಮುಖದ ಸೌಂದರ್ಯಕ್ಕೆ ಅಂದರೆ ಕಿತ್ತಳೆಯ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಮೃದುವಾಗಿ ಹಚ್ಚಿದರೆ ಮುಖದಲ್ಲಿರುವ ಅಧಿಕ ಜಿಡ್ಡಿನಂಶ ಮತ್ತು ಕಲೆಗಳು ಮಾಯವಾಗುತ್ತೆ. ಕಿತ್ತಳೆಯನ್ನು ಎಳೆನೀರಿನೊಂದಿಗೆ ಸೇವಿಸಿದರೆ ಮೂತ್ರ ಉರಿ ಕಡಿಮೆ ಆಗುತ್ತದೆ.

By

Leave a Reply

Your email address will not be published. Required fields are marked *