ಪಾನ್ ಕಾರ್ಡ್ ಅಂದ್ರೆ ಏನು, ಇದು ಯಾಕೆ ಬೇಕು? ನಿಮಗಿದು ಗೊತ್ತಿರಲಿ

0 8

ಆದಾಯ ತೆರಿಗೆ ಇಲಾಖೆ ಕೊಡುವ ಪ್ಯಾನ್ ಕಾರ್ಡ್ ನಂಬರ್ ಒಂದು ಶಾಶ್ವತ ಖಾತೆ ಸಂಖ್ಯೆ ಆಗಿರುತ್ತದೆ. ಭಾರತದ ಪ್ರತಿಯೊಬ್ಬ ನಾಗರಿಕನೂ ಆದಾಯ ತೆರಿಗೆ ಕಟ್ಟುವ ಸಂದರ್ಭದಲ್ಲಿ ಹಾಗೂ ಹಣಕಾಸು ವ್ಯವಹಾರ ನಿರ್ವಹಿಸುವಾಗ ಪ್ಯಾನ್ ಕಾರ್ಡ್ ಅತ್ಯಗತ್ಯ. ಕೇವಲ ಆದಾಯ ತೆರಿಗೆ ಪಾವತಿ ಅಷ್ಟೇ ಅಲ್ಲದೇ ಇಂದು ಅನೇಕ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

ಹೀಗಾಗಿ ಪ್ಯಾನ್ ಕಾರ್ಡ್ ನ ಮೂಲಭೂತ ಅಗತ್ಯತೆ ಹಾಗೂ ಮಹತ್ವಗಳನ್ನು ಅರಿಯಬೇಕಾದ ಅವಶ್ಯಕತೆ ಇದೆ. ಶಾಶ್ವತ ಖಾತೆ ಸಂಖ್ಯೆ 10 ಅಂಕೆಗಳನ್ನು ಹೊಂದಿದ್ದು, ಆದಾಯ ತೆರಿಗೆ ಇಲಾಖೆ ಕೊಡುತ್ತದೆ. ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಲ್ ಗುರುತಿನ ಚೀಟಿ ತರಹದಲ್ಲಿ ಕೆಲಸ ಮಾಡುತ್ತದೆ.

ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು ಈ ಖಾತೆ ಆಧಾರದಲ್ಲಿಯೇ ನಡೆಯುತ್ತದೆ. ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ. ಹೊಸ ಬ್ಯಾಂಕ್ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್ ಛಾಯಾಪ್ರತಿಯನ್ನು ಕೊಡುವುದು ಅತ್ಯಗತ್ಯವಾಗಿರುತ್ತದೆ. ಇದು ಸಾರ್ವಜನಿಕ, ಖಾಸಗಿ, ಸಹಕಾರಿ ಅಥವಾ ಇನ್ಯಾವುದೇ ಬ್ಯಾಂಕುಗಳಲ್ಲಿ ಖಾತೆ ತೆರೆಯುವಾಗ ಇದನ್ನು ಸಲ್ಲಿಸಬೇಕಾಗುತ್ತದೆ.

ಇತ್ತೀಚಿಗೆ ಪ್ರಾರಂಭವಾದ ಪ್ರಧಾನ ಮಂತ್ರಿ ಜನಧನ ಯೋಜನೆಯ ಖಾತೆ ತೆರೆಯುವಾಗ ಕೆಲ ಬ್ಯಾಂಕುಗಳಿಗೆ ಕೊಡಬೇಕಾಗಿಲ್ಲ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಒದಗಿಸುವುದು ಕಡ್ಡಾಯವಾಗಿರುತ್ತದೆ. ಪಾನ್ ಕಾರ್ಡ್ ಒದಗಿಸದಿದ್ದರೆ ಅರ್ಜಿ ತಿರಸ್ಕರಿಸಲ್ಪಡುತ್ತದೆ. ಕ್ರೆಡಿಟ್ ಕಾರ್ಡ್ ತಿರಸ್ಕರಿಸಲ್ಪಡುವುದರಿಂದ ಸಾಲ ಪಡೆಯುವಾಗ ಸಮಸ್ಯೆಯಾಗಬಹುದು. ಒಂದು ವರ್ಷದಲ್ಲಿ ರೂ. 50000ಕ್ಕಿಂತ ಹೆಚ್ಚು ಪ್ರೀಮಿಯಂ ಮೊತ್ತವನ್ನು ಕಂಪನಿಗಳಿಗೆ ಕಟ್ಟುವಾಗ ವಿಮೆ ಪಾಲಿಸಿದಾರರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ವಿವರ ಒದಗಿಸಬೇಕೆಂದು CBDT (Central Board of Direct Taxes)
ಆದೇಶ ನೀಡಿದೆ.

