Ultimate magazine theme for WordPress.

ಹೊಟ್ಟೆಯ ಬೊಜ್ಜು ಕರಗಿಸೋಕೆ ಸಿಂಪಲ್ ವ್ಯಾಯಾಮ

0 20

ಹೊಟ್ಟೆಯಲ್ಲಿ ಬೊಜ್ಜು ಒಂದು ಸಾಮಾನ್ಯವಾದ ಸಮಸ್ಯೆ. ಇದಕ್ಕೆ ಹಲವು ಕಾರಣಗಳಿವೆ ಜಂಕ್ ಫುಡ್ ತಿನ್ನುವುದು, ಕೆಲಸ ಮಾಡದೆ ಇರುವುದು, ಮಹಿಳೆಯರಿಗೆ ಮಗುವಾದ ನಂತರ ಹೊಟ್ಟೆಯಲ್ಲಿ ಬೊಜ್ಜು ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರ ಇಲ್ಲವೆಂದು ಅಂದುಕೊಂಡಿರುತ್ತಾರೆ ಆದರೆ ಇದಕ್ಕೂ ಪರಿಹಾರವಿದೆ ಹಾಗಾದರೆ ಹೊಟ್ಟೆ ಬೊಜ್ಜು ಕರಗಿಸಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬಹಳಷ್ಟು ಜನರಿಗೆ ಹೊಟ್ಟೆಯಲ್ಲಿ ಬೊಜ್ಜು ಬರುತ್ತದೆ. ಮಹಿಳೆಯರಿಗೆ ಮಗುವಾದ ನಂತರ ಬರುವ ಸಂಭವವಿರುತ್ತದೆ. ಒಬೆಸಿಟಿ ಸಮಸ್ಯೆಯಿಂದಲೂ ಬರುತ್ತದೆ ಅಲ್ಲದೆ ಕೆಲವರು ತೆಳ್ಳಗೆ ಇರುತ್ತಾರೆ ಆದರೆ ಅವರಿಗೆ ಹೊಟ್ಟೆ ಬೊಜ್ಜು ಬಂದಿರುತ್ತದೆ. ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಕೆಲವು ವ್ಯಾಯಾಮ ಮಾಡಬೇಕಾಗುತ್ತದೆ. ವ್ಯಾಯಾಮ ಮಾಡುವ ಮೊದಲು ಪ್ರತಿದಿನ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಆಪಲ್ ಸೈಡರ್ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು ಸ್ಟ್ರಾ ಬಳಸಿ ಕುಡಿಯುವುದು ಒಳ್ಳೆಯದು ಇದರಿಂದ ಬೊಜ್ಜು ಕರಗುತ್ತದೆ, ಪಿಂಪಲ್ಸ ಸಹ ನಿವಾರಣೆಯಾಗುತ್ತದೆ. ಮೊದಲು ಸ್ಟ್ರೇಟ್ ಆಗಿ ಮಲಗಿಕೊಂಡು ಎರಡು ಕೈಯನ್ನು ಕುತ್ತಿಗೆ ಹಿಂಭಾಗಕ್ಕೆ ಇಟ್ಟುಕೊಳ್ಳಬೇಕು ಮುಂದೆ ಬಾಗುವುದು ಹಿಂದೆ ಬಾಗುವುದು ಮಾಡಬೇಕು ಹೀಗೆ 30 ಸೆಕೆಂಡ್ ಮಾಡಬೇಕು. ಎರಡನೇಯದಾಗಿ ಮಲಗಿಕೊಂಡು ಕುತ್ತಿಗೆ ಹಿಂಭಾಗದಲ್ಲಿ ಎರಡು ಕೈಯನ್ನು ಇಟ್ಟು ಕಾಲನ್ನು ಸೈಕಲ್ ತುಳಿಯುವ ಹಾಗೆ ಮಾಡುತ್ತಿರಬೇಕು. ಮೂರನೇಯದಾಗಿ ಮಲಗಿಕೊಂಡು ಕಾಲನ್ನು ಮೇಲೆ ಎತ್ತಬೇಕು ಕುತ್ತಿಗೆಯನ್ನು ನಿಧಾನಕ್ಕೆ ಮುಂದೆ ಚಾಚಿರಬೇಕು ಕಾಲನ್ನು ಹಿಂದೆ ಮುಂದೆ ಆಡಿಸುತ್ತಿರಬೇಕು.

ನಾಲ್ಕನೇಯದಾಗಿ ಸ್ಟ್ರೇಟ್ ಆಗಿ ಮಲಗಿ ನಿಧಾನವಾಗಿ ಕಾಲನ್ನು ಮೇಲಕ್ಕೆತ್ತುವುದು ಹಾಗೂ ಕೆಳಗೆ ಇಡುವುದನ್ನು ಮಾಡಬೇಕು. ಐದನೇಯದಾಗಿ ಕಾಲನ್ನು ಅರ್ಧ ಮಡಚಿ ಸ್ಟ್ರೇಟ್ ಆಗಿ ಮಲಗಿಕೊಳ್ಳಬೇಕು ನಂತರ ಕೈಯಿಂದ ಕಾಲನ್ನು ಟಚ್ ಮಾಡಲು ಪ್ರಯತ್ನಪಡಬೇಕು. ಆರನೇಯದಾಗಿ ನಿಂತುಕೊಂಡು ಕೈಯನ್ನು ಮೇಲಕ್ಕೆತ್ತಿ ಒಮ್ಮೆ ಬಲಗಡೆ ಬಾಗಬೇಕು ಒಮ್ಮೆ ಎಡಗಡೆ ಬಾಗಬೇಕು ಈ ಮೇಲಿನ ವ್ಯಾಯಾಮವನ್ನು ಪ್ರತಿದಿನ ತಪ್ಪದೇ ಮಾಡಬೇಕು. ಹೀಗೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ಬೊಜ್ಜು ಕರಗುತ್ತದೆ. ಇದರೊಂದಿಗೆ ಧ್ಯಾನ, ಯೋಗ ಮಾಡುವುದು ಒಳ್ಳೆಯದು ಇದರಿಂದ ಮನಸ್ಸು ಸಂತೋಷವಾಗಿರುತ್ತದೆ. ಇದರೊಂದಿಗೆ ಕ್ರಮಬದ್ಧ, ಪೌಷ್ಟಿಕ ಆಹಾರವನ್ನು ಸೇವಿಸಬೇಕು.

Leave A Reply

Your email address will not be published.