ಗಿಡ ಮೂಲಿಕೆಗಳು ಪ್ರಕೃತಿದತ್ತವಾದವು. ವನಸ್ಪತಿಯು ಸಾಂಪ್ರದಾಯಿಕ ಅಥವಾ ಜಾನಪದ ಔಷಧ ಪ್ರಕಾರವಾಗಿದ್ದು, ಇದು ಸಸ್ಯ ಮತ್ತು ಸಸ್ಯಜನ್ಯ ಸಾರ, ಸತ್ವಗಳ ಬಳಕೆಯನ್ನವಲಂಭಿಸಿದೆ. ಈ ವನಸ್ಪತಿಯು ಸಸ್ಯಗಳ ಔಷಧಿ, ಔಷಧೀಯ ವನಸ್ಪತಿ, ಗಿಡಮೂಲಿಕೆಗಳ ಔಷಧಿ , ಮೂಲಿಕಾಶಾಸ್ತ್ರ ಮತ್ತು ಮೂಲಿಕಾ ಚಿಕಿತ್ಸೆ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ. ಇದೇನನ್ನ ಸೂಚಿಸುತ್ತದೆ ಅಂದರೆ ರೋಗ ನಿರೋಧತೆಗೆ ಅಥವಾ ರೋಗ ಬಂದಮೇಲೆ ಎರಡಕ್ಕೂ ಔಷಧಗಳು ಪ್ರಕೃತಿಯಲ್ಲಿಯೇ ಸಿದ್ಧವಾಗಿವೆ. ಕಷಾಯ ಒಂದು ಔಷಧೀಯ ಪೇಯ. ಇದನ್ನು ಸಾಮಾನ್ಯವಾಗಿ ಗಿಡ ಮೂಲಿಕೆ ಹಾಗು ಸಾಂಬಾರು ಪದಾರ್ಥಗಳ ಮಿಶ್ರಣದಿಂದ ತಯಾರಿಸುತ್ತಾರೆ. ಕಷಾಯ ಹೆಚ್ಚಾಗಿ ನೆಗಡಿ, ಕೆಮ್ಮು, ಜ್ವರ, ಮೈ ಕೈ ನೋವು ಇತ್ಯಾದಿ ಅರೋಗ್ಯ ವೈಪರೀತ್ಯಗಳಿಗೆ ರಾಮ ಬಾಣ.

ಹಲವು ಸಸ್ಯಗಳು ಮಾನವರಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಬಳಸಬಹುದಾದಂತಹ ದ್ರವ್ಯಗಳನ್ನು ಉತ್ಪಾದಿಸುತ್ತವೆ. ಇವು ಸುವಾಸನಾಯುಕ್ತ ದ್ರವ್ಯಗಳಾಗಿದ್ದು ಇವುಗಳಲ್ಲಿ ಹೆಚ್ಚಿನವುಗಳು ಫೀನಾಲ್‌ಗಳು ಮತ್ತು ಇವುಗಳ ಆಕ್ಸಿಜನ್ ಪರಮಾಣುಗಳ ಆದೇಶವನ್ನು ಹೊಂದಿದ ಉತ್ಪನ್ನಗಳಾದ ಟ್ಯಾನಿನ್‌ಗಳು. ಹೆಚ್ಚಿನವುಗಳು ಚಯಾಪಚಯ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಎರಡನೇ ದರ್ಜೆಯ ವಸ್ತುಗಳಾಗಿದ್ದು ಕೇವಲ 12,000 ದ್ರವ್ಯಗಳನ್ನು ಈವರೆಗೆ ಪತ್ತೆಹಚ್ಚಲಾಗಿದ್ದು, ಇವುಗಳನ್ನು ಒಟ್ಟು ಪರಿಮಾಣದ ಶೇಕಡಾ 10ರಷ್ಟು ಮಾತ್ರ ಎಂದು ಅಂದಾಜುಗೊಳಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅಲ್ಕಲೋಯ್ಡ್‌ಗಳಂತಹ ದ್ರವ್ಯಗಳು ಸಸ್ಯಗಳಲ್ಲಿ ಪರಭಕ್ಷಕ ಸೂಕ್ಷಾಣುಜೀವಿಗಳಿಂದ, ಕೀಟಗಳಿಂದ ಮತ್ತು ಸಸ್ಯಾಹಾರಿ ಪ್ರಾಣಿಗಳಿಂದ ರಕ್ಷಣೆಯನ್ನೊದಗಿಸುವ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತವೆ. ಗಿಡಮೂಲಿಕೆಗಳಲ್ಲಿ ಹೆಚ್ಚಿನ ಸಸ್ಯಗಳು ಮತ್ತು ಸಸ್ಯವರ್ಗಗಳು ತಮ್ಮ ಸಮೃದ್ಧಿಕಾಲದಲ್ಲಿ ಔಷಧೀಯ ಸಂಯುಕ್ತಗಳನ್ನೊದಗಿಸುವ ಆಹಾರವಾಗಿ ಮನುಷ್ಯರಿಂದ ಬಳಸಲ್ಪಡುತ್ತವೆ.

