ಈ ಲೇಖನದ ಮೂಲಕ ನಾವು ಕೆಲವೊಂದು ಸ್ವಾರಸ್ಯಕರವಾದ ಹಾಗೂ ಆಸಕ್ತಿಕರವಾದ ವಿಷಯಗಳ ಕುರಿತಾಗಿ ತಿಳಿದುಕೊಳ್ಳೋಣ. ಪಾನಿಪುರಿ ಅಥವಾ ಗೋಲ್ ಗಪ್ಪ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಹೇಳಿ. ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಆದರೆ ಈಗ ಕೊರೋನಾ ಕಾಲ ವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಪಾನಿಪುರಿ ಅಂಗಡಿ ಇದ್ದರು ಸಹ ಯಾರು ಕೂಡ ಹೊರಗಡೆ ಅಷ್ಟಾಗಿ ತಿನ್ನಲು ಹೋಗುತ್ತಿಲ್ಲ. ಒಂದುವೇಳೆ ಯಾರಿಗಾದರೂ ಕೊರೋನಾ ಇದ್ದರೆ ನಮಗೂ ಹರಡಬಹುದೆ ಎನ್ನುವ ಭಯ. ಆದರೆ ಗುಜರಾತಿನ ಬಾನಸ್ಕಂತ ಎಂಬ ಜಿಲ್ಲೆಗೆ ಸೇರಿದ ಇವರು ಒಂದು ಪಾನಿಪುರಿ ಎಟಿಎಂ ಅನ್ನು ತಯಾರಿಸಿದ್ದಾರೆ. ನಿಮಗೆ ಇಷ್ಟವಾದ ಪಾನಿ ಪುರಿ ಪ್ಲೇಯರ್ ಗಳ ಮೇಲೆ ಕ್ಲಿಕ್ ಮಾಡಿದರೆ ಪಾನಿಪುರಿ ಹೊರಗೆ ಬರುತ್ತದೆ.
ಕರೋನ ಕಾರಣದಿಂದಾಗಿ ನಮ್ಮ ಸರ್ಕಾರ ಪ್ರತಿಯೊಬ್ಬರು ಮಾಸ ಧರಿಸಲೇಬೇಕು ಎಂದು ಹೇಳಿದೆ. ಅದೇ ರೀತಿ ನಾವು ಕೂಡ ಮಾಸ್ಕ ಧರಿಸಿಯೇ ಓಡಾಡುತ್ತಿದ್ದೇವೆ. ಆದರೆ ಈ ಒಂದು ಮಾಸ್ಕಿ ನ ಬೆಲೆ ಮಾತ್ರ ದುಬಾರಿ. ಮಾಸ್ಕ ತೆಗೆದುಕೊಳ್ಳಲು ಕೆಲವರಿಗೆ ಸಮಸ್ಯೆ ಕೂಡ ಉಂಟಾಗುತ್ತಿದೆ ಯಾಕೆಂದರೆ ಈಗ ಯಾವುದೇ ರೀತಿಯ ಸಂಪಾದನೆ ಕೂಡ ಇಲ್ಲ. ಹೀಗಿರುವಾಗ ಮಹಾರಾಷ್ಟ್ರದ ಪುಣೆಯಲ್ಲಿರುವ ಶಂಕರ್ ಕುರಾಣೆ ಎನ್ನುವ ವ್ಯಕ್ತಿ 2,85,000 ರೂಪಾಯಿ ಕೊಟ್ಟು ಒಂದು ಗೋಲ್ಡ್ ಮಾಸ್ಕನ್ನು ಮಾಡಿಸಿಕೊಂಡಿದ್ದಾರೆ ಇದು ತುಂಬಾ ತೆಳುವಾದ ಮಾಸ್ಕ್ ಆಗಿದ್ದು, ಸಣ್ಣ ಸಣ್ಣ ರಂದ್ರಗಳು ಇವೆ ಇದರಿಂದ ಉಸಿರಾಡಲು ಯಾವುದೇ ರೀತಿಯ ಸಮಸ್ಯೆಗಳು ಇಲ್ಲಾ. ಅವರಿಗೆ ಬಂಗಾರ ಎಂದರೆ ತುಂಬಾ ಇಷ್ಟವಾಗಿದ್ದು ಮೈತುಂಬ ಬಂಗಾರವನ್ನು ಧರಿಸುತ್ತರಂತೆ. ಈ ಬಂಗಾರದ ಮಾಸ ಧರಿಸುವುದರಿಂದ ಕರೋನ ಬರುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದೇನೆ ಎಂದು ಇವರು ಹೇಳುತ್ತಾರೆ.
