Ultimate magazine theme for WordPress.

25 ಕ್ರಿಕೆಟ್ ಆಟಗಾರರು ಹಾಗೂ ಅವರ ಪತ್ನಿಯರು

0 0

ಕ್ರಿಕೆಟ್ ಆಟವನ್ನು ನೋಡದೆ ಇರುವವರು ಬಹಳ ಕಡಿಮೆ. ಕ್ರಿಕೆಟ್ ಆಡುವುದು ಎಂದರೆ ಎಲ್ಲರಿಗೂ ಬಹಳ ಇಷ್ಟ. ಜಗತ್ತಿನಾದ್ಯಂತ ಉತ್ತಮ ಕ್ರಿಕೆಟ್ ಆಟಗಾರರಿದ್ದಾರೆ. ಜಗತ್ತಿನ ಬೇರೆ ಬೇರೆ ಪ್ರದೇಶದ ಪ್ರಮುಖ ಕ್ರಿಕೆಟ್ ಆಟಗಾರರ ಹೆಸರು ಹಾಗೂ ಅವರ ಪತ್ನಿಯ ಹೆಸರನ್ನು ಈ ಲೇಖನದಲ್ಲಿ ನೋಡೋಣ.

ಆಸ್ಟ್ರೇಲಿಯಾದ ಅತ್ಯುತ್ತಮ ಆಟಗಾರನಾದ ಡೇವಿಡ್ ವಾರ್ನರ್ 1986 ಅಕ್ಟೋಬರ್ 27ರಂದು ಆಸ್ಟ್ರೇಲಿಯಾದಲ್ಲಿ ಜನಿಸಿದ್ದಾರೆ. ಇವರ ಪತ್ನಿಯ ಹೆಸರು ಕ್ಯಾಂಡಿಸ್ ವಾರ್ನರ್, ಇವರು ಎಪ್ರಿಲ್ 4, 2015 ರಂದು ವಿವಾಹವಾಗಿದ್ದಾರೆ. ಇವರು ಮೂರು ಮಕ್ಕಳೊಂದಿಗೆ ಸಂತೋಷದಿಂದ ಇದ್ದಾರೆ. ವಾರ್ನರ್ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರು ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ನಿಕೋಲಸ್ ಪೂರನ್ ಇವರು ಕ್ಯಾಟ್ರಿನ್ ಮಿಗಲ್ ಅವರೊಂದಿಗೆ ವಿವಾಹವಾಗಿದ್ದಾರೆ, ಇವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

ಇವರು ಉತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್. ಇವರು 1995, ಅಕ್ಟೋಬರ್ 2 ರಂದು ಜನಿಸಿದ್ದಾರೆ. ಇವರು ಇಂಗ್ಲೆಂಡ್, ಪಾಕಿಸ್ತಾನಗಳಲ್ಲಿ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ವೆಸ್ಟ್ ಇಂಡೀಸ್ ಟೀಮ್ ನಲ್ಲಿ ಕ್ರಿಕೆಟ್ ಆಡುತ್ತಾರೆ. ಯಜುವೇಂದ್ರ್ ಚಾಹಲ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ನ ಅತ್ಯುತ್ತಮ ಕ್ರಿಕೆಟರ್. ಚಾಹಲ್ ಇವರು ಸ್ಪಿನ್ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ. ಇವರು 23 ಜನವರಿ 1999ರಲ್ಲಿ ಜನಿಸಿದ್ದಾರೆ. ಧನುಶ್ರಿ ವರ್ಮಾ ಅವರೊಂದಿಗೆ ವಿವಾಹವಾಗಿದ್ದಾರೆ. ಧನುಶ್ರಿ ಅವರು ಕೊರಿಯೋಗ್ರಾಫರ್, ಯೂಟ್ಯೂಬರ್ ಆಗಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ಇವರು ವೆಸ್ಟ್ ಇಂಡೀಸ್ ಕ್ರಿಕೆಟರ್ ಆಗಿದ್ದಾರೆ. 26 ಡಿಸೆಂಬರ್ 1996 ರಂದು ಗ್ಯಾನ್ ದೇಶದಲ್ಲಿ ಜನಿಸಿದ್ದು. ಇವರು ತಮ್ಮ 9ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡುತ್ತಿದ್ದರು. ಇವರು ಉಮ್ರಾ ನಿರ್ವಾನಿ ಅವರೊಂದಿಗೆ ವಿವಾಹವಾಗಿದ್ದಾರೆ. ಗ್ಲೇನ್ ಮ್ಯಾಕ್ಸವೆಲ್ ಇವರು ಆಸ್ಟ್ರೇಲಿಯಾದ ಇಂಟರ್ನ್ಯಾಷನಲ್ ಕ್ರಿಕೆಟರ್ ಮತ್ತು ಕ್ರಿಕೆಟ್ ನಲ್ಲಿ ಆಲರೌಂಡರ್. ಇವರು ವಿನಿ ರಾಮನ್ ಅವರೊಂದಿಗೆ ವಿವಾಹವಾಗಿದ್ದಾರೆ.