ನೀವು ರೂ. 5,00,000ಕ್ಕಿಂತ ಹೆಚ್ಚಿನ ಮೊತ್ತದ ವಾಹನವನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಪ್ಯಾನ್ ಕಾರ್ಡ್ ಪ್ರತಿ ಒದಗಿಸುವುದು ಕಡ್ಡಾಯ. ಆಸ್ತಿ ಖರೀದಿ ಅಥವಾ ಮಾರಾಟ ರೂ. 5,00,000 ಮೀರಿದ ಆಸ್ತಿ ವ್ಯವಹಾರ ಕೈಗೊಳ್ಳುವಾಗ ಪಾನ್ ಕಾರ್ಡ್ ನಂಬರ್ ಆಸ್ತಿ ದಸ್ತಾವೇಜು ಮೇಲೆ ಉಲ್ಲೇಖಿಸುವುದು ಕಡ್ಡಾಯವಾಗಿದೆ. ಪಾನ್ ಕಾರ್ಡ್ ಇಲ್ಲದಿದ್ದಲ್ಲಿ ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಅಸಾಧ್ಯ. ಒಂದು ವೇಳೆ ಜಂಟಿ ಆಸ್ತಿಯಾಗಿದ್ದಲ್ಲಿ ಪ್ರತಿ ವ್ಯಕ್ತಿಯ ಪಾನ್ ವಿವರ ಬೇಕಾಗುತ್ತದೆ.

5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ ಖರೀದಿ ಮಾಡುವಾಗ ಗ್ರಾಹಕರು ತಮ್ಮ ಪಾನ್ ನಂಬರ್ ವಿವರ ನೀಡಬೇಕಾಗುತ್ತದೆ. ಯಾವುದೇ ಬ್ಯಾಂಕುಗಳಲ್ಲಿ ರೂ. 50,000ಕ್ಕಿಂತ ಹೆಚ್ಚಿನ ಮೊತ್ತದ ಖಾತೆ ತೆರೆಯುವಾಗ ಪಾನ್ ಕಾರ್ಡ್ ವಿವರ ಸಲ್ಲಿಸಬೇಕಾಗುತ್ತದೆ. ಪಾನ್ ವಿವರ ಸಲ್ಲಿಸಲು ವಿಫಲರಾದಲ್ಲಿ ಸ್ಥಿರ ಠೇವಣಿಯ ಬಡ್ಡಿ ಮೊತ್ತ 10,000 ರೂ. ಮೀರಿದರೆ ಶೇ. 20ರಷ್ಟು ಟಿಡಿಎಸ್ ಕಡಿತವಾಗುತ್ತದೆ. ರೂ. 50,000ಕ್ಕಿಂತ ಹೆಚ್ಚಿನ ಮೊತ್ತದ ಷೇರುಗಳು/ಮ್ಯೂಚುಯಲ್ ಫಂಡ್/ಡಿಬೆಂಚರ್ಗಳು/ ಬಾಂಡುಗಳ ವ್ಯವಹಾರದ ಸಂದರ್ಭದಲ್ಲಿ ಹೂಡಿಕೆದಾರರು ಪಾನ್ ಕಾರ್ಡ್ ಒದಗಿಸಬೇಕಾಗುತ್ತದೆ.

ಷೇರು ಮಾರುಕಟ್ಟೆ ವ್ಯವಹಾರ ಕೈಗೊಳ್ಳುವಾಗ ಖಾತೆ ತೆರೆಯಲು ಷೇರು ಬ್ರೋಕರ್ ಗೆ ಪಾನ್ ವಿವರ ಸಲ್ಲಿಸುವುದು ಕಡ್ಡಾಯವಾಗಿದೆ. ಪಾನ್ ವಿವರ ಸಲ್ಲಿಸದಿದ್ದರೆ ನಿಮ್ಮ ಅರ್ಜಿ ತಿರಸ್ಕರಿಸಲ್ಪಡುತ್ತದೆ. ಭಯೋತ್ಪಾದನೆ, ಸುಲಿಗೆ, ಮೋಸ-ವಂಚನೆ ಇತ್ಯಾದಿಗಳನ್ನು ತಪ್ಪಿಸುವ ಸಲುವಾಗಿ ಹೊಸ ದೂರವಾಣಿ ಸಂಪರ್ಕ (ಸಾಮಾನ್ಯ ಅಥವಾ ಸೆಲ್ಯೂಲರ್) ಪಡೆಯುವಾಗ ಕಡ್ಡಾಯವಾಗಿ ಪಾನ್ ವಿವರ ಒದಗಿಸಬೇಕೆಂದು ಭಾರತ ಸರ್ಕಾರ ಆದೇಶಿಸಿದೆ. ಅಂಚೆ ಕಚೇರಿ ಖಾತೆ ತೆರೆಯಲು ಬ್ಯಾಂಕುಗಳಿಗೆ ಅನ್ವಯವಾಗುವಂತೆ ರೂ. 50,000ಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರ ಠೇವಣಿ ಇಡುವಾಗ ಗ್ರಾಹಕರು ಕಡ್ಡಾಯವಾಗಿ ಪಾನ್ ವಿವರವನ್ನು ಅಂಚೆ ಕಚೇರಿಗೆ ಒದಗಿಸಬೇಕಾಗುತ್ತದೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.