ಆಸ್ಕರ್ ಪ್ರಶಸ್ತಿಯು ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾಗಿದೆ. ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ 1927ರಲ್ಲಿ ಸ್ಥಾಪನೆಯಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಅಂಡ್ ಸೈನ್ಸ್ ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೊಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಆಸ್ಕರ್ ಸಮಯ ಕಳೆದಂತೆ ತನ್ನ ಛಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ ಅದರೊಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ 24 ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಪಡೆದ ನಟನಟಿಯರಿಗೆ ಜೀವಮಾನದ ಅತ್ಯುತ್ತಮ ಸಾಧನೆಯ ಪುರಸ್ಕಾರವಾಗುತ್ತದೆ. ವಿಶ್ವಮಾನ್ಯ ಪಡೆದ ಆಸ್ಕರ್ ಪ್ರಶಸ್ತಿಯನ್ನು ಅನೇಕ ಪಾಶ್ಚಿಮಾತ್ಯ ಕಲಾವಿದರು ಪಡೆದುಕೊಂಡಿದ್ದಾರೆ. ಆದರೆ ಈ ಪ್ರಶಸ್ತಿ ಯಾವುದೇ ಒಬ್ಬ ಭಾರತೀಯ ನಟ-ನಟಿಯರಿಗೆ ಅಥವಾ ಭಾರತದಲ್ಲಿ ನಿರ್ಮಾಣವಾದ ಚಿತ್ರಕ್ಕಾಗಲಿ ದೊರೆತಿಲ್ಲ.

ಆಸ್ಕರ್ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ಮೇ 16 1929 ರಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯು ಹುಟ್ಟಿ ಬರೋಬ್ಬರಿ 91 ವರ್ಷಗಳು ತುಂಬಿದೆ. ಆಸ್ಕರ್ ಪ್ರಶಸ್ತಿಯನ್ನು ನೀಡುವುದರಲ್ಲಿ ತಾರತಮ್ಯಗಳು ನಡೆಯುತ್ತವೆ. ಈ ಪ್ರಶಸ್ತಿಯನ್ನು ನೀಡುವುದಕ್ಕಾಗಿ ಅದರದೇ ಆದ ಒಂದು ಕಮಿಟಿಯನ್ನು ಮಾಡಿಕೊಂಡಿರುತ್ತಾರೆ. ಈ ಪ್ರಶಸ್ತಿಯನ್ನು ಬಿಳಿಯರಿಗೆ ಮಾತ್ರ ನೀಡುತ್ತಾರೆ. ಏಷ್ಯಾ ಖಂಡದ ಅವರಿಗೆ ಪ್ರಶಸ್ತಿ ಸಿಗುವುದು ಕಷ್ಟ ಎಂಬ ಆರೋಪವೂ ಕೂಡ ಇದರ ಮೇಲೆ ಇದೆ. ಆಸ್ಕರ್ ಪ್ರಶಸ್ತಿಯನ್ನು ನೀಡಲು ಓಟಿಂಗ್ ನಡೆಯುತ್ತದೆ. 3000 ಓಟುಗಳನ್ನು ಪರಿಗಣಿಸಿ ಆದರ್ಶದ ಆಸ್ಕರ್ ಅವಾರ್ಡ್ ಅನ್ನು ನೀಡಲಾಗುತ್ತದೆ.

ಇದಕ್ಕೆ ವೋಟಿಂಗ್ ಮಾಡುವವರು ಪ್ರತಿಷ್ಠಿತ ಹಾಲಿವುಡ್ ನಟ-ನಟಿಯರು, ನಿರ್ಮಾಪಕರು ನಿರ್ದೇಶಕರು ಆಗಿರುತ್ತಾರೆ. ಇದರಲ್ಲಿ ವೋಟ್ ಮಾಡುವುದು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಕಲಾವಿದರು ಗಳಾಗಿರುತ್ತಾರೆ. ಆಸ್ಕರ್ ಪ್ರಶಸ್ತಿ ನೀಡುವುದು ಸಂಪೂರ್ಣ ರಾಜಕೀಯದ ನಿಲುವಿನಲ್ಲೇ ಇರುತ್ತದೆ. ಆಸ್ಕರ್ ಅವಾರ್ಡ್ ಗೆ ನಾಮಿನಿ ಆಗಿರುವವರು ಹೆಚ್ಚು ದುಡ್ಡು ಖರ್ಚುಮಾಡಿ ವೋಟಿಂಗ್ ಮಾಡುವವರನ್ನು ಸೆಳೆಯುವ ಕೆಲಸವನ್ನು ಮಾಡುತ್ತಾರೆ. ಹೀಗೆ ಪ್ರತಿಷ್ಠಿತ ಆಸ್ಕರ್ ವಾರ್ಡ್ನ ತೆರೆಮರೆಯಲ್ಲಿ ನಡೆಯುವ ಕನಿಷ್ಠ ರಾಜಕೀಯದ ಸತ್ಯವಾಗಿದೆ. ಹೀಗಾಗಿ ಭಾರತೀಯ ಅತ್ಯುತ್ತಮ ಚಿತ್ರರಂಗದ ಕಲಾವಿದರುಗಳಿಗೆ ಆಸ್ಕರ್ ಪ್ರಶಸ್ತಿ ಬರೆಯದೇ ಇರಲು ಕಾರಣವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!