ಸುಪ್ರೀಂ ಹೀರೋ ಎಂದು ಶಶಿಕುಮಾರ್ ಅವರನ್ನು ಕರೆಯುತ್ತಾರೆ. ಒಂದು ಕಾಲದಲ್ಲಿ ಅತ್ಯಂತ ಹೆಸರನ್ನು ಗಳಿಸಿದವರು ಇವರು. ಕನ್ನಡ ಸಿನಿಮಾ ರಂಗದಲ್ಲಿ ಅವಕಾಶಗಳು ದೊರೆತ ನಂತರ ಬೇರೆ ಭಾಷೆಗಳಲ್ಲಿಯೂ ಸಹ ಇವರಿಗೆ ಕರೆ ಬರುತ್ತಿತ್ತು. ಅಷ್ಟು ಅವಕಾಶಗಳನ್ನು ಪಡೆದುಕೊಂಡು ಸಿನಿಮಾಗಳನ್ನು ಇವರು ಮಾಡಿದ್ದಾರೆ. ಆದರೆ ಎಷ್ಟೋ ಜನರ ಜೀವನದಲ್ಲಿ ವಿಧಿಯು ಆಟವನ್ನು ಆಡುತ್ತದೆ. ಅಂತಹ ಜನರ ಜೀವನಗಳಲ್ಲಿ ಇವರ ಜೀವನ ಕೂಡ ಒಂದು. ಆದ್ದರಿಂದ ನಾವು ಇಲ್ಲಿ ಶಶಿಕುಮಾರ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರು ಅನೇಕ ಸಿನೆಮಾಗಳನ್ನು ಮಾಡಿದ್ದರು. ಹಾಗೆಯೇ ರಜನೀಕಾಂತ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಹೀಗೆ ಎಲ್ಲರ ಜೊತೆ ಸಿನೆಮಾಗಳಲ್ಲಿ ಇವರು ನಟಿಸಿದ್ದರು. ಬಾರೋ ನನ್ನ ಮುದ್ದಿನ ಕೃಷ್ಣ ಎಂಬ ಸಿನೆಮಾದ ಕೊನೆಯ ಹಂತದ ಶೂಟಿಂಗ್ ಮುಗಿಸಿದ್ದರು. ಕನ್ನಡದ ನಟ, ಸುಪ್ರಿಂ ಹೀರೋ ಶಶಿಕುಮಾರ್ ಬದುಕಿನಲ್ಲಿ ನಡೆದ ಆ ಅಪಘಾತ ನಟನೆ ಬದುಕನ್ನೇ ಬದಲಾಯಿಸಿಬಿಟ್ಟತು. 1998 ಜುಲೈ 31 ರಂದು ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಸುಪ್ರೀಂ ಹೀರೋ ಶಶಿ ಕುಮಾರ್ ಅವರ ಕಾರು ಅಪಘಾತವಾಯಿತು.

ಆ ಆಕ್ಸಿಡೆಂಟ್‌ನಲ್ಲಿ ನಟ ಶಶಿ ಕುಮಾರ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿ ಮೂಗಿಗೆ ಹೆಚ್ಚು ಡ್ಯಾಮೇಜ್ ಆಯಿತು. ಸತತ 8 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಒಂದು ಹಂತಕ್ಕೆ ಶಶಿಕುಮಾರ್ ಅವರ ಮುಖದಲ್ಲಿ ಸ್ವಲ್ಪ ಚೇತರಿಕೆಯಾಯಿತು. ಆದರೆ, ಅದರಿಂದ ಶಶಿಕುಮಾರ್ ಅವರಿಗೆ ಡ್ಯಾನ್ಸ್ ಮಾಡೋಕೆ ಆಗಲ್ಲ, ಫೈಟ್ ಮಾಡೋಕೆ ಆಗಲ್ಲ, ಅದೂ ಇದೂ ಎಂದು ಪತ್ರಿಕೆಗಳಲ್ಲಿ ವರದಿಯಾದ ಪರಿಣಾಮ ಯಾವ ಸಿನಿಮಾ ಅವಕಾಶವೂ ಅವರಿಗೆ ಸಿಗಲಿಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಶಿಕುಮಾರ್ ಗೆ ಆಗ ಮದುವೆ ಆಗಿ ಇಬ್ಬರು ಮಕ್ಕಳು ಕೂಡ ಇದ್ದರು.

ಇನ್ನೇನು ಎಲ್ಲವೂ ಮುಗಿಯಿತು ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲಿ ಶಶಿಕುಮಾರ್ ಮನೆಗೆ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಜೊತೆಯಲ್ಲಿ ನಿರ್ಮಾಪಕಿ ಜಯಶ್ರೀದೇವಿ ಅವರು ಹೋಗಿದ್ದರಂತೆ. ಆಗ ಅವರು ಒಂದು ಸಿನಿಮಾ ಮಾಡ್ತಿದ್ದೀನಿ ಐದು ಜನ ಹೀರೋ. ಅದರಲ್ಲಿ ನೀವು ಒಬ್ಬರು ಆಕ್ಟ್ ಮಾಡಿ ಎಂದು ನಟ ಶಶಿಕುಮಾರ್ ಅವರಿಗೆ ಚಾನ್ಸ್ ಕೊಟ್ಟಿದ್ದರು. ಹೀಗೆ ನಿರ್ಮಾಪಕಿ ಜಯಶ್ರೀ ಕೊಟ್ಟ ಅವಕಾಶದ ಪ್ರತಿಫಲವೇ ಹಬ್ಬ ಸಿನಿಮಾ. ಈ ಚಿತ್ರ ಸುಪ್ರೀಂ ಹೀರೋ ಜೀವನದಲ್ಲಿ ನಿರೀಕ್ಷೆಗೂ ಮೀರಿ ಬದಲಾವಣೆ ತಂದಿತು. ಡಾ ವಿಷ್ಣುವರ್ಧನ್, ಅಂಬರೀಷ್, ದೇವರಾಜ್, ರಾಮ್ ಕುಮಾರ್ ಮತ್ತು ಶಶಿ ಕುಮಾರ್ ನಟಿಸಿದ ಹಬ್ಬ ಚಿತ್ರವು ಸೂಪರ್ ಹಿಟ್ ಆಯ್ತು. ಅಲ್ಲಿಂದ ಮತ್ತೆ ಶಶಿ ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಆದರು.

Leave a Reply

Your email address will not be published. Required fields are marked *