ನೆಲ ಒರೆಸುವ ಮಾಪ್ ಸ್ಟಿಕ್ ಮನೆಯಲ್ಲೇ ತಯಾರಿಸಿ ಲಾಭ ಗಳಿಸೋದು ಹೇಗೆ?

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮನೆಯಲ್ಲಿ ಖಾಲಿ ಕೂತು ಬೇಜಾರ್ ಬಂದವರಿಗೆ ನಾವು ಈ ಲೇಖನದ ಮೂಲಕ ಒಂದು ಉತ್ತಮ ಬಿಸ್ನೆಸ್ ಬಗ್ಗೆ ತಿಳಿಸಿಕೊಡುತ್ತೇವೆ. ಮನೆಯಲ್ಲಿಯೇ ಈ ಬಿಸಿನೆಸ್ ಅನ್ನು ಆರಂಭ ಮಾಡಿ ಉತ್ತಮ ಸಂಪಾದನೆಯನ್ನು ಕೂಡ ಮಾಡಬಹುದು. ಅದು ಮೊಪ್ ಸ್ಟಿಕ್ ಬಿಸಿನೆಸ್ ಆಗಿದೆ. ಅಂದರೆ ನೆಲವನ್ನು ವರೆಸಿ ಕ್ಲೀನ್ ಮಾಡುವುದು. ಮನೆಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಆಫೀಸ್ಗಳಲ್ಲಿ ನೆಲವನ್ನು ಚೊಕ್ಕ ಮಾಡಲು ಇದನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ ಇದಕ್ಕೆ ಉತ್ತಮ ಡಿಮ್ಯಾಂಡ್ ಇದೆ ಅಂತ ಹೇಳಬಹುದು. ಇದರ ಮೂಲಕ ಉತ್ತಮ ಲಾಭವನ್ನು ಕೂಡ ಗಳಿಸಿಕೊಳ್ಳಬಹುದು. ಮಾಪ್ ಸ್ಟಿಕ್ ಅನ್ನು ಹೇಗೆ ತಯಾರಿಸುತ್ತಾರೆ ಇದಕ್ಕೆ ಏನಲ್ಲ ವಸ್ತುಗಳು ಬೇಕು ಇದಕ್ಕೆ ನಾವು ಮಾಡಬಹುದಾದ ಇನ್ವೆಸ್ಟ್ಮೆಂಟ್ ಎಷ್ಟು ಎಲ್ಲವನ್ನು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳೋಣ.

