ಈ ಲೇಖನದ ಮೂಲಕ ನಾವು ಏಲಕ್ಕಿ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ. ಇಲೈಚಿ ಅಥವಾ ಏಲಕ್ಕಿ ಎಂದು ಕರೆಯಲ್ಪಡುವ ಈ ಒಂದು ಪದಾರ್ಥ ಭಾರತೀಯ ಸಾಂಬಾರು ಪದಾರ್ಥಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದನ್ನು ಅಡುಗೆಗೆ ಮಾತ್ರ ಅಲ್ಲದೇ ನಮ್ಮ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಔಷಧಿಯಾಗಿ ಕೂಡಾ ಹೆಚ್ಚಾಗಿ ಬಳಕೆ ಮಾಡಲಾಗುವುದು. ಹಾಗಾಗಿ ಅದಕ್ಕೆ ಹೆಚ್ಚಿನ ಬೇಡಿಕೆ ಇದೆ. ಏಲಕ್ಕಿ ಬಿಸ್ನೆಸ್ ಅನ್ನು ಮಾಡಿದರೆ ಸಾಕಷ್ಟು ಲಾಭವನ್ನು ಗಳಿಸಬಹುದು.

ಎಲಕ್ಕಿಯನ್ನು ಹೆಚ್ಚು ಅಂದರೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಏಲಕ್ಕಿ ಬಿಸ್ನೆಸ್ ಅನ್ನು ಆರಂಭಿಸಬೇಕು ಅಂದರೇ ಮೊದಲಿಗೇ ನಾವು ಏಲಕ್ಕಿಯನ್ನು ಹೋಲ್ಸೇಲಾಗಿ ತೆಗೆದುಕೊಂಡಿರಬೇಕು. ಏಲಕ್ಕಿ ಫಾರ್ಮಿಂಗ್ನಲ್ಲಿ ನಾವಿದನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬೇಕು. ಅವರು ಒಂದು ಕೆಜಿಗೆ 950 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಇದೇ 1ಕೆಜಿ ಏಲಕ್ಕಿಯನ್ನು ನಾವು ಲೋಕಲ್ ಮಾರ್ಕೆಟ್ನಲ್ಲಿ ಕೊಂಡುಕೊಳ್ಳಲು ಹೋದರೆ ಒಂದು ಕೆಜಿಗೆ 4000 ದಿಂದ 4500 ರೂಪಾಯಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿಯೇ ನಾವು ತಿಳಿದುಕೊಳ್ಳಬಹುದು ಏಲಕ್ಕಿ ಬಿಸ್ನೆಸ್ ಮಾಡುವುದರಿಂದ ನಾವು ಎಷ್ಟು ಲಾಭವನ್ನು ಗಳಿಸಬಹುದು ಎನ್ನುವುದನ್ನು. ಹಾಗಾಗಿ ನಾವು ಈ ಬಿಸ್ನೆಸ್ ಮಾಡುವುದರಿಂದ ಉತ್ತಮ ಲಾಭವನ್ನು ಗಳಿಸಬಹುದು ಇದನ್ನು ಹೇಗೆ ಮಾಡುವುದು ಅನ್ನೋದನ್ನ ನೋಡೋಣ.

1ಕೆಜಿ ಏಲಕ್ಕಿ ನಮಗೆ 950 ರೂಪಾಯಿಗೆ ಹೋಲ್ಸೇಲ್ ದರದಲ್ಲಿ ಸಿಕ್ಕಿದ್ದರೆ, ಅದರ ಟ್ರಾನ್ಸ್ಪೋರ್ಟ್ ಚಾರ್ಜ್ ಹಾಕು ಪ್ಯಾಕಿಂಗ್ ಚಾರ್ಜ್ ಎಲ್ಲವನ್ನು ಸೇರಿಸಿ ಐವತ್ತು ರೂಪಾಯಿ ಆಗಬಹುದು. ಟೋಟಲ್ 1 ಕೆಜಿ ಏಲಕ್ಕಿ ಬೆಲೆ 1000 ರೂಪಾಯಿ ಆಗಬಹುದು. ಇದನ್ನು ಹೋಲ್ಸೇಲಾಗಿ ಪ್ಯಾಕಿಂಗ್ ಮಾಡಿ 3,500 ರೂಪಾಯಿಗೆ ಮಾರಾಟ ಮಾಡಬಹುದು. ರಿಟೇಲ್ ಆಗಿ ಅಂಗಡಿಗಳಲ್ಲಿ 4000 – 4500 ರೂಪಾಯಿವರೆಗೂ ಮಾರಾಟ ಮಾಡುತ್ತಾರೆ. ಇದರಿಂದ ಒಂದು ಕೆಜಿಗೆ ನಮಗೆ 2500 ರೂಪಾಯಿ ಲಾಭ ಸಿಗುತ್ತದೆ. ಈ ರೀತಿಯಾಗಿ ದಿನಕ್ಕೆ ಎರಡು ಕೆಜಿ ಏಲಕ್ಕಿಯನ್ನು ನೀವು ಮಾರಾಟ ಮಾಡಿದರೆ ದಿನಕ್ಕೆ ಐದು ಸಾವಿರ ರೂಪಾಯಿ ಸಂಪಾದನೆ ಮಾಡಬಹುದು ಹಾಗೂ ಒಂದು ತಿಂಗಳಿಗೆ ಒಂದು ಲಕ್ಷದ 50 ಸಾವಿರ ರೂಪಾಯಿಯನ್ನು ಗಳಿಸಬಹುದು. ಇನ್ನು ಈ ಎಲಕ್ಕಿಯನ್ನು ಪ್ಯಾಕ್ ಮಾಡಿ ಎಲ್ಲಿ ಮಾರಾಟ ಮಾಡಬಹುದು ಅಂತ ನೋಡುವುದಾದರೆ ಆಯುರ್ವೇದದ ಅಂಗಡಿಗಳಲ್ಲಿ, ಕಿರಾಣಿ ಸ್ಟೋರ್ ಗಳಲ್ಲಿ ಹಾಗೂ ಸೂಪರ್ಮಾರ್ಕೆಟ್ಗಳಲ್ಲಿ ಕೂಡ ಮಾರಾಟ ಮಾಡಬಹುದು.

By

Leave a Reply

Your email address will not be published. Required fields are marked *