ಸೌಮ್ಯ ಸರ್ಕಾರ್ ಇವರು ಬಾಂಗ್ಲಾದೇಶದವರಾಗಿದ್ದು ಕ್ರಿಕೆಟ್ ಆಲ್-ರೌಂಡರ್ ಆಗಿದ್ದಾರೆ. ಇವರು ಅನೇಕ ದೇಶಗಳಲ್ಲಿ ತಮ್ಮ ಅತ್ಯುತ್ತಮ ಕ್ರಿಕೆಟ್ ಪ್ರದರ್ಶನ ನೀಡಿದ್ದಾರೆ. ಇವರು ಪ್ರಿಯೊಂತಿ ದೆಬನಾಥ ಪೂಜಾ ಅವರೊಂದಿಗೆ 2020 ರಲ್ಲಿ ವಿವಾಹವಾಗಿದ್ದಾರೆ. ಕ್ರಿಸ್ ಗೇಲ್ ಇವರು ವೆಸ್ಟ್ ಇಂಡೀಸ್ ಆಟಗಾರ, ಟಿ 20ಯ ಉತ್ತಮ ಬ್ಯಾಟ್ಸ್ ಮನ್. ಇವರು ನತಾಶಾ ಅವರೊಂದಿಗೆ ಮೇ 31, 2009 ರಂದು ವಿವಾಹವಾಗಿದ್ದಾರೆ. ಕೇನ್ ವಿಲಿಯಂಸನ್ ಇವರು ನ್ಯೂಜಿಲೆಂಡ್ ನ್ಯಾಷನಲ್ ಟೀಮ್ ಕ್ಯಾಪ್ಟನ್. ಇವರು ಸರ್ಹ ರಹೀಮ್ ಅವರೊಂದಿಗೆ ವಿವಾಹವಾಗಿದ್ದಾರೆ. ಸರ್ಹ ರಹೀಮ್ ಅವರು ನರ್ಸ್ ವೃತ್ತಿಯಲ್ಲಿ ಕೆಲಸ ಮಾಡುತ್ತಾರೆ. ಮಯಾಂಕ್ ಅಗ್ರವಾಲ್ ಇವರು ಇಂಡಿಯನ್ ಇಂಟರ್ನ್ಯಾಷನಲ್ ಕ್ರಿಕೆಟರ್. ಇವರು 2018ರಲ್ಲಿ ಆಶಿತಾ ಸೂದ್ ಅವರೊಂದಿಗೆ ವಿವಾಹವಾಗಿದ್ದಾರೆ. ಆಶಿತಾ ಸೂದ್ ಲಾಯರ್ ವೃತ್ತಿಯಲ್ಲಿ ಕೆಲಸ ಮಾಡುತ್ತಾರೆ. ಡೇವಿಡ್ ಮಾಲನ್ ಇವರು ಇಂಗ್ಲೆಂಡಿನ ಉತ್ತಮ ಬ್ಯಾಟ್ಸ್ ಮನ್. ಇವರು ಕ್ಲೇರಿ ಮಾಲನ್ ಅವರೊಂದಿಗೆ ವಿವಾಹವಾಗಿದ್ದಾರೆ. ಕ್ವೊಂಟಿನ್ ಡೆ ಕೊಕ್ ಸೌಥ್ ಆಫ್ರಿಕನ್ ನ್ಯಾಷನಲ್ ಟೀಮ್ ನ ಕ್ಯಾಪ್ಟನ್. ಇವರು 2016ರಲ್ಲಿ ಸಶಾ ಹರ್ಲಿ ಅವರೊಂದಿಗೆ ವಿವಾಹವಾಗಿದ್ದಾರೆ.