ಒಬ್ಬ ವ್ಯಕ್ತಿ 12 ವರ್ಷಗಳ ಕಾಲ ಒಂದು ಮನೆಗೆ ಬಾಡಿಗೆ ಕಟ್ಟಿದರೆ ಆ ಮನೆ ಬಾಡಿಗೆ ದಾರನಿಗೆ ಸ್ವಂತ ಆಗುತ್ತದೆ ಎನ್ನುವ ಮಾತು ಇದೆ. ಬಹಳಷ್ಟು ಕಡೆ ಈ ಮಾತನ್ನು ಸಾಕಷ್ಟು ಜನರ ಕೇಳಿರಬಹುದು ಆದರೆ ಈ ಮಾತು ನಿಜವಲ್ಲ ನಾವೆಷ್ಟೇ ವರ್ಷ ಬಾಡಿಗೆ ಕಟ್ಟಿದರು ಅ ಮೆನೆ ನಮಗೆ ಸ್ವಂತ ಆಗುವುದಿಲ್ಲ. ಒಂದು ವೇಳೆ ಇಂತಹ ರೂಲ್ಸ್ ಇದ್ದಿದ್ದರೆ ಯಾರು ಕೂಡ ಬಾಡಿಗೆ ಮನೆ ಏನು ಕಟ್ಟುತ್ತಲೆ ಇರಲಿಲ್ಲ ಆದರೆ ಒಬ್ಬ ವ್ಯಕ್ತಿ ಏಳು ವರ್ಷಗಳ ಕಾಲ ಒಂದು ಮನೆಗೆ ಬಾಡಿಗೆ ಕಟ್ಟಿದರೆ ಆ ವ್ಯಕ್ತಿಗೆ ಯಜಮಾನನಾಗಿ ಅಲ್ಲದೇ ಇದ್ದರೂ ಒಬ್ಬ ಬಾಡಿಗೆದಾರ ನಾಗಿ ಕೆಲವು ಹಕ್ಕುಗಳು ದೊರೆಯುತ್ತದೆ. ಬಾಡಿಗೆದಾರರನ್ನು ಯಜಮಾನ ಖಾಲಿ ಮಾಡಿಸಲು ಸಾಧ್ಯವಿಲ್ಲ. ಆದರೆ ಒಂದು ತಿಂಗಳು ಬಾಡಿಗೆ ನೀಡದ ವಿಳಂಬವಾದರೂ ಹಾಗೂ ಯಜಮಾನನ ಅನುಮತಿ ಇಲ್ಲದೆ ಮನೆಯಲ್ಲಿ ಏನಾದರೂ ಮಾಡಿದರು ಹಕ್ಕು ಹೊರಟುಹೋಗುವುದು.
ಈಗ ಮಹಿಳೆಯರು ಬಳಸುವ ಹೀಲ್ಸ್ ಅನ್ನು ಒಂದು ಕಾಲದಲ್ಲಿ ಗಂಡಸರು ಬಳಸುತ್ತಿದ್ದರು. ಏಕೆಂದರೆ ಗಂಡಸರು ಕುದುರೆ ಸವಾರಿ ಮಾಡುವಾಗ ಅವುಗಳ ಕಾಲಿಗೆ ಸಿಗುವಂತೆ ಹಾಗೂ ಅಲುಗಾಡದೆ ಇರುವಂತೆ ಈ ಹೈ ಹಿಲ್ಸ್ಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ಮಹಿಳೆಯರು ಇದನ್ನು ಒಂದು ಫ್ಯಾಶನ್ ಅಂತ ಬಳಸುತ್ತಿದ್ದಾರೆ.
