ಒಳ್ಳೆ ಹುಡುಗ ಪ್ರಥಮ್ ಮದುವೆ ಆಗಿರುವ ಹುಡುಗಿ ಯಾರು? ಆಕೆ ಏನು ಓದಿದ್ದಾರೆ ಗೊತ್ತಾ..

0 2,241

Olle Huduga pratham wife: ಬಿಗ್ ಬಾಸ್ ಕನ್ನಡ ಶೋನಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ, ಲಾರ್ಡ್ ಪ್ರಥಮ್ ಸರ್ ಎಂದು ಕರೆಸಿಕೊಂಡು ಇವತ್ತಿಗೂ ಎಲ್ಲರೂ ನೆನಪು ಇಟ್ಟುಕೊಳ್ಳುವ ಹಾಗೆ ಮಾಡಿರುವವರು ಪ್ರಥಮ್. ಇವರನ್ನು ಎಲ್ಲರೂ ಒಳ್ಳೆ ಹುಡುಗ ಪ್ರಥಮ್ ಎಂದೇ ಗುರುತಿಸುತ್ತಾರೆ. ಪ್ರಥಮ್ ಅವರು ಚಿತ್ರರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ ಎಂದರೆ ತಪ್ಪಲ್ಲ.

ಇಂದು ಕೂಡ ಜನರು ಇವರು ಬಂದಿದ್ದ ಸೀಸನ್ ನೆನಪಿಟ್ಟುಕೊಂಡಿದ್ದಾರೆ. ಲಾರ್ಡ್ ಪ್ರಥಮ್ ಸರ್ ಹವಾ ಇಂದಿಗು ಯಾರು ಮರೆತಿಲ್ಲ. ತಮ್ಮ ಖಡಕ್ ಮಾತುಗಳು, ಖಂಡಿಸುತ್ತೀನಿ ಎನ್ನುವ ಮಾತಿನಿಂದಲೇ ಪ್ರಥಮ್ ಭಾರಿ ಫೇಮಸ್ ಆಗಿದ್ದರು. ಬಿಗ್ ಬಾಸ್ ಇಂದ ಹೊರಬಂದಮೇಲೆ ಪ್ರಥಮ್ ಅವರು ದೇವ್ರಂಥ ಮನುಷ್ಯ, ಕರ್ನಾಟಕದ ಅಳಿಯ ಸಿನಿಮಾಗಳ ಮೂಲಕ ಸುದ್ದಿಯಲ್ಲಿದ್ದರು.

ಇದೀಗ ಪ್ರಥಮ್ ಅವರು ಮದುವೆಯಾಗಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಇವರ ನಿಶ್ಚಿತಾರ್ಥ ನಡೆದಿತ್ತು. ಪ್ರಥಮ್ ಅವರನ್ನು ಸಂಪೂರ್ಣ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ತಂದೆ ತಾಯಿ ನೋಡಿ ಒಪ್ಪಿದ ಹುಡುಗಿಯ ಜೊತೆಗೆ ಪ್ರಥಮ್ ಅವರು ಎಂಗೇಜ್ಮೆಂಟ್ ಮಾಡಿಕೊಂಡರು, ಆಗ ಹುಡುಗಿಯ ಫೋಟೋ ಕೂಡ ಶೇರ್ ಮಾಡಿರಲಿಲ್ಲ. ಇದೀಗ ಮದುವೆ ವೇಳೆ ಪ್ರಥಮ್ ಅವರ ಹುಡುಗಿಯನ್ನು ಜನರು ನೋಡುವಂತಾಗಿದೆ.

ಅದ್ಧೂರಿಯಾಗಿಯೇ ಪ್ರಥಮ್ ಅವರ ಮದುವೆ ಆಗಿದೆ. ಇವರ ಮದುವೆಗೆ ಚಿತ್ರರಂಗ, ಕಿರುತೆರೆ ಮತ್ತು ಬೆಳ್ಳಿತೆರೆಯ ಸೆಲೆಬ್ರಿಟಿಗಳು ಬಂದು ವಿಶ್ ಮಾಡಿದ್ದಾರೆ. ಪ್ರಥಮ್ ಅವರು ಮದುವೆ ಆಗಿರುವ ಹುಡುಗಿ ಯಾರು? ಅವರ ಹೆಸರೇನು ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇದ್ದು, ಅದರ ಬಗ್ಗೆ ತಿಳಿಸುತ್ತೇವೆ ನೋಡಿ.. ಪ್ರಥಮ್ ಅವರು ಮದುವೆ ಆಗಿರುವ ಹುಡುಗಿಯ ಹೆಸರು ಭಾನುಶ್ರೀ. ಇವರು ಮಂಡ್ಯ ಜಿಲ್ಲೆಯ ಹಳ್ಳಿಯ ಹುಡುಗಿ. ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಆಗಿತ್ತಂತೆ..

ಬಿಗ್ ಬಾಸ್ ಶೋಗೆ ಪ್ರಥಮ್ ಬಂದಾಗಿನಿಂದಲು ಭಾನುಶ್ರೀ ಅವರಿಗೆ ಪ್ರಥಮ್ ಅವರನ್ನು ಕಂಡರೆ ಇಷ್ಟ ಇತ್ತಂತೆ. ಭಾನುಶ್ರೀ ಅವರು ಡಿಗ್ರಿ ಮುಗಿಸಿ, ಮಾಸ್ಟರ್ಸ್ ಮೊದಲ ವರ್ಷ ಓದುತ್ತಿದ್ದಾರಂತೆ. ಇವರು ಇನ್ನು ವಿದ್ಯಾರ್ಥಿನಿ. ಓದುವ ಜೊತೆಗೆ ಕುರಿ ಸಾಕಾಣಿಕೆಯಲ್ಲು ಆಸಕ್ತಿ ಹೊಂದಿದ್ದಾರಂತೆ ಪ್ರಥಮ್ ಅವರ ಪತ್ನಿ. ಹಳ್ಳಿಯಲ್ಲಿ ಕುರಿ ಮೇಯಿಸಿಕೊಂಡು ಇರೋದಕ್ಕೂ ರೆಡಿ ಇದ್ದಾರಂತೆ. ಪ್ರಥಮ್ ಅವರಿಗೂ ಮುಂದೆ ವ್ಯವಸಾಯ ಮಾಡಬೇಕು ಎಂದು ಆಸಕ್ತಿ ಇದೆ. ಹಾಗಾಗಿ ತಕ್ಕ ಹುಡುಗಿಯೇ ಸಿಕ್ಕಿದ್ದಾಳೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.