ನಿತೀಶ್ ರಾಣಾ ಇಂಡಿಯಾದ ಆಲ್-ರೌಂಡರ್ ಕ್ರಿಕೆಟರ್. ಇವರು 2019ರಲ್ಲಿ ಸಾಚಿ ಮಾರ್ವಾ ಅವರೊಂದಿಗೆ ವಿವಾಹವಾಗಿದ್ದಾರೆ. ಸ್ಟೀವ್ ಸ್ಮಿತ್ ಆಸ್ಟ್ರೇಲಿಯನ್ ಕ್ರಿಕೆಟ್ ಕ್ಯಾಪ್ಟನ್. ಇವರು 2018ರಲ್ಲಿ ಡಾನಿ ವಿಲ್ಲೀಸ್ ಅವರೊಂದಿಗೆ ವಿವಾಹವಾಗಿದ್ದಾರೆ. ಕ್ರಿಸ್ ಮೊರೀಸ್ ಇವರು ಸೌತ್ ಆಫ್ರಿಕನ್ ಇಂಟರ್ನ್ಯಾಷನಲ್ ಕ್ರಿಕೆಟರ್. ಇವರು ಲಿಸಾ ಅವರೊಂದಿಗೆ ವಿವಾಹವಾಗಿದ್ದಾರೆ. ಮನೀಶ್ ಪಾಂಡೆ ಇವರು ಭಾರತದ ಉತ್ತಮ ಬ್ಯಾಟ್ಸಮನ್. ಇವರು 2019ರಲ್ಲಿ ಆಶ್ರಿತಾ ಶೆಟ್ಟಿ ಅವರೊಂದಿಗೆ ವಿವಾಹವಾಗಿದ್ದಾರೆ. ಬೆನ್ ಸ್ಟೋಕ್ಸ್ ಇವರು ಇಂಗ್ಲೆಂಡ್ ನ ಟೆಸ್ಟ್ ಕ್ರಿಕೆಟರ್. ಇವರು 2017ರಲ್ಲಿ ಕ್ಲೇರ್ ಅವರೊಂದಿಗೆ ವಿವಾಹವಾಗಿದ್ದಾರೆ. ಕೆರೋನ್ ಪೊಲಾರ್ಡ್ ವೆಸ್ಟ್ ಇಂಡೀಸ್ ಕ್ರಿಕೆಟರ್ ಅಲ್ಲದೆ ಆಲ್ರೌಂಡರ್ ಕೂಡ ಹೌದು. ಇವರು 2012ರಲ್ಲಿ ಜೆನ್ನಾ ಅಲಿ ಅವರೊಂದಿಗೆ ವಿವಾಹವಾಗಿದ್ದಾರೆ. ಶಿಖರ್ ಧವನ್ ಇವರು ಉತ್ತಮ ಬ್ಯಾಟ್ಸಮನ್. ಇವರು 2012ರಲ್ಲಿ ಆಯೇಷಾ ಮುಖರ್ಜಿ ಅವರೊಂದಿಗೆ ವಿವಾಹವಾಗಿದ್ದಾರೆ.

ಆಯೇಷಾ ಅವರು ಬಾಕ್ಸರ್. ಟ್ರೆಂಟ್ ಅಲೆಕ್ಸಾಂಡರ್ ಬೋಲ್ಟ್ ನ್ಯೂಜಿಲೆಂಡ್ ಇಂಟರ್ ನ್ಯಾಷನಲ್ ಕ್ರಿಕೆಟರ್. ಇವರು 2017ರಲ್ಲಿ ಜೇರಿಟ್ ಸ್ಮಿತ್ ಅವರೊಂದಿಗೆ ವಿವಾಹವಾಗಿದ್ದಾರೆ. ಮಾರ್ಕಸ್ ಸ್ಟೊನೀಸ್ ಇವರು ಆಸ್ಟ್ರೇಲಿಯನ್ ಆಲ್-ರೌಂಡರ್. ಇವರು ಸ್ಟೆಫಾನಿಕ್ ಮುಲ್ಲರ್ ಅವರೊಂದಿಗೆ ವಿವಾಹವಾಗಿದ್ದಾರೆ. ಶಕಿಬಾ ಅಲ್ ಹಸನ್ ಇಂಟರ್ ನ್ಯಾಷನಲ್ ಕ್ರಿಕೆಟರ್. ಇವರು ಉಮ್ಮೆ ಅಹಮದ್ ಶಿಶಿರ ಅವರೊಂದಿಗೆ 2012ರಲ್ಲಿ ವಿವಾಹವಾಗಿದ್ದಾರೆ. ಉಮ್ಮೆ ಅವರು ಮೊಡೆಲ್ ಹಾಗೂ ಸಾಫ್ಟವೇರ್ ಇಂಜನಿಯರ್. ಎಬಿ ಡೇ ವಿಲ್ಲರ್ಸ್ ಸೌಥ್ ಆಫ್ರಿಕನ್ ಕ್ಯಾಪ್ಟನ್. ಇವರು 2013ರಲ್ಲಿ ಡೇನಿಲ್ಲೆ ಡೇ ವಿಲ್ಲರ್ಸ್ ಅವರೊಂದಿಗೆ ವಿವಾಹವಾಗಿದ್ದಾರೆ. ಅವರು ಸೋಶಿಯಲ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿರಾಟ್ ಕೋಹ್ಲಿ ಅವರು ಇಂಡಿಯನ್ ನ್ಯಾಷನಲ್ ಟೀಮ್ ನ ಕ್ಯಾಪ್ಟನ್. ಇವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುತ್ತಾರೆ. ಇವರು ಅನುಷ್ಕಾ ಶರ್ಮಾ ಅವರೊಂದಿಗೆ 2017ರಲ್ಲಿ ವಿವಾಹವಾಗಿದ್ದಾರೆ. ಅನುಷ್ಕಾ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಂಡ್ರೆ ರಸ್ಸೆಲ್ ಇವರು ಜಮೈಕಾದ ಉತ್ತಮ ಕ್ರಿಕೆಟ್ ಆಟಗಾರ. ಇವರು 2016ರಲ್ಲಿ ಜಸ್ಸೀಮ್ ಲೋರ ಅವರೊಂದಿಗೆ ವಿವಾಹವಾಗಿದ್ದಾರೆ. ಜಸ್ಸೀಮ್ ಅವರು ಮೊಡೆಲ್ ಹಾಗೂ ಸೆಲೆಬ್ರಿಟಿ.

Leave A Reply

Your email address will not be published.