ಚಂದ್ರನ ಮೇಲೆ ಸಮಾಧಿ ಮಾಡಿದ ಯೂಜೀನ್ ಶೂಮೇಕರ್ ಎಂಬ ಒಬ್ಬ ವ್ಯಕ್ತಿಯ ಬಗ್ಗೆ ಯಾರಿಗೆ ಗೊತ್ತು? ಇವರು ಗ್ರಹಗಳ ಬಗ್ಗೆ ಸಂಶೋಧನೆ ಮಾಡುತ್ತಾ ಬಹಳಷ್ಟು ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗಾಗಿ ನಾಸಾ ಇವರು ಸತ್ತಮೇಲೆ ಇವರ ಬೂದಿಯನ್ನು ಚಂದ್ರನ ಮೇಲೆ ಕಳುಹಿಸಿದ ಲುನರ್ ಪ್ರೋಸ್ಪೆಕ್ಟರ್ ಎಂಬ ಸ್ಪೇಸ್ ಡಾಕ್ಟರ್ ಸಹಾಯದಿಂದ 28 ಗ್ರಾಂ ತೂಕವಿರುವ ಶೂಮೇಕರ್ ಅವರ ಬೂದಿಯನ್ನು ಒಂದು ಕ್ಯಾಪ್ಸುಲ್ ನಲ್ಲಿ ಹಾಕಿ ಕಳುಹಿಸುತ್ತಾರೆ. ಚಂದ್ರನಿಗೆ ಸಂಬಂಧಿಸಿದ ಇನ್ನೊಂದು ವಿಷಯ ಎಂದರೆ ಮಾನವ ಚಂದ್ರನ ಮೇಲೆ ಕಾಲಿಟ್ಟ 41 ವರ್ಷಗಳು ಕಳೆದುಹೋಗಿವೆ. ವಿಶುಕುಮಾರ್ ಅವರ 41 ವರ್ಷಗಳಲ್ಲೇ ಅದ್ಭುತ ಟೆಕ್ನಾಲಜಿ ಗಳನ್ನು ಕಂಡು ಹಿಡಿದಿದ್ದು.
ಈಗ ಕಾಡುತ್ತಿರುವ ಭಯಂಕರ ಕೊರೋನಾ ಕಾಯಿಲೆಯಿಂದ ಪ್ರಪಂಚದಾದ್ಯಂತ 5 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಆದರೆ ನಮಗೆ ಗೊತ್ತಿಲ್ಲದೇ ಇರುವ ವಿಷಯ ಎಂದರೆ ಇದಕ್ಕಿಂತಲೂ ಹೆಚ್ಚು ಜನ ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. WHO ಪ್ರಕಾರ ದಿನದಲ್ಲಿ ಪ್ರತಿನಿಮಿಷಕ್ಕೆ ಪ್ರಪಂಚದಲ್ಲಿ ಯಾರೋ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ. ಇದರಿಂದ ಜನರ ಮಾನಸಿಕ ಸ್ಥಿತಿ ಎಷ್ಟು ಬಲಹೀನವಾಗಿದೆ ಎನ್ನುವುದನ್ನು ತಿಳಿಯಬಹುದು.
ಆಲ್ಕೋಹಾಲ್ ಅಥವಾ ಮಧ್ಯಪಾನ ಇದು ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ. ಇದು ನೇರವಾಗಿ ನಮ್ಮ ದೇಹದಲ್ಲಿ ಸೇರಿದ ರಕ್ತದಲ್ಲಿ ಸೇರಿಕೊಳ್ಳುತ್ತದೆ ಹಾಗಾಗಿ ಮದ್ಯಪಾನ ಮಾಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಮತ್ತು ಬರುವುದು. ಆಲ್ಕೋಹಾಲ್ ಕೋರೋನ ಗಿಂತಲೂ ಅಪಾಯವಾಗಿದೆ. 2012ರಲ್ಲಿ ಅತಿಯಾಗಿ ಸಾವನ್ನಪ್ಪಿರುವುದು ಮಧ್ಯಪಾನದಿಂದ. 2012ರಲ್ಲಿ 33 ಲಕ್ಷ ಜನ ಆಲ್ಕೋಹಾಲ್ ಸೇವನೆಯಿಂದ ಸಾವನ್ನಪ್ಪಿದ್ದಾರೆ.