ಅಂದು ಮನೆ ಮನೆಗೆ ಪೇಪರ್ ಹಾಕುತ್ತಿದ್ದ ರೈತನ ಮಗ, ಇಂದು 200 ಕೋಟಿಯ ಒಡೆಯ

0 1

ಮನುಷ್ಯನಲ್ಲಿರುವ ಸಾಧಿಸುವ ಗುಣ ಆ ಸಾಧನೆಗೆ ಬೇಕಾದ ದಾರಿಯನ್ನು ಹುಡುಕುತ್ತದೆ. ಮನುಷ್ಯನ ಅನುಭವಗಳೇ ಕೆಲವೊಂದು ಸಾಧನೆಗೆ ಮಾರ್ಗವಾಗಿ ರೂಪಗೊಳ್ಳುತ್ತವೆ. ಅವರು ದಿನನಿತ್ಯದ ಜೀವನದಲ್ಲಿ ಅನುಭವಿಸುವ ಸಮಸ್ಯೆಗಳ ಪರಿಹರಿಸುವ ಮಾರ್ಗವನ್ನು ಹುಡುಕುವ ಯೋಚನೆ ಬಂದಾಗ ತಾನಾಗಿಯೇ ಅದಕ್ಕೊಂದು ಮಾರ್ಗ ಲಭಿಸುತ್ತದೆ. ಮತ್ತು ಸಾಧನೆಗೆ ಪೂರಕವಾಗುತ್ತದೆ. ಇದೇ ರೀತಿ ಒಬ್ಬ ರೈತನ ಕುಟುಂಬದಲ್ಲಿ ಜನಿಸಿ ಪೇಪರ್ ಮಾರುತ್ತಿದ್ದ ವ್ಯಕ್ತಿಯು ಇಂದು ಎರಡು ನೂರು ಕೋಟಿ ರೂಗಳ ಒಡೆಯರಾಗಿದ್ದಾರೆ. ಇವರ ಈ ಸಾಧನೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಸಾಧಕರ ಹೆಸರು ಶಿವಕುಮಾರ್. ಇವರು ಹಾಸನ ಜಿಲ್ಲೆಯ ಒಂದು ಸರ್ಕಾರಿ ಪಾಠಶಾಲೆಯಲ್ಲಿ ತಮ್ಮ ವಿದ್ಯೆಯನ್ನು ಕಲಿತವರು ಇಂದು ಮೆಕ್ಕ್ವೀನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಉನ್ನತ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಈ ಸಂಸ್ಥೆ ಸೋಲಾರ್ ಪಂಪುಗಳನ್ನು ತಯಾರಿಸುತ್ತದೆ. 18 ದೇಶಗಳಲ್ಲಿ ಇವರ ಸಂಸ್ಥೆಯ ತಯಾರಿಕಾ ವಸ್ತುಗಳ ವ್ಯಾಪಾರವನ್ನು ನಡೆಸಲಾಗುತ್ತಿದೆ. ಭಾರತದಲ್ಲಿರುವ ಪ್ರತಿಯೊಂದು ರಾಜ್ಯದಲ್ಲಿಯೂ ಈ ಸಂಸ್ಥೆಯ ವೈವಾಟು ಇದೆ. ಅತ್ಯಂತ ಉತ್ತಮ ಗುಣಮಟ್ಟದ ಸೋಲಾರ್ ಪಂಪ್ ಕಡಿಮೆ ದರದಲ್ಲಿ ರೈತರಿಗೆ ನೀಡುತ್ತಿರುವ ಏಕೈಕ ಸಂಸ್ಥೆ ಇದಾಗಿದೆ. ಇಂತಹ ಸಂಸ್ಥೆಯನ್ನು ಹುಟ್ಟುಹಾಕಲು ಮೂಲಕಾರಣ ಇವರು ಮೂಲ ಕೃಷಿ ಕುಟುಂಬದಿಂದ ಬಂದವರು. ಕೃಷಿಕರಿಗೆ ಉಂಟಾಗುವ ನೀರಿನ ಸಮಸ್ಯೆಯನ್ನು ಮೂಲತಹ ಅರಿತವರಾಗಿದ್ದಾರೆ.

ಶಿವಕುಮಾರ್ ಅವರು ಊರಿನಲ್ಲಿ ಕಂಡ ಕರೆಂಟಿನ ಸಮಸ್ಯೆಯಿಂದಾಗಿ ಹೊಲಗಳಿಗೆ ನೀರನ್ನು ಬಿಡಲು ತೊಂದರೆಯಾಗುತ್ತಿದ್ದದ್ದನ್ನು ಅರಿತು ಇದಕ್ಕೆ ಪರಿಹಾರವನ್ನು ಹುಡುಕುವ ಸಲುವಾಗಿ ಸೋಲಾರ್ ಪಂಪನ್ನು ತಯಾರಿಸಲು ನಿರ್ಧರಿಸುತ್ತಾರೆ. ಮೆಕ್ಯಾನಿಕಲ್ ಮಾಡುತ್ತಿದ್ದ ಇವರು ದುಡ್ಡಿನ ಸಮಸ್ಯೆಯಿಂದ ಪೇಪರ್ ಹಾಕುವ ಕೆಲಸವನ್ನು ಮಾಡುತ್ತಾ ನಂತರ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಒಂದು ಉದ್ಯೋಗವನ್ನು ಪಡೆಯುತ್ತಾರೆ. ಇವರಿಗೆ ಓದುವ ಮನಸ್ಸು ಹೆಚ್ಚಾಗಿದ್ದರಿಂದ ಡಿಪ್ಲೊಮಾ ಮುಗಿಸಿದ ಇವರು ಬಿಟೆಕ್ ಗೆ ಸೇರುತ್ತಾರೆ. ಇದನ್ನು ಮುಗಿಸಿ ಎಂಬಿಎ ಸೇರುತ್ತಾರೆ. ಇದರ ಜೊತೆಗೆ ವಿಪ್ರೋದಲ್ಲಿ ಕೆಲಸಕ್ಕೆ ಸೇರುತ್ತಾರೆ. ವಿಪ್ರೋದಲ್ಲಿ ಇರುವಾಗಲೇ ಪುಟ್ಟಪರ್ತಿ ಸಾಯಿಬಾಬಾ ದೇವಸ್ಥಾನದಲ್ಲಿ 10 ಸೋಲಾರ ಪಂಪುಗಳನ್ನು ಹಾಕುತ್ತಾರೆ.

