ಕರ್ಪುರ ಬಿಸಿನೆಸ್ ಮಾಡಿ ಕೈ ತುಂಬಾ ಹಣ ಗಳಿಸುವುದು ಹೇಗೆ? ತಿಳಿಯಿರಿ

0 2,651

ಲೇಖನದ ಮೂಲಕ ನಾವು ಕರ್ಪೂರದ ಬಿಸಿನೆಸ್ ಮಾಡುವುದು ಹೇಗೆ? ಈ ಬಿಸಿನೆಸ್ ಮಾಡಲು ನಾವು ಮಾಡಬಹುದಾದಂತಹ ಇನ್ವೆಸ್ಟ್ಮೆಂಟ್ ಎಷ್ಟು ಇದಕ್ಕೆ ಏನೆಲ್ಲ ಸಾಮಗ್ರಿಗಳು ಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಕರ್ಪೂರಕ್ಕೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಪ್ರತಿದಿನ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆಗೆ ಅಥವಾ ಔಷಧಿಗಳ ರೀತಿಯಲ್ಲಿ ಕರ್ಪೂರವನ್ನು ಬಳಕೆ ಮಾಡಿಯೇ ಮಾಡುತ್ತಾರೆ. ಹಾಗಾಗಿ ಕರ್ಪೂರ ಪ್ರತಿಯೊಬ್ಬರಿಗೂ ಪ್ರತಿದಿನ ಬೇಕಾಗಿರುವಂತಹ ಅಥವ ಬಳಕೆಯಾಗಲ್ಪಡುವಂತಹ ವಸ್ತುವಾಗಿದ್ದು, ಪ್ರತಿದಿನವೂ ಮಾರಾಟವಾಗುವ ವಸ್ತು ಕರ್ಪೂರ. ಪ್ರತಿದಿನ ಎಲ್ಲರಿಗೂ ಬಳಕೆ ಆಗುವಂತಹ ಕರ್ಪೂರದ ಬಿಸಿನೆಸ್ ಅನ್ನು ಹೇಗೆ ಮಾಡಬಹುದು? ಇದಕ್ಕೆ ನಾವು ಮಾಡಬಹುದಾದ ಇನ್ವೆಸ್ಟ್ಮೆಂಟ್ ಹಾಗೂ ಇದರಿಂದ ಗಳಿಸಬಹುದಾದ ಲಾಭ ಎಷ್ಟು ಅನ್ನೋದನ್ನು ವಿವರವಾಗಿ ತಿಳಿದುಕೊಳ್ಳೋಣ.

ಈ ಬಿಸಿನೆಸ್ ಮಾಡಲು ನಮಗೆ ಮುಖ್ಯವಾಗಿ ಕರ್ಪೂರದ ಪೌಡರ್ ಹಾಗೂ ಕರ್ಪೂರವನ್ನು ತಯಾರಿಸಲು ಒಂದು ಮಷೀನ್ ಬೇಕಾಗುತ್ತದೆ. ಮಶೀನ ಸಹಾಯದಿಂದ ಕರ್ಪೂರದ ಗುಳಿಗೆಗಳನ್ನು ಬೇರೆಬೇರೆ ಆಕಾರದಲ್ಲಿ ಹಾಗೂ ಗಾತ್ರದಲ್ಲಿ ತಯಾರಿಸಬಹುದು. ಇನ್ನು ಕರ್ಪೂರದ ಪುಡಿಗಳು ಹೋಲ್ಸೇಲ್ ಮಾರ್ಕೆಟ್ ನಲ್ಲಿ ಸುಲಭವಾಗಿ ದೊರೆಯುತ್ತವೆ. ಹಾಗೂ ಕರ್ಪೂರವನ್ನು ಮಾಡುವಂತಹ ಮಷೀನ್ ಗಳು 50 ಸಾವಿರದಿಂದ ಇದರ ಬೆಲೆ ಆರಂಭವಾಗುವುದು. ಕರ್ಪೂರವನ್ನು ತಯಾರಿಸಿದ ನಂತರ ಪ್ಯಾಕಿಂಗ್ ಗಾಗಿ ಬಿಪಿ ಕವರ್ ಗಳು ಅಥವಾ ಪೂಜೆಗಳು ಬೇಕಾಗುತ್ತದೆ.

ಇನ್ನು ಕರ್ಪೂರವನ್ನು ಹೇಗೆ ತಯಾರಿಸುವುದು ಅಂತ ನೋಡುವುದಾದರೆ , ಕರ್ಪೂರವನ್ನು ತಯಾರಿಸುವ ಮಷೀನ್ ಆಟೋಮೆಟಿಕ್ ಆಗಿ ಕೆಲಸ ನಿರ್ವಹಿಸುತ್ತದೆ. ಮಶೀನ ಒಂದು ಭಾಗದಲ್ಲಿ ಕರ್ಪೂರದ ಪುಡಿಯನ್ನು ಹಾಕಿದರೆ ನಂತರ ಅದು ತಾನಾಗಿಯೇ ಕರ್ಪೂರವನ್ನು ತಯಾರಿಸುತ್ತದೆ. ಇದರಿಂದ ಯಾವ ತರಹದ ಯಾವ ಆಕಾರದ ಯಾವ ಗಾತ್ರದ ಕರ್ಪೂರ ಬೇಕು ಅದನ್ನು ತಯಾರಿಸಬಹುದು.

