ರಾಬರ್ಟ್ ದರ್ಶನ್ ಹಾಗೂ ಮಜಾಟಾಕೀಸ್ ಸೃಜಾ ಅವರ ಅಪರೂಪದ ಫೋಟೋಗಳು

0 0

ಚಾಲೆಂಜಿಂಗ್ ಸ್ಟಾರ್ ಅಭಿನಯದ ಸಿನೆಮಾ ಆದ ರಾಬರ್ಟ್ ಇತ್ತೀಚೆಗೆ ಬಿಡುಗಡೆಯಾಗಿದೆ. ಅದೆಷ್ಟೋ ದಿನಗಳಿಂದ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಆತುರದಿಂದ ಕಾಯುತ್ತಿದ್ದರು. ಈಗ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ. ಇದರಲ್ಲಿ ಹೊಸ ನಟಿಯಾದ ಆಶಾ ಭಟ್ ಅವರು ನಾಯಕಿ ನಟಿಯಾಗಿ ಬಹಳ ಚೆನ್ನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅದರಲ್ಲೂ ಈ ಸಿನಿಮಾದ ಶ್ರೇಯಾ ಘೋಷಾಲ್ ಅವರ ಹಾಡು ಅತಿ ಹೆಚ್ಚು ಹೆಸರು ಮಾಡುತ್ತಿದೆ. ಆದ್ದರಿಂದ ನಾವು ಇಲ್ಲಿ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾರ್ಬರ್ಟ್ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಒಂದು ವಾರದಲ್ಲಿ ರಾಬರ್ಟ್ ಚಿನ್ನದ ಬೆಳೆಯನ್ನೇ ತೆಗೆದಿದೆ. ಬಿಡುಗಡೆಯಾದ ಮೊದಲ ವಾರ ರಾಬರ್ಟ್ ಮಾಡಿರುವ ಕಲೆಕ್ಷನ್  ಬರೋಬ್ಬರಿ 78.36 ಕೋಟಿ ರೂಪಾಯಿ ಆಗಿದೆ. ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರ್ ಗೆ ಬಂದೇ ಬರುತ್ತಾರೆ ಎಂಬ ಮಾತಿದೆ. ಆ ನಂಬಿಕೆ ರಾಬರ್ಟ್ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ಈ ಕೊರೊನಾದ ಭಯದಲ್ಲೂ ಕೂಡ ಅಭಿಮಾನಿಗಳು ಹೆದರದೇ ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ರಾಬರ್ಟ್ ಚಿತ್ರವನ್ನ ಪ್ರೇಕ್ಷಕರು ಕೈಬಿಟ್ಟಿಲ್ಲ. ಬಾಕ್ಸ್ ಆಫೀಸ್ ನಲ್ಲಿ ರಾಬರ್ಟ್ ಸಿನೆಮಾ ಯಶಸ್ವಿಯಾಗಿದೆ.

ರಾಬರ್ಟ್ ಚಿತ್ರದ ಕನ್ನಡ ವರ್ಷನ್ ಮಾತ್ರ ಮೊದಲ ವಾರ 78.36 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ರಾಬರ್ಟ್ ಸಿನಿಮಾ ತೆಲುಗು ಭಾಷೆಯಲ್ಲೂ ತೆರೆಕಂಡಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮೊದಲ ವಾರ 7.61 ಕೋಟಿ ರೂಪಾಯಿಯನ್ನು ರಾಬರ್ಟ್ ಸಿನಿಮಾ ಕಲೆಹಾಕಿದೆ.
ಕೋವಿಡ್ ಕಾಲದಲ್ಲಿ ಕನ್ನಡದ ಚಿತ್ರವೊಂದು ಇಷ್ಟೊಂದು ಕಲೆಕ್ಷನ್ ಮಾಡಿರುವುದು ದಾಖಲೆಯೇ ಸರಿ. ಬಿಡುಗಡೆಯಾಗಿ ವಾರ ಕಳೆದರೂ ಚಿತ್ರಮಂದಿರಗಳಲ್ಲಿ ರಾಬರ್ಟ್ ಅಬ್ಬರ ಕಮ್ಮಿಯಾಗಿಲ್ಲ. ಬಹುತೇಕ ಚಿತ್ರಮಂದಿರಗಳಲ್ಲಿ ರಾಬರ್ಟ್ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಕಲರ್ಸ್ ಕನ್ನಡ ಧಾರಾವಾಹಿಯವರು ಮಜಾಟಾಕೀಜ್ ಎಂಬ ಕಾರ್ಯಕ್ರಮವನ್ನು ಮಾಡುತ್ತಾರೆ. ಇದರಲ್ಲಿ ಸೃಜನ್ ಲೋಕೇಶ್, ಮಂಡ್ಯ ರಮೇಶ್ ಮುಂತಾದವರು ತಮ್ಮ ವಿಶೇಷವಾದ ಅಭಿನಯದಿಂದ ಕಾರ್ಯಕ್ರಮವನ್ನು ಬಹಳ ಹಾಸ್ಯಮಯವಾಗಿ ಮಾಡುತ್ತಾರೆ. ಹಾಗೆಯೇ ಪ್ರತಿ ವಾರ ಈ ಕಾರ್ಯಕ್ರಮದಲ್ಲಿ ವಿಶೇಷ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಹಾಗೆಯೇ ಒಂದು ಬಾರಿ ರಾಬರ್ಟ್ ಸಿನೆಮಾ ತಂಡವನ್ನು ಸಹ ಕರೆಸಲಾಗಿತ್ತು. ಆಗ ಸೃಜನ್ ಲೋಕೇಶ್, ದರ್ಶನ್, ಮಂಡ್ಯ ರಮೇಶ್ ಮುಂತಾದವರು ಒಟ್ಟಿಗೆ ಹರಟೆ ಹೊಡೆಯುತ್ತಾ ಊಟ ಮಾಡಿದ್ದಾರೆ.

Leave A Reply

Your email address will not be published.