ಇನ್ನು ಸಣ್ಣ ಪುಟ್ಟ ಕಾಯಿಲೆಗಳಿಗೆ ನಾವು ಮನೆಯಲ್ಲಿಯೇ ಮಾಡಿಕೊಳ್ಳುವ ಕಶಾಯಗಳ ವಿಚಾರಕ್ಕೆ ಬಂದರೆ , ಯಾವ ಗಿಡ ಮೂಲಿಕೆಗಳು ಹಾಗು ಮಸಾಲೆ ಪದಾರ್ಥಗಳನ್ನು ಉಪಯೋಗಿಸುತ್ತೇವೆ ಅನ್ನುವುದರ ಮೇಲೆ ಕಷಾಯಗಳಲ್ಲಿ ಹಲವಾರು ಪ್ರಕಾರಗಳಿವೆ. ಹೆಚ್ಚಾಗಿ ಬಳಕೆಯಲ್ಲಿರುವ ಮಸಾಲೆ ಪದಾರ್ಥಗಳೆಂದರೆ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಕಾಳುಮೆಣಸು, ದಾಲ್ಚಿನಿ, ಅರಶಿನ ಇತ್ಯಾದಿ. ಗಿಡ ಮೂಲಿಕೆಗಳಲ್ಲಿ ತುಳಸಿ, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಲೆಮನ್ ಗ್ರಾಸ್, ಲೋಳೆಸರ, ಓಮ, ಮೆಹಂದಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇಲ್ಲಿ ನಾವು ಕೆಮ್ಮು-ಶೀತ-ನೆಗಡಿಗೆ ರಾಮಬಾಣವಾದ ಅಷ್ಟೇ ಸುಲಭವಾದ ಈರುಳ್ಳಿ ಕಷಾಯ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ಮದ್ದನ್ನು ಯಾವಾಗಲೂ ನಿಯಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದು ಇಲ್ಲಿಯೂ ಅನ್ವಯವಾಗುತ್ತದೆ.

ಕಷಾಯ ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ೩ ಗ್ಲಾಸ್ (೫೦೦ ಮಿಲಿ) ನೀರನ್ನು ಹಾಕಿ ಕುದಿಸಿ ಕುದಿಯುತ್ತಿರುವ ನೀರಿಗೆ ಸುಮಾರಾಗಿ ಅರೆದ ಒಂದು ಈರುಳ್ಳಿಯನ್ನು ಹಾಕಿ ಅದಕ್ಕೆ ಅರ್ಧ ಚಮಚ ಚಹಾ ಪುಡಿ, ಅರ್ಧ ಚಮಚ ಬೆಲ್ಲ, ಚಿಟಿಕೆಯಷ್ಟು ಅರಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಕುದಿಯುತ್ತಿರುವ ನೀರಿಗೆ ೪ ರಿಂದ ೫ ತುಳಸಿ ಎಲೆಗಳು ಹಾಗು ೫ ರಿಂದ ೬ ಮೆಹಂದಿ ಎಲೆಗಳನ್ನು ಹಾಕಿ ಚೆನ್ನಾಗಿ ಕಲಕಬೇಕು. ಪಾತ್ರೆಯಲ್ಲಿರುವ ನೀರು ಅರ್ಧಕ್ಕೆ ಅಂದರೆ ೨೫೦ ml ಬರುವಲ್ಲಿಯವರೆಗೆ ಕುದಿಸಿ ಬಿಸಿ ಕಷಾಯವನ್ನು ಶೋಧಿಸಿ ಕುಡಿಯಲು ಕೊಡಿ. ಕೆಮ್ಮು, ನೆಗಡಿಗಳಿಗೆ ಮನೆ ಔಷಧಿಯಾಗಿಯಷ್ಟೇ ತೆಗೆದುಕೊಳ್ಳಬೇಕು. ಆದರೆ ಇದನ್ನು ೨೦೦ ಮಿಲಿ ಗಿಂತ ಜಾಸ್ತಿ ಸೇವಿಸಬಾರದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!