ಈ ಬಿಸ್ನೆಸ್ ಮಾಡಲು ನಮಗೆ ಒಂದು ಮಶೀನ್ನೀನ ಅಗತ್ಯ ಇರುತ್ತದೆ. ಇದರ ಬೆಲೆ 4000 ರೂಪಾಯಿ ಆಗುತ್ತದೆ. ಇನ್ನು ಇದರ ಕಚ್ಚಾವಸ್ತುಗಳ ವಿಷಯಕ್ಕೆ ಬಂದರೆ , ಮಾಫ್ ಅಯ್ರ್ನ್ ಬೇಕಾಗುತ್ತದೆ. ಇದರ ಬೆಲೆ ಕೆಜಿಗೆ 35 ರೂಪಾಯಿ ಆಗುತ್ತದೆ ಹಾಗೂ ಇದರ ಜೊತೆಗೆ ಮಾಪ್ ಕ್ಲಿಪ್ಪುಗಳು ಸಹ ಬೇಕಾಗುತ್ತದೆ. ಕ್ಲಿಪ್ಪು ಗಳು ಕೇವಲ 9 ರೂಪಾಯಿಗೆ ಸಿಗುತ್ತವೆ. ಇದರ ಹಾಗೆ ಸ್ಟಿಕ್ಗಳು ಸಹ ಬೇಕಾಗುತ್ತದೆ ಮಪ್ ಸ್ಟಿಕ್ ಗಳ ಬೆಲೆ 12 ರೂಪಾಯಿ ಇರುತ್ತದೆ. ಇಲ್ಲಿ ನಾವು ಮಷೀನ್ ಬಳಕೆ ಮಾಡಿಕೊಂಡು ಮಾಪ್ ಸ್ಟಿಕ್ ಅನ್ನು ಹೇಗೆ ತಯಾರಿಸುವುದು ಅಂತ ನೋಡುವುದಾದರೆ , ಮೊದಲಿಗೆ ದಾರಗಳನ್ನು ಸರಿಯಾಗಿ ಒಂದೇ ಅಳತೆಗೆ ಕತ್ತರಿಸಿಟ್ಟುಕೊಳ್ಳಬೇಕು ನಂತರ ಇನ್ನೊಂದು ಸಣ್ಣ ದಾರದ ಸಹಾಯದಿಂದ ಬಿಗಿಯಾಗಿ ಕಟ್ಟಬೇಕು. ನಂತರ ದಾರದಲ್ಲಿ ಮಧ್ಯದಲ್ಲಿ ಎರಡು ಭಾಗ ಮಾಡಿಕೊಂಡು ಒಂದು ಪಿನ್ ಅಥವಾ ಸೂಚಿಯನ್ನು ತೆಗೆದುಕೊಂಡು ಅದರಲ್ಲಿ ಕ್ಲಿಪ್ ಸೇರಿಸಿ ಮಷೀನ್ ನಲ್ಲಿ ಇಟ್ಟು ಪ್ರೆಸ್ ಮಾಡಬೇಕು ಇದರಿಂದಾಗಿ ತ್ರೆಡ್ ಕ್ಲಿಪ್ನಲ್ಲಿ ಸರಿಯಾಗಿ ಕುಳಿತುಕೊಳ್ಳುವುದು. ಕ್ಲಿಪ್ ನಲ್ಲಿ ತ್ರೆಡ್ ಸರಿಯಾಗಿ ಫಿಕ್ಸ್ ಆದನಂತರ ಸ್ಟಿಕ್ ಅನ್ನು ತೆಗೆದುಕೊಂಡು ಕ್ಲಿಪ್ ಗೆ ಜೋಡಿಸಬೇಕು. ಈ ರೀತಿಯಾಗಿ ಮಾಪ್ ಸ್ಟಿಕ್ ಗಳನ್ನು ನಾವು ಮನೆಯಲ್ಲಿಯೇ ತಯಾರಿಸಬಹುದು.

ಇನ್ನು ಇದನ್ನು ನಾವು ಎಲ್ಲಿ ಮಾರಾಟ ಮಾಡಬಹುದು ಅಂತ ನೋಡುವುದಾದರೆ, ನಮಗೆ ಒಂದು ಮಾಪ್ ಸ್ಟಿಕ್ ಅನ್ನು ತಯಾರಿಸಲು ತಗಲುವ ಖರ್ಚು 30 ರೂಪಾಯಿ ಆಗಿರುತ್ತದೆ. ಹೋಲ್ಸೇಲಾಗಿ 50 ರೂಪಾಯಿಗೆ ಇದನ್ನು ಸೇಲ್ ಮಾಡಬಹುದು ಇದರಿಂದ 20 ರೂಪಾಯಿ ಲಾಭವನ್ನು 1 ಮಾಪ್ ಸ್ಟಿಕ್ ಮೇಲೆ ಗಳಿಸಬಹುದು. ಈ ರೀತಿಯಾಗಿ ನೀವು ದಿನಕ್ಕೆ 200 ಮಾಪ್ ಸ್ಟಿಕ್ ಗಳನ್ನು ಮಾಡಿ , ಮಾರಾಟ ಮಾಡಿದರೆ ದಿನಕ್ಕೆ ನಾಲ್ಕು ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡಬಹುದು ಹಾಗೂ ತಿಂಗಳಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *