ಪ್ರೀತಿ ಇದ್ದರೆ ಅಲ್ಲಿ ನಂಬಿಕೆ ಎನ್ನುವುದು ಇದ್ದೆ ಇರುತ್ತದೆ. ಷ್ಯಡ್ಯಂತ್ರ ರೂಪಿಸಿ ನಿಮ್ಮನ್ನು ಬೇರೆ ಮಾಡಬೇಕೆನ್ನುವವರ ಮಧ್ಯೆ ಇದ್ದು ಗೆದ್ದು ತೋರಿಸಲು ನಿಮ್ಮ ಮಧ್ಯೆ ಪ್ರೀತಿ ಮತ್ತು ನಂಬಿಕೆ ಎರಡೂ ಮುಖ್ಯವಾಗುತ್ತದೆ.ಯಾವುದೇ ಒಂದು ಸಂಬಂಧ ತುಂಬಾ ಗಟ್ಟಿಯಾಗಿ ಬಹಳ ದಿನಗಳ ಕಾಲ ಬಾಳಿಕೆ ಬರಬೇಕು ಎಂದರೆ ಇಬ್ಬರ ಮಧ್ಯೆ ಪ್ರೀತಿ ಒಂದೇ ಸಾಲದು, ಜೊತೆಗೆ ನಂಬಿಕೆಯೂ ಬಹಳ ಮುಖ್ಯವಾಗುತ್ತದೆ. ಪ್ರೀತಿ ಮತ್ತು ನಂಬಿಕೆ ಎರಡೂ ಇಬ್ಬರನ್ನು ಭದ್ರಾವಗಿ ಬೆಸೆಯುತ್ತವೆ.ಒಂದು ಸಂಬಂಧ ಪ್ರಾರಂಭವಾಗುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಪರಿಚಯ ಇರುವುದಿಲ್ಲ ನಿಜ , ಆದರೆ ದಿನ ಕಳೆದಂತೆ ಒಬ್ಬರ ಮನಸ್ಸು ಇನ್ನೊಬ್ಬರಿಗೆ ಅರ್ಥವಾಗಲೂ ಪ್ರಾರಂಭ ಮಾಡಿದಂತೆ ನಂಬಿಕೆ ಎನ್ನುವುದು ನಿಧಾನವಾಗಿ ಚಿಗುರೊಡೆಯುತ್ತದೆ, ಹಾಗಾಗಿ ಇಬ್ಬರೂ ಕೂಡ ಇದರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ,ಪ್ರೀತಿ ಇದ್ದರೆ ಅಲ್ಲಿ ನಂಬಿಕೆ ಎನ್ನುವುದು ಇದ್ದೆ ಇರುತ್ತದೆ.

ನಿಮ್ಮ ಮೇಲೆ ಅವರಿಗೂ ಕೂಡ ಅಷ್ಟೇ ಪ್ರೀತಿ ದಿನವೂ ಹೊಸ ದಿನ ಎನ್ನುವಂತೆ ನೀವಿಬ್ಬರೂ ನೆಡೆದುಕೊಳ್ಳಬೇಕು. ಪ್ರೀತಿ ಮತ್ತು ನಂಬಿಕೆ ಎಲ್ಲಿಯವರೆಗೆ ನಿಮ್ಮಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅಲ್ಲಿಯವರೆಗೆ ನಿಮ್ಮ ಸಂಬಂಧ ಬಿರುಕು ಮೂಡದ ಭದ್ರ ಬುನಾದಿಯಾಗಿರುತ್ತದೆ. ಒಂದು ಸಂಬಂಧ ಎಂದ ಮೇಲೆ ಅದರಲ್ಲಿ ಇಬ್ಬರ ವಿಚಾರ ಧಾರೆಗಳು ಅಥವಾ ಇಷ್ಟ ಕಷ್ಟಗಳು ಒಬ್ಬರಿಂದೊಬ್ಬರಿಗೆ ಹೊಂಡುವುದಿಲ್ಲ ನಿಜ, ಹಾಗೆಂದು ಅವುಗಳನ್ನು ಸಂಪೂರ್ಣವಾಗಿ ತಿರಸ್ಕಾರ ಭಾವನೆಯಿಂದ ನೋಡಿ ಅವರ ಮನಸ್ಸಿಗೆ ಹಿಂಸೆ ನೀಡಬೇಕು ಎಂದಲ್ಲ. ಬದಲಿಗೆ ನಿಮ್ಮ ಕೈಲಾದರೆ ಹೊಂದಿಕೊಂಡು ಹೋಗುವಂತೆ ನಿಮ್ಮನ್ನು ನೀವು ಸಿದ್ಧ ಪಡಿಸಿಕೊಳ್ಳಿ. ಇಲ್ಲವೆಂದರೆ ಇಬ್ಬರೂ ಕುಳಿತು ಚರ್ಚಿಸಿ ಒಂದು ಒಮ್ಮತ ನಿರ್ಣಾಯಕ್ಕೆ ಬನ್ನಿ ಹೀಗಿದ್ದಾಗ ನಿಮ್ಮ ಮಧ್ಯೆ ಯಾವುದೇ ಸಂಧರ್ಭದಲ್ಲೂ ಕೂಡ ಜಗಳ ಆಗುವುದಿಲ್ಲ, ಬದಲಾಗಿ ನಿಮ್ಮಿಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ.

ದಾಂಪತ್ಯದಲ್ಲಿ ತುಂಬಾ ಸಂತೋಷವಾಗಿ ಇರುವ ದಂಪತಿಗಳನ್ನು ನೋಡಿದ ಕೂಡಲೇ, ಇವರು ಇಷ್ಟು ವಯಸ್ಸಾದರೂ ಹೇಗೆ ತುಂಬಾ ಸಂತೋಷವಾಗಿ ಇರುವರು ಎನ್ನುವ ಪ್ರಶ್ನೆ ಕಾಡದೆ ಇರುವುದಿಲ್ಲ.ಅದರಲ್ಲೂ 60 ದಾಟಿದ ಸಂಗಾತಿಗಳಿಬ್ಬರು ಸಂತೋಷವಾಗಿದ್ದರೆ, ಇದು ಅವರ ನಡುವಿನ ಪ್ರೀತಿಯು ಎಷ್ಟಿದೆ ಎನ್ನುವುದನ್ನು ತೋರಿಸುವುದು. ನಾವು ಕೂಡ ಇದೆ ರೀತಿ ಸಂತೋಷದಿಂದ ಇರಬೇಕು ಎಂದು ಕೆಲವರು ಬಯಸುವುದು ಸಹಜ.

ಯಾವುದೇ ಗಿಡವನ್ನು ನೆಟ್ಟ ಬಳಿಕ ಹಾಗೆ ಬಿಟ್ಟರೆ, ಅದು ಅಲ್ಲೇ ಬಾಡಿ ಹೋಗಿ ಸತ್ತು ಹೋಗುವುದು, ಸಂಬಂಧವು ಕೂಡ ಇದೆ  ರೀತಿ, ಸಂಬಂಧಕ್ಕಾಗಿ ಹೆಚ್ಚು ಸಮಯ ನೀಡಬೇಕು. ಸಂಬಂಧದಲ್ಲಿನ ಸಮಸ್ಯೆ ಹಾಗೂ ಮನಸ್ತಾಪವನ್ನು ದೂರ ಮಾಡಬೇಕು. ಒಳ್ಳೆಯ ಸಂಬಂಧವು ನೈಸರ್ಗಿಕವಾಗಿ ಬರುವುದು ಎಂದು ಕೆಲವರು ತಿಳಿದಿರುವರು. ಸಂಬಂಧವು ಕೂಡ ಒಳ್ಳೆಯ ರೀತಿಯಿಂದ ಸಾಗಬೇಕಾದರೆ ಅದಕ್ಕೆ ಆಗಾಗ ಕೆಲವೊಂದು ವಿಚಾರಗಳನ್ನು ಸರಿ ಪಡಿಸುತ್ತಿರಬೇಕು.ಜತೆಯಾಗಿ ಗುಣಮಟ್ಟದ ಸಮಯ ಕಳೆಯಲು ಯಾವುದೇ ಪರ್ಯಾಯಗಳು ಇಲ್ಲ, ನೀವು ಕೆಲವೊಂದು ಸಲ ಜತೆಯಾಗಿ ಗುಣಮಟ್ಟದ ಸಮಯ ಕಳೆಯಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!