ರೈತರ ಹೊಲಗಳಿಗೆ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ರಿಲಯನ್ಸ್ ಸಂಸ್ಥೆಯ ಸೋಲಾರ್ ಸ್ಟಾರ್ಟಪ್ ಗೆ ಸೇರುತ್ತಾರೆ. ಅದರಲ್ಲಿ ಹೆಚ್ಚು ದಿನಗಳ ಕಾಲ ಕೆಲಸ ಮಾಡಲಾಗದ ಕಾರಣ ಅವರನ್ನು ಸಂಸ್ಥೆಯಲ್ಲಿ ಕೆಲಸವನ್ನು ಸೇರುತ್ತಾರೆ.ಅಲ್ಲಿ ಅವರಿಗೆ ಸೋಲಾರ್ ಸಿಸ್ಟಮ್ ನ ಅಪಾರ ಅನುಭವಗಳ ದೊರೆಯುತ್ತವೆ. ಅನೇಕ ರಾಜ್ಯಗಳನ್ನು ಸುತ್ತಿ ಕೆಲಸದ ಅನುಭವವನ್ನು ಪಡೆದು ಬರುತ್ತಾರೆ. ಚೀನಾದಿಂದ ಬಿಡಿ ಭಾಗಗಳನ್ನು ತರಿಸಿ ಭಾರತದಲ್ಲಿ ಅದನ್ನು ತಯಾರು ಮಾಡಿ ಮೇಡ್ ಇನ್ ಇಂಡಿಯಾ ಎಂದು ತಯಾರದ ವಸ್ತುಗಳ ಮೇಲೆ ಹಾಕುತ್ತಿದ್ದರು. ಇದನ್ನು ಯೋಚಿಸಿದವರು ಭಾರತದಲ್ಲಿಯೇ ಬಿಡಿಭಾಗಗಳನ್ನು ತಯಾರಿಸಿ ಪಂಪನ್ನು ತಯಾರಿಸುವ ನಿರ್ಧಾರವನ್ನು ಮಾಡುತ್ತಾರೆ. ಈ ವಸ್ತುವನ್ನು ಮಾರ್ಕೆಟಿಗೆ ತರುವಲ್ಲಿ ಸರಿಯಾದ ವ್ಯವಸ್ಥಿತ ರೂಪುರೇಷೆಯನ್ನು ತಯಾರು ಮಾಡುತ್ತಾರೆ. ಎರಡು ವರ್ಷಗಳ ಸತತ ಪ್ರಯತ್ನದ ನಂತರ ಸ್ವದೇಶಿ ಸೋಲಾರ್ ಪಂಪ್ ಯಶಸ್ಸನ್ನು ಕಾಣುತ್ತದೆ.

ರೂಪುರೇಷೆಯಲ್ಲಿ ತಯಾರದ ಮೋಟರ್ ಮತ್ತು ಪಂಪ್ ಎರಡು ಕೂಡ ಯಶಸ್ಸನ್ನು ಕಾಣುತ್ತದೆ. ಉತ್ತಮ ಸ್ಥಾನಕ್ಕೆ ಈ ಸಂಸ್ಥೆಯನ್ನು ತೆಗೆದುಕೊಂಡು ಹೋಗಲು ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲೇ ಅವರ ಮಗುವನ್ನು ಕೂಡ ಕಳೆದುಕೊಳ್ಳುತ್ತಾರೆ. ಆದರೂ ಧೃತಿಗೆಡದೆ ಛಲಬಿಡದೆ ವ್ಯಾಪಾರವನ್ನು ನಿರ್ವಹಿಸುತ್ತಾರೆ. ಈಗ ಇವರು ಎರಡು ನೂರು ಕೋಟಿಗೂ ಹೆಚ್ಚಿನ ವ್ಯವಹಾರಕ್ಕೆ ಒಡೆಯರಾಗಿದ್ದಾರೆ. ಹೀಗೆ ಸಾಧಿಸುವ ಛಲವಿದ್ದರೆ ಮನುಷ್ಯ ಉನ್ನತ ಸ್ಥಾನಕ್ಕೇರಲು ಎಲ್ಲಾ ಕಷ್ಟಗಳು ಸುಲಭ ಮಾರ್ಗದಲ್ಲಿ ದಾರಿ ತೋರಿಸುತ್ತದೆ.

Leave A Reply

Your email address will not be published.