ಮಷೀನ್ ನೀಡುವಾಗ ಅದರ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಲಾಗುತ್ತದೆ. ಇನ್ನೂ ಇದಕ್ಕೆ ನಾವು ಮಾಡಬಹುದಾದಂತಹ ಇನ್ವೆಸ್ಟ್ಮೆಂಟ್ ಎಷ್ಟು ಅಂತ ನೋಡುವುದಾದರೆ, ಮಾರ್ಕೆಟ್ನಲ್ಲಿ ಕರ್ಪೂರದ ಪೌಡರ್ ಒಂದು ಕೆಜಿಗೆ ನಾಲ್ಕು ನೂರ ಇಪ್ಪತ್ತು ರೂಪಾಯಿಗೆ ಸಿಗುತ್ತದೆ ಆದರೆ ಹೋಲ್ಸೇಲ್ ಮಾರ್ಕೆಟ್ನಲ್ಲಿ ತೆಗೆದುಕೊಂಡಾಗ 1 ಕೆಜಿ ಕರ್ಪೂರದ ಪೌಡರ್ 300 ರೂಪಾಯಿಗೆ ದೊರೆಯುತ್ತದೆ.

ಇನ್ನು ಮಷೀನ್ ಬಗ್ಗೆ ನೋಡುವುದಾದರೆ 50 ಸಾವಿರದಿಂದ ಆರಂಭವಾಗಿ ಲಕ್ಷದವರೆಗೂ ಕೂಡ ಇದರ ಬೆಲೆಯನ್ನು ಹೊಂದಿರುತ್ತದೆ. ಹಾಗಾಗಿ ಆರಂಭದಲ್ಲಿ ಮಷೀನ್ ಮತ್ತು ಕಚ್ಚಾ ಪದಾರ್ಥಗಳನ್ನು ವಸ್ತುಗಳನ್ನು ಕೊಳ್ಳುವುದಕ್ಕಾಗಿ 60 ರಿಂದ 70 ಸಾವಿರ ಇನ್ವೆಸ್ತ್ಮೆಂಟ್ ಮಾಡಬೇಕಾಗುವುದು. ಕರ್ಪೂರವನ್ನು ತಯಾರಿಸಿದ ನಂತರ ಕಿರಾಣಿ ಸ್ಟೋರ್ ಗಳು ಮಾರ್ಕೆಟ್ ಹಾಗೂ ದೇವಸ್ಥಾನದ ಹತ್ತಿರ ಇರುವ ಅಂಗಡಿಗಳಲ್ಲಿ ಕರ್ಪೂರವನ್ನು ಮಾರಾಟ ಮಾಡಬೇಕು.

ಕರ್ಪೂರ ತಯಾರಾದ ಮೇಲೆ ಅದನ್ನು ಕವರ್ ಅಥವಾ ಪೌಚಗಳಲ್ಲಿ ಪ್ಯಾಕ್ ಮಾಡಿ ಮೂರು ಕರ್ಪೂರ ಗಳನ್ನು ಹಾಕಿ ಎರಡು ರೂಪಾಯಿಗೆ ಮಾರಾಟ ಮಾಡಬಹುದು. ಇನ್ನು ಹೆಚ್ಚು ಕರ್ಪೂರ ಗಳನ್ನು ಹಾಕಿ ಪ್ಯಾಕ್ ಮಾಡಿ ಐದು ರೂಪಾಯಿ, ಹತ್ತು ರೂಪಾಯಿಗೆ ಮಾರಾಟ ಮಾಡಬಹುದು. ಸಣ್ಣ ಸಣ್ಣ ಕರ್ಪೂರ ಗಳನ್ನು ಹೆಚ್ಚು ಪ್ಯಾಕೆಟ್ ಮಾಡಿ ಹತ್ತು ರೂಪಾಯಿಗೆ ಮಾರಾಟ ಮಾಡಬಹುದು. ಪ್ರತಿದಿನ ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿ ಅಂತಹ ನೂರು ಪ್ಯಾಕೆಟ್ ಗಳನ್ನು ಮಾರಾಟ ಮಾಡಿದರೆ ದಿನಕ್ಕೆ ಸಾವಿರದ ಏಳು ನೂರು ರೂಪಾಯಿ ಲಾಭವನ್ನು ಗಳಿಸಬಹುದು. ಪ್ರತಿದಿನ ಹೆಚ್ಚು ಮಾರಾಟ ಮಾಡಿದಷ್ಟು ಹೆಚ್ಚು ಸಂಪಾದನೆಯನ್ನು ಮಾಡಬಹುದು.

Leave A Reply

Your